
ಬೆಂಗಳೂರು: ಫೆಬ್ರವರಿ 13 ರಿಂದ 23ರವರೆಗೂ ನಡೆಯಲಿರುವ 75ನೇ ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಟೇಶ್ ಹೆಗ್ಡೆ ನಿರ್ದೇಶನದ ಕನ್ನಡದ 'ವಾಘಚಿಪಾಣಿ' ಪ್ರದರ್ಶನಕ್ಕೆ ಆಯ್ಕೆಯಾಗಿದೆ.
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾದ ಐದು ಖಂಡಗಳ 30 ಸಿನಿಮಾಗಳಲ್ಲಿ 'ವಾಘಚಿಪಾಣಿ' ಒಂದಾಗಿದ್ದು, ಕನ್ನಡದ ಮೊದಲ ಸಿನಿಮಾವಾಗಿದೆ.
'ವಾಘಚಿಪಾನಿ' ಹೆಗ್ಡೆಯವರ ಎರಡನೇ ಚಿತ್ರ. ಅವರ ಮೊದಲ ಚಲನಚಿತ್ರ, 'ಪೆಡ್ರೋ' ಕ್ಯಾನ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಹೆಚ್ಚು ಮೆಚ್ಚುಗೆ ಪಡೆದಿದೆ.ಇದನ್ನೂ ರಿಷಭ್ ಶೆಟ್ಟಿ ನಿರ್ಮಿಸಿದ್ದರು.
'ವಾಘಚಿಪಾಣಿಗೆ ಅನುರಾಗ್ ಕಶ್ಯಪ್ ನಿರ್ಮಾಪಕರು. ಈ ಕುರಿತು ಬರ್ಲಿನಾಲೆಯ ಹೇಳಿಕೆಯಲ್ಲಿ ಅಧಿಕೃತ ಮಾಹಿತಿ ನೀಡಿದ್ದು, ಭಾರತೀಯ ಭರವಸೆಯ ಸಿನಿಮಾ ಎಂದು ಹೇಳಲಾಗಿದೆ.
ಉತ್ತರ ಕನ್ನಡ ಜಿಲ್ಲೆ ಶಿರಸಿಯ ಒಂದು ಹಳ್ಳಿಯಿಂದ ಬಂದಿದ್ದೇನೆ, ಅದು ಗೂಗಲ್ ಮ್ಯಾಪ್‌ನಲ್ಲಿಯೂ ಸಹ ನೀವು ಪತ್ತೆಹಚ್ಚಲು ಸಾಧ್ಯವಿಲ್ಲ. ಈಗಲೂ ಅಲ್ಲಿಯೇ ವಾಸಿಸುತ್ತಿದ್ದೇನೆ. ಹೀಗಾಗಿ ನನ್ನದೇ ಆದ ಪರಿಸರ ವ್ಯವಸ್ಥೆಯನ್ನು ರಚಿಸಿಕೊಳ್ಳಬೇಕಾಯಿತು ಎಂದು ಹೆಗ್ಡೆ ತಿಳಿಸಿದ್ದಾರೆ.
Advertisement