ದಳಪತಿ ವಿಜಯ್ ಕೊನೆಯ ಚಿತ್ರದ ಟೈಟಲ್, ಪೋಸ್ಟರ್ ಬಿಡುಗಡೆ!

ಎಚ್. ವಿನೋದ್ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಸ್ಯಾಂಡಲ್ ವುಡ್ ನ ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ.
Thalapathy Vijay
ದಳಪತಿ ವಿಜಯ್
Updated on

ಚೆನ್ನೈ: ತಮಿಳಿನ ಖ್ಯಾತ ನಟ ಹಾಗೂ ತಮಿಳಗ ವೆಟ್ರಿ ಕಳಗಂ ಪಕ್ಷದ ಮುಖ್ಯಸ್ಥ ದಳಪತಿ ವಿಜಯ್ ನಟಿಸಲಿರುವ ಬಹುನಿರೀಕ್ಷಿತ ಕೊನೆಯ ಚಿತ್ರ 'ಜನ ನಾಯಕ' ಚಿತ್ರದ ಪೋಸ್ಟರ್ ಭಾನುವಾರ ಬಿಡುಗಡೆಯಾಗಿದೆ.

ಗಣರಾಜೋತ್ಸವ ಸಂದರ್ಭದಲ್ಲಿ ನಿರ್ಮಾಪಕರು ಚಿತ್ರದ ಅಧಿಕೃತ ಶೀರ್ಷಿಕೆಯನ್ನು ಬಹಿರಂಗಪಡಿಸಿದ್ದಾರೆ. ವೇದಿಕೆ ಮೇಲೆ ನಿಂತು ತಮ್ಮ ಹಿಂದೆ ನಿಂತ ನೂರಾರು ಜನರೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿರುವ ಫೋಸ್ಟರ್ ನೊಂದಿಗೆ ಚಿತ್ರದ ಹೆಸರನ್ನು ಘೋಷಿಸಿದ್ದಾರೆ.

ಎಚ್. ವಿನೋದ್ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಸ್ಯಾಂಡಲ್ ವುಡ್ ನ ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ.

Thalapathy Vijay
'ಎಲ್ಲರಿಗೂ ಎಲ್ಲವೂ': ಮೊದಲ ಭಾಷಣದಲ್ಲಿ ದಳಪತಿ ವಿಜಯ್ ರಾಜಕೀಯ ಸಿದ್ಧಾಂತ ಘೋಷಣೆ!

ಇದು ವಿಜಯ್ ಅವರ 69ನೇ ಚಿತ್ರವಾಗಿದೆ. ಜನ ನಾಯಕ ಅವರ ಕೊನೆಯ ಚಿತ್ರವಾಗಿರಲಿದ್ದು, ಬಳಿಕ ಅವರು ಸಂಪೂರ್ಣವಾಗಿ ರಾಜಕೀಯ ಜೀವನದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com