
ಸರಿಗಮಪ ರಿಯಾಲಿಟಿ ಶೋ ಮೂಲಕ ಫೇಮಸ್ ಆಗಿರುವ ಗಾಯಕಿ ಪೃಥ್ವಿ ಭಟ್, ಮತ್ತು ಜೀ ಕನ್ನಡ ವಾಹಿನಿಯಲ್ಲಿಯೇ ಪ್ರೊಡಕ್ಷನ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಅಭಿಷೇಕ್ ಅಭಿಷೇಕ್ ಅದ್ದೂರಿಯಾಗಿ ರಿಸೆಪ್ಶನ್ ಮಾಡಿಕೊಂಡಿದ್ದಾರೆ.
ಸಿನಿಮಾ ಸೇರಿದಂತೆ ಅನೇಕ ವೇದಿಕೆ ಕಾರ್ಯಕ್ರಮಗಳಲ್ಲಿಯೂ ಹಾಡಿನ ಮೂಲಕ ಗಮನ ಸೆಳೆದಿದ್ದಾರೆ. ಮನೆಯವರ ವಿರೋಧದ ನಡುವೆಯೂ ಮಾರ್ಚ್ 27ರಂದು ಪೃಥ್ವಿ ಭಟ್ ಮತ್ತು ಅಭಿಷೇಕ್ ಪ್ರೇಮ ವಿವಾಹ ಆಗಿದ್ದರು. ಮದುವೆಯಾದ ಎರಡು ತಿಂಗಳ ನಂತರ ಇದೀಗ ಪೃಥ್ವಿ ಭಟ್ ಆರತಕ್ಷತೆ ಮಾಡಿಕೊಂಡಿದ್ದಾರೆ.
ಈ ಸಮಾರಂಭದಲ್ಲಿ ಇಡೀ ʻಜೀ ಕನ್ನಡʼ ವಾಹಿನಿಯ ತಾರೆಯರು ಭಾಗಿಯಾಗಿ ಇವರಿಬ್ಬರಿಗೆ ಶುಭ ಹಾರೈಸಿದ್ದಾರೆ. ಅಲ್ಲದೇ ಬೇರೆ ಬೇರೆ ರಿಯಾಲಿಟಿ ಶೋಗಳ ಸ್ಪರ್ಧಿಗಳು, ತೀರ್ಪುಗಾರರು, ತಂತ್ರಜ್ಞರು, ʻಬಿಗ್ ಬಾಸ್ ಕನ್ನಡ ಸೀಸನ್ 11ʼರ ವಿನ್ನರ್ ಹನುಮಂತ ಕೂಡ ಆರತಕ್ಷತೆಯಲ್ಲಿ ಭಾಗಿಯಾಗಿದ್ದರು. ಗಾಯಕ ವಿಜಯ್ ಪ್ರಕಾಶ್ ಅವರ ಪತ್ನಿ ಮಹತಿ ಮತ್ತು ಮಗಳು ಪೃಥ್ವಿ ಭಟ್ ಆರತಕ್ಷತೆ ಸಮಾರಂಭಕ್ಕೆ ಬಂದಿದ್ದರು.
ಹಂಸಲೇಖ ಪತ್ನಿ ಹಾಗೂ ಮಗಳು ಬಂದು ಪೃಥ್ವಿ ಭಟ್ ಗೆ ಹಾರೈಸಿದ್ದಾರೆ. ಪುತ್ರಿ ಪೃಥ್ವಿ ಮದುವೆಗೆ ತಂದೆ ಶಿವಪ್ರಸಾದ್ ವಿರೋಧ ವ್ಯಕ್ತಪಡಿಸಿದ್ದರು. ಈ ಸುದ್ದಿ ಭಾರಿ ವೈರಲ್ ಆಗಿತ್ತು. ಇದೀಗ ಗಾಯಕಿ ಅದ್ದೂರಿಯಾಗಿ ರಿಸೆಪ್ಷನ್ ಮಾಡಿಕೊಂಡಿದ್ದಾರೆ.
Advertisement