
ನಟಿ ಸಪ್ತಮಿ ಗೌಡ ಅವರ 'ಬೆಸ್ಟ್ ಬಾಯ್ ' ಸಿಂಬಾ ನಿಧನವಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಮ್ ನಲ್ಲಿ ಭಾವುಕ ಫೋಸ್ಟ್ ಮಾಡಿದ್ದಾರೆ.
ಹೌದು. ಸಿಂಬಾ ಹೆಸರಿನ ಶ್ವಾನ ಅಗಲಿದ್ದು, ಸಿಂಬಾ ಗುಂಡು ಇಲ್ಲದ ಜಗತ್ತಿನಲ್ಲಿ ನಾವು ಬದುಕಬೇಕಾಗುತ್ತದೆ ಎಂದಿಗೂ ಊಹಿಸಿರಲಿಲ್ಲ. ನೀನು ನನ್ನ ಜೀವನದ ಅರ್ಧಕ್ಕಿಂತ ಹೆಚ್ಚು ಭಾಗವಾಗಿದ್ದೆ. ನೀನು ನಮಗೆ ನೀಡಿದ ಎಲ್ಲಾ ನೆನಪುಗಳಿಗೆ ನನ್ನ ಧನ್ಯವಾದಗಳು. ಅವು ನಮಗೆ ತುಂಬಾ ಪ್ರಿಯವಾಗಿರುತ್ತವೆ ಎಂದು ಅವರು ಹೇಳಿದ್ದಾರೆ.
ಹೇಗೆ ನಡೆಯಬೇಕು ಎಂದು ತಿಳಿದಿಲ್ಲದ ವೇಳೆ Puppyಯಾಗಿ ಮನೆಗೆ ಬಂದೆ. ಆದರೆ ನಿನ್ನ ಭೇಟಿಯಾದ ಪ್ರತಿಯೊಬ್ಬ ವ್ಯಕ್ತಿಯ ಹೃದಯದಲ್ಲಿ ಶಾಶ್ವತವಾಗಿ ಇದ್ದೀಯಾ ಎಂದು ಅವರು ನೋವು ಹಂಚಿಕೊಂಡಿದ್ದಾರೆ.
ನಾನು ನಿನ್ನ ಕಿವಿಯಲ್ಲಿ ಹಲವು ಬಾರಿ ಹೇಳಿರುವ ಎಲ್ಲಾ ವಿಷಯಗಳನ್ನು ನೆನಪಿಡು. ಮುಂದೊಂದು ದಿನ ನಿನ್ನನ್ನು ಭೇಟಿ ಮಾಡಿದಾಗ ಬಾಲ ಅಲ್ಲಾಡಿಸು, ಕಿವಿಗಳನ್ನು ನೆಟ್ಟಗೆ ಮಾಡಿಕೊಂಡು ಬಾ. ಮುಂದೊಂದು ದಿನ ನಿನಗೆ ಕೈ ತುಂಬಾ ಗೊಂಬೆ, ತಿಂಡಿ ಹಾಗೂ ಪ್ರೀತಿ ಸಿಗುವಂತೆ ನಾನು ನೋಡಿಕೊಳ್ಳುತ್ತೀನಿ ಎಂದು ಅವರು ಬರೆದುಕೊಂಡಿದ್ದಾರೆ.
Advertisement