

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಇತ್ತ ದರ್ಶನ್ ಅಭಿಮಾನಿಗಳ ಅತಿರೇಕವೂ ದರ್ಶನ್ ಆಪ್ತರಿಗೆ ಇರಿಸು ಮುರಿಸು ತರುತ್ತಿದೆ. ಪ್ರಕರಣ ಸಂಬಂಧ ದರ್ಶನ್ ಮೊದಲ ಬಾರಿಗೆ ಜೈಲಿಗೆ ಹೋಗಿದ್ದಾಗ ರಚಿತಾ ರಾಮ್ ಸೇರಿದಂತೆ ಹಲವು ನಟ-ನಟಿಯರು ದರ್ಶನ್ ಪರ ಮಾತನಾಡಿದ್ದರೇ ಕೆಲವು ಮೌನವಾಗಿದ್ದರು. ರಚಿತಾ ರಾಮ್ ಜೈಲಿಗೆ ಹೋಗಿ ದರ್ಶನ್ ಗೆ ಸಾಂತ್ವನ ಹೇಳಿ ಬಂದಿದ್ದರು. ಆ ಬಳಿಕ ತಮ್ಮ ಕೆಲಸಗಳಲ್ಲಿ ಅವರು ಮಗ್ನರಾದರು.
ಇದೀಗ ರಚಿತ ರಾಮ್ ದುನಿಯಾ ವಿಜಯ್ ನಟನೆಯ ಲ್ಯಾಂಡ್ ಲಾರ್ಡ್ ಚಿತ್ರದಲ್ಲಿ ನಡೆಸುತ್ತಿದ್ದಾರೆ. ಇದೇ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮ ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು ನವರಂಗ್ ಥಿಯೇಟರ್ ನಲ್ಲಿ ನಡೆದಿತ್ತು. ಅಂದು ವೇದಿಕೆ ಮೇಲೆ ನಟಿ ರಚಿತಾರಾಮ್ ಮಾತನಾಡುತ್ತಿದ್ದಾಗ 'ಜೈ ಡಿ ಬಾಸ್' ಎಂದು ದರ್ಶನ್ ಅಭಿಮಾನಿಗಳು ಘೋಷಣೆ ಕೂಗಿದ್ದರು.
ಇದಕ್ಕೆ ನಟಿ ರಚಿತರಾಮ್ ಬೇಸರ ವ್ಯಕ್ತಪಡಿಸಿದ್ದು ಅರ್ಧದಲ್ಲಿಯೇ ಮಾತು ನಿಲ್ಲಿಸಿದ್ದರು. ನಾನು ನನ್ನ ಚಿತ್ರದ ಬಗ್ಗೆ ಮಾತನಾಡುತ್ತೇನೆ. ನಾನು ಮಾತನಾಡಿ ಮುಗಿಸುತ್ತೇನೆ ಎಂದು ಹೇಳಿದ್ದರು. ಆದರೂ ಅಭಿಮಾನಿಗಳು ಘೋಷಣೆ ಕೂಗುತ್ತಿದ್ದರು. ಇದರಿಂದ ರಚಿತಾರಾಮ್ ಅವರು ಬೇಸರದಿಂದ ಅರ್ಧದಲ್ಲೇ ಮಾತು ನಿಲ್ಲಿಸಿದ್ದರು. ಒಂದರ್ಥದಲ್ಲಿ ದರ್ಶನ್ ಅಭಿಮಾನಿಗಳ ಹುಚ್ಚಾಟದಿಂದ ದರ್ಶನ್ ಆಪ್ತರಿಗೆ ಇರಿಸು ಮುರಿಸು ಉಂಟು ಮಾಡುತ್ತಿದೆ.
Advertisement