

ಬೆಂಗಳೂರು: ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ನಿರ್ದೇಶನದ ಮೊದಲ ಸಿನಿಮಾ ಓಕೆ ಚಿತ್ರೀಕರಣಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.
ಸಾಮಾಜಿಕ ಪಿಡುಗು ಆಗಿರುವ ಭ್ರೂಣಹತ್ಯೆ ಕಥೆಯನ್ನಾಧರಿಸಿರುವ ಒಕೆ ಚಲನಚಿತ್ರ ಚಿತ್ರೀಕರಣಕ್ಕೆ ಸಿಎಂ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಚಾಲನೆ ನೀಡಿದ್ದಾರೆ. ಹಂಸಲೇಖ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಚಿತ್ರಕ್ಕೆ ಚಾಲನೆ ಸಿಕ್ಕಿದ್ದು, ಸಿಹಿ ತಿನ್ನಿಸಿ ಅವರ ನೂತನ ಸಿನಿಮಾಗೆ ಸಿದ್ದರಾಮಯ್ಯ ಶುಭಕೋರಿದರು.
ನಾಡು ಕಂಡ ಅಪರೂಪದ ಸಂಗೀತಗಾರ, ಸಂಗೀತ ನಿರ್ದೇಶಕ, ಸಾವಿರಾರು ಯುವಕರನ್ನು ಬೆಳೆಸಿರುವ ಹಂಸಲೇಖ ಅವರು 75ನೇ ವರ್ಷಕ್ಕೆ ಪಾದರ್ಪಣೆ ಮಾಡುತ್ತಿರುವ ಸಂದರ್ಭ ಚಿತ್ರನಿರ್ದೇಶಕರಾಗಿ ಬಡ್ತಿ ಹೊಂದುತ್ತಿರುವುದು ಸಂತಸದ ವಿಷಯ, ಅವರ ಓಕೆ ಚಿತ್ರಕ್ಕೆ ಶುಭವಾಗಲಿ, ಚಿತ್ರ ನಿರ್ದೇಶಕರಾಗಿಯೂ ಹೆಸರು ಗಳಿಸಲಿ ಎಂದು ಶುಭಹಾರೈಸಿದರು.
Advertisement