

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್ ಮತ್ತು ಪವಿತ್ರಾ ಗೌಡ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಈ ನಡುವೆ ದರ್ಶನ್ ಮತ್ತು ಪವಿತ್ರಾ ಗೌಡ ಅವರ ಹಳೆಯ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇವುಗಳನ್ನು ಪ್ರಾಥಮಿಕವಾಗಿ ಲೀಕ್ ಮಾಡಿದ ಫೋಟೊಗಳು ಎನ್ನಲಾಗುತ್ತಿದ್ದು, ದರ್ಶನ್ ಹಾಗೂ ಪವಿತ್ರಾ ಗೌಡ ಮದುವೆಯಾಗಿದ್ದಾರೆ ಎಂಬುವುದನ್ನು ಬಿಂಬಿಸಲು ಲೀಕ್ ಮಾಡಿರುವ ಫೋಟೋಗಳಂತೆ ಕಾಣುತ್ತಿದೆ. ಇದರಿಂದ ನಟ ದರ್ಶನ್ ಮತ್ತು ಪವಿತ್ರಾ ಗೌಡಗೆ ಹಲವು ವರ್ಷಗಳ ಹಿಂದೆಯೇ ಮದುವೆಯಾಗಿತ್ತಾ? ಎಂಬ ಚರ್ಚೆ ಶುರುವಾಗಿದೆ. ಇದಕ್ಕೆ ಕಾರಣ ಪವಿತ್ರಾ ಕೊರಳಲ್ಲಿರುವ ಅರಶಿನ ದಾರವಾಗಿದೆ.
ಪವಿತ್ರಾ ಹಾಗೂ ದರ್ಶನ್ ಬಿಳಿಯ ರೇಷ್ಮೆ ವಸ್ತ್ರದಲ್ಲಿ ವಧು-ವರರ ಅವತಾರದಲ್ಲಿದ್ದಾರೆ. ಪವಿತ್ರಾ ಕತ್ತಲ್ಲಿ ಅರಿಶಿಣ ದಾರದ ಮಾಂಗಲ್ಯ ಕಾಣುತ್ತದೆ. ಕೆನ್ನೆಗೆ ಅರಿಶಿಣ ಹಚ್ಚಿದ್ದಾರೆ, ಹಣೆಗೆ ಕುಂಕುಮವಿಟ್ಟಿದ್ದಾರೆ. ದರ್ಶನ್ ಕೂಡ ಹಣೆಗೆ ತಿಲಕವಿಟ್ಟು ಪವಿತ್ರಾ ಜತೆ ಅನ್ಯೋನ್ಯವಾಗಿ ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ. 10 ವರ್ಷಗಳ ಹಿಂದಿನ ಫೋಟೋಗಳು ಎನ್ನುವಂತೆ ಕಾಣುತ್ತಿದೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ದರ್ಶನ್ ಅವರ ವೈಯಕ್ತಿಕ ಜೀವನ ಮತ್ತು ಪವಿತ್ರಾ ಗೌಡ ಅವರೊಂದಿಗಿನ ಸಂಬಂಧದ ಬಗ್ಗೆ ಮೊದಲಿನಿಂದಲೂ ದೊಡ್ಡ ಚರ್ಚೆ ನಡೆಯುತ್ತಲೇ ಇತ್ತು. ಆದರೆ ಅವರಿಬ್ಬರೂ ಈ ಬಗ್ಗೆ ಎಲ್ಲೂ ಅಧಿಕೃತವಾಗಿ ಮಾತನಾಡಿದ್ದೇ ಇಲ್ಲ. ಇಂತಹ ಸಮಯದಲ್ಲಿ, ಇಬ್ಬರೂ ಮದುಮಕ್ಕಳಂತೆ ಕಾಣುವ ಈ ಸೆಲ್ಫಿ ಫೋಟೋಗಳು ಹೊರಬಂದಿರುವುದು ಆ ಚರ್ಚೆಯ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.
Advertisement