ಕುಂಟುತ್ತಾ ಏರ್​ಪೋರ್ಟ್​​ಗೆ ಬಂದ ನಟಿ ರಶ್ಮಿಕಾ ಮಂದಣ್ಣ: ವೀಲ್​ ಚೇರ್​ನಲ್ಲಿ ಕುಳಿತ ವಿಡಿಯೋ ವೈರಲ್

ಜಿಮ್​ನಲ್ಲಿ ವರ್ಕ್​ಔಟ್​ ಮಾಡುವಾಗ ರಶ್ಮಿಕಾ ಮಂದಣ್ಣ ಕಾಲಿಗೆ ಪೆಟ್ಟಾಗಿತ್ತು. ನಟಿ ವಿಶ್ರಾಂತಿ ಪಡೆಯುತ್ತಿದ್ದರು.
Actor Rashmika Mandanna
ನಟಿ ರಶ್ಮಿಕಾ ಮಂದಣ್ಣ
Updated on

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ 'ಸಿಕಂದರ್' ಶೂಟಿಂಗ್​ ಸಂದರ್ಭ ಗಾಯಗೊಂಡಿದ್ದರು.​ ಕಾಲಿಗೆ ಗಾಯವಾಗಿರುವುದಾಗಿ ಸ್ವತಃ ನಟಿಯೇ ತಮ್ಮ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ತಿಳಿಸಿದ್ದರು. ಇದೀಗ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಶೀಘ್ರವೇ ಚೇತರಿಸಿಕೊಳ್ಳಿ ಎಂದು ಹಾರೈಸಿದ್ದಾರೆ.

ಜಿಮ್​ನಲ್ಲಿ ವರ್ಕ್​ಔಟ್​ ಮಾಡುವಾಗ ರಶ್ಮಿಕಾ ಮಂದಣ್ಣ ಕಾಲಿಗೆ ಪೆಟ್ಟಾಗಿತ್ತು. ನಟಿ ವಿಶ್ರಾಂತಿ ಪಡೆಯುತ್ತಿದ್ದರು. ಆದ್ರೀಗ ತಮ್ಮ ಮುಂಬರುವ ಛಾವಾ ಚಿತ್ರದ ಪ್ರಚಾರ ಹಿನ್ನೆಲೆ, ಹೈದರಾಬಾದ್​ನಿಂದ ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ. ಗಾಯಗೊಂಡ ನಟಿ ಅಭಿಮಾನಿಗಳೆದುರು ಕಾಣಿಸಿಕೊಂಡಿದ್ದಾರೆ.

ರಶ್ಮಿಕಾ ಇಂದು ಹೈದರಾಬಾದ್​ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ ಕೂಡಾ ವೀಲ್​ ಚೇರ್​ನಲ್ಲಿ. ಕಾರಿನಿಂದ ಇಳಿದು ಕುಂಟುತ್ತಲೇ ನಡೆದ ನಟಿ ವೀಲ್​ ಚೇರ್​ ಮೇಲೆ ಕುಳಿತಿದ್ದಾರೆ. ನಂತರ ಅವರನ್ನು ಕರೆದೊಯ್ಯಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com