ಸಂಚಿತ್ ಸಂಜೀವ್ ಚೊಚ್ಚಲ ಕ್ರೈಮ್ ಥ್ರಿಲ್ಲರ್ ಚಿತ್ರಕ್ಕೆ ಕರಾವಳಿ ಬೆಡಗಿ ಕಾಜಲ್ ಕುಂದರ್ ಜೋಡಿ!

ನಿರ್ದೇಶಕರು ಮತ್ತು ತಂಡವು ನನ್ನ ಹಿಂದಿನ ಕೆಲಸವನ್ನು ನೋಡಿದ್ದರು ಮತ್ತು ನಾನು ಆ ಪಾತ್ರಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತೇನೆ ಎಂದು ಭಾವಿಸಿದರು.
Kaajal Kunder, Sanchith Sanjeev
ಕಾಜಲ್ ಕುಂದರ್, ಸಂಚಿತ್ ಸಂಜೀವ್
Updated on

ನಟ ಸುದೀಪ್ ಮನೆಯ ಕುಡಿ ಸಂಚಿತ್ ಸಂಜೀವ್ ಈಗಾಗಲೇ ಚಂದನವನಕ್ಕೆ ಪದಾರ್ಪಣೆ ಮಾಡಿರುವ ವಿಚಾರ ಗೊತ್ತೇ ಇದೆ. ಹೊಸ ವರ್ಷದ ಸಂಭ್ರಮದಲ್ಲಿ ಅವರ ಹೊಸ ಸಿನಿಮಾ ಅನೌನ್ಸ್ ಆಗಿದೆ.

ವಿವೇಕ್ ನಿರ್ದೇಶನದ ಮೊದಲ ಕ್ರೈಮ್ ಥ್ರಿಲ್ಲರ್ ಚಿತ್ರದಲ್ಲಿ ಸಂಚಿತ್ ನಟಿಸಲು ಸಜ್ಜಾಗುತ್ತಿದ್ದಾರೆ. ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಮತ್ತು ಕೆಆರ್‌ಜಿ ಸ್ಟುಡಿಯೋಸ್ ನಿರ್ಮಿಸಿರುವ ಈ ಚಿತ್ರವು ಜನವರಿ 24 ರಂದು ಫರ್ಸ್ಚ್ ಲುಕ್ ಮತ್ತು ಟೈಟಲ್ ಅನ್ನು ಅದ್ಧೂರಿಯಾಗಿ ಅನಾವರಣಗೊಳಿಸಲಿದೆ.

ಮೇಘ ಮತ್ತು ಲೈನ್‌ಮ್ಯಾನ್‌ನಂತಹ ಚಿತ್ರಗಳಲ್ಲಿ ಅಸಾಂಪ್ರದಾಯಿಕ ಮತ್ತು ಅರ್ಥಪೂರ್ಣ ಪಾತ್ರಗಳಿಗೆ ಹೆಸರುವಾಸಿಯಾದ ಕಾಜಲ್ ಕುಂದರ್ ಈ ಚಿತ್ರಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಪೆಪೆ ನಟಿ ಮತ್ತೊಂದು ಕುತೂಹಲಕಾರಿ ಪಾತ್ರವನ್ನು ಜೀವಂತಗೊಳಿಸಲು ಉತ್ಸುಕರಾಗಿದ್ದಾರೆ.

ಸಿಇ ಜೊತೆ ಮಾತನಾಡಿದ ಕಾಜಲ್, "ನಿರ್ದೇಶಕರು ಮತ್ತು ತಂಡವು ನನ್ನ ಹಿಂದಿನ ಕೆಲಸವನ್ನು ನೋಡಿದ್ದರು ಮತ್ತು ನಾನು ಆ ಪಾತ್ರಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತೇನೆ ಎಂದು ಭಾವಿಸಿದರು. ವಿವೇಕ್ ನನಗೆ ಆಡಿಷನ್‌ ನೀಡಲು ಹೇಳಿದ್ದರು, ಹೀಗಾಗಿ ನಾನು ಈ ಸಿನಿಮಾದಲ್ಲಿದ್ದೇನೆ ಎಂದು ಸಂತಸ ವ್ಯಕ್ತ ಪಡಿಸಿದ್ದಾರೆ.

ಕಾಜಲ್ ಒಂದು ದಿನ ಸುದೀಪ್ ಅವರೊಂದಿಗೆ ಪರದೆಯನ್ನು ಹಂಚಿಕೊಳ್ಳುವ ಕನಸು ಕಾಣುತ್ತಿದ್ದರೂ, ಆದರೆ ಈಗ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಅವರೊಂದಿಗೆ ಪ್ರಿಯಾ ಸುದೀಪ್ ನಿರ್ಮಿಸಿರುವ ಪ್ರಾಜೆಕ್ಟ್ ಭಾಗವಾಗಲು ಸಂತೋಷ ವ್ಯಕ್ತಪಡಿಸಿದರು. "ಗುಣಮಟ್ಟ ಮತ್ತು ಕಥೆ ನಿರೂಪಣೆ ಹಾಗೂ ಗೌರವಿಸುವ ತಂಡದೊಂದಿಗೆ ಕೆಲಸ ಮಾಡುವುದು ಒಂದು ಉತ್ತಮ ಭಾವನೆ ಮತ್ತು ಪ್ರಸಿದ್ಧ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡಲು ಉತ್ಸುಕಳಾಗಿದ್ದೇನೆ ಎಂದಿದ್ದಾರೆ.

"ನಾನು ಪಕ್ಕದ ಮನೆಯ ಹುಡುಗಿಯ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ, ಇದರಲ್ಲಿ ಅಭಿನಯಕ್ಕೆ ಸಾಕಷ್ಟು ಅವಕಾಶವಿದೆ, ಇದು ನನ್ನನ್ನು ರೋಮಾಂಚನಗೊಳಿಸಿತು. ವರ್ಕ್ ಶಾಪ್ ಈಗಾಗಲೇ ನಡೆಯುತ್ತಿವೆ ಮತ್ತು ಫೆಬ್ರವರಿಯಲ್ಲಿ ಚಿತ್ರೀಕರಣ ಪ್ರಾರಂಭವಾಗುವ ಮೊದಲು ನಾನು ತಯಾರಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನಂದಿಸುತ್ತಿದ್ದೇನೆ ಎಂದಿದ್ದಾರೆ. ಈ ಯೋಜನೆಯ ಹೊರತಾಗಿ, ಕಾಜಲ್ ಬಿಳಿ ಚುಕ್ಕಿ ಹಳ್ಳಿ ಹಕ್ಕಿ ಮತ್ತು ಹೊಸ ತಂಡದ ಜೊತೆ ಹೆಸರಿಡದ ಹಾಸ್ಯ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Kaajal Kunder, Sanchith Sanjeev
ಸುದೀಪ್ ಸೋದರಳಿಯ ಸಂಚಿತ್ ಸಂಜೀವ್ ನಟನೆಯ 'ಜಿಮ್ಮಿ' ಚಿತ್ರಕ್ಕೆ ಅಧಿಕೃತ ಚಾಲನೆ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com