
ಬಿಗ್ಬಾಸ್ ಕನ್ನಡ ಸೀಸನ್ 11 (Bigg Boss Kannada) ಮುಗಿದಿದ್ದು ಮತ್ತೊಂದು ಆವೃತ್ತಿಗೆ ತಯಾರಿಗಳು ಜೋರಾಗಿ ನಡೆದಿವೆ. ಇನ್ನು ಈ ಬಾರಿಯ ಬಿಗ್ ಬಾಸ್ ನಿರೂಪಣೆ ಯಾರು ಮಾಡುತ್ತಾರೆ ಎಂಬುದು ಯಕ್ಷ ಪ್ರಶ್ನೆಯಾಗಿತ್ತು. ಅದಕ್ಕೆ ಕಾರಣ ಕಿಚ್ಚ ಸುದೀಪ್ ನಿರೂಪಣೆಗೆ ಗುಡ್ ಬೈ ಹೇಳಿದ್ದರು.
ಕನ್ನಡ ಬಿಗ್ ಬಾಸ್ ಶೋ ಆರಂಭವಾದಾಗಿನಿಂದಲೂ ಸುದೀಪ್ ಅವರೇ ನಿರೂಪಣೆ ಮಾಡಿಕೊಂಡು ಬಂದಿದ್ದಾರೆ. ಅವರ ಜಾಗದಲ್ಲಿ ಮತ್ತೊಬ್ಬರನ್ನು ಊಹಿಸುವುದು ಅಸಾಧ್ಯ. ಹೀಗಿರುವಾಗ ಹೊಸ ಆವೃತ್ತಿಯ ಕುರಿತಂತೆ ಮಾಹಿತಿ ನೀಡಲು ಬಿಗ್ ಬಾಸ್ ಆಯೋಜಕರು ಇಂದು ಪತ್ರಿಕಾಗೋಷ್ಠಿ ಕರೆದಿದ್ದರು. ತಾಜ್ ಹೋಟೆಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಗ್ಬಾಸ್ ಕನ್ನಡ ಸೀಸನ್ 12 ಅನ್ನು ಕಿಚ್ಚ ಸುದೀಪ್ ಅವರೇ ಮಾಡುತ್ತಾರೆ ಎಂದು ಆಯೋಜಕರು ಘೋಷಿಸಿದರು.
Advertisement