ಲಾಯರ್ ಜಗದೀಶ್ ಮೇಲೆ ಭೀಕರ ಹಲ್ಲೆ: ರಕ್ತ ಸುರಿಯುತ್ತಿದ್ರು ವಿಡಿಯೋ ಮಾಡಿ ವಾರ್ನಿಂಗ್!

Bigg Boss Kannada 11ನೇ ಆವೃತ್ತಿಯ ಮಾಜಿ ಸ್ಪರ್ಧಿ ಲಾಯರ್ ಜಗದೀಶ್ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದಾರೆ. ಕೈಕೈ ಮಿಲಾಯಿಸಿ ಬಿಗ್ ಬಾಸ್ ಮನೆಯಿಂದ ಜಗದೀಶ್ ಹೊರಬಂದಿದ್ದರು.
ಲಾಯರ್ ಜಗದೀಶ್ ಮೇಲೆ ಭೀಕರ ಹಲ್ಲೆ: ರಕ್ತ ಸುರಿಯುತ್ತಿದ್ರು ವಿಡಿಯೋ ಮಾಡಿ ವಾರ್ನಿಂಗ್!
Updated on

Bigg Boss Kannada 11ನೇ ಆವೃತ್ತಿಯ ಮಾಜಿ ಸ್ಪರ್ಧಿ ಲಾಯರ್ ಜಗದೀಶ್ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದಾರೆ. ಕೈಕೈ ಮಿಲಾಯಿಸಿ ಬಿಗ್ ಬಾಸ್ ಮನೆಯಿಂದ ಜಗದೀಶ್ ಹೊರಬಂದಿದ್ದರು. ನಂತರ ಸುಮ್ಮನಿರದೆ ಅವರಿವರ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಇನ್ನು ನಿನ್ನೆಯಷ್ಟೇ ಜಗದೀಶ್ ಅವರು ವ್ಯಕ್ತಿಯೊಬ್ಬರ ಜೊತೆ ಜಗಳವಾಗಿತ್ತು. ಇದರ ಬೆನ್ನಲ್ಲೇ ಇಂದು ಜಗದೀಶ್ ಮೇಲೆ ಭೀಕರವಾಗಿ ಹಲ್ಲೆ ಮಾಡಲಾಗಿದೆ. ಜಗದೀಶ್ ಮೂಗು, ತುಟಿಗಳಿಂದ ರಕ್ತ ಹೊರಬರುವಂತೆ ಹಲ್ಲೆ ನಡೆದಿದ್ದು, ರಕ್ತ ಸುರಿಯುತ್ತಿರುವಾಗಲೇ ಫೇಸ್​ ಬುಕ್ ಮೂಲಕ ಲೈವ್ ಬಂದು ಜಗದೀಶ್ ಮಾತನಾಡಿದ್ದಾರೆ.

ಪೊಲೀಸ್ ಜೀಪಿನಲ್ಲಿ ಕುಳಿತುಕೊಂಡೇ ಜಗದೀಶ್ ಅವರು ಲೈವ್ ಮಾಡಿದ್ದು ಇವತ್ತು ನನ್ನ ಮತ್ತು ನನ್ನ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ಆಗಿದೆ. ಪೊಲೀಸರು ಬಂದು ನಮ್ಮನ್ನು ಕಾಪಾಡಿದರು. ನನ್ನ ಸ್ಕಾರ್ಪಿಯೋ ಕಾರನ್ನು ಧ್ವಂಸ ಮಾಡಿದ್ದಾರೆ. ನನ್ನು ಗನ್ ಮ್ಯಾನ್ ಮೇಲೂ ಹಲ್ಲೆ ಮಾಡಿದ್ದಾರೆ. ಜನಪರ ಧ್ವನಿ ಎತ್ತುವರರ ಮೇಲೆ ಹಲ್ಲೆ ಆಗಿದೆ. ಎಲ್ಲಿದೆ ಕಾನೂನು ಸುವ್ಯವಸ್ಥೆ. ಸಿಎಂ ಸಿದ್ದರಾಮಯ್ಯ ಅವರೇ ಏನು ಮಾಡುತ್ತಿದ್ದೀರಿ. ಅನ್ಯಾಯದ ವಿರುದ್ಧ ಧ್ವನಿ ಎತ್ತುವವರ ಸ್ಥಿತಿ ಏನಾಗಿದೆ. ಇದು ಟೆರರಿಸ್ಟ್​ ಗಳ ರಾಜ್ಯವಾಗಿದೆ ಎಂದು ಹೇಳಿದ್ದಾರೆ.

ಲಾಯರ್ ಜಗದೀಶ್ ಮೇಲೆ ಭೀಕರ ಹಲ್ಲೆ: ರಕ್ತ ಸುರಿಯುತ್ತಿದ್ರು ವಿಡಿಯೋ ಮಾಡಿ ವಾರ್ನಿಂಗ್!
Maha Kumbh Mela: 2000 ಕೋಟಿ ರೂ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿದ್ದ ಒಂದು ಕಾಲದ ಬಾಲಿವುಡ್‌ ಬೋಲ್ಡ್ ನಟಿ ಈಗ ಸನ್ಯಾಸಿನಿ! Video

ನನ್ನನ್ನು, ನನ್ನ ಕುಟುಂಬವನ್ನು ಕೊಲ್ಲಲು ಕೆಲವು ಪುಡಿ ರೌಡಿಗಳು ನಮ್ಮ ಮೇಲೆ ದಾಳಿ ಮಾಡಿದ್ದಾರೆ. ಕರ್ನಾಟಕದಲ್ಲಿ ಪುಡಿ ರೌಡಿಗಳ ಹಾವಳಿ ಹೆಚ್ಚಾಗಿದೆ. ಸುಮಾರು 500ಕ್ಕೂ ಹೆಚ್ಚು ಜನ, ಮದ್ಯ ಸೇವಿಸಿ, ಗಾಂಜಾ ಮತ್ತಿನಲ್ಲಿ ನಮ್ಮ ಮೇಲೆ ದಾಳಿ ಮಾಡಿದ್ದಾರೆ. ನನ್ನು ಕಾಪಾಡಿ ಎಂದು ನಾನು ಗೋಗರಿಯಲ್ಲ. ನನ್ನ ಜೀವ ಹೋದರೂ ನಾನು ಯೋಚನೆ ಮಾಡಲ್ಲ. ಆದರೆ ಅನ್ಯಾಯ ಗೆಲ್ಲಬಾರದು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ನಾನು ಇವರನ್ನು ಬಿಡುವುದಿಲ್ಲ. ದಾಳಿಕೋರರ ವಿರುದ್ಧ ಠಾಣೆಯಲ್ಲಿ ದೂರು ನೀಡಿದ್ದಾಗಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com