

ಹಲವು ವರ್ಷಗಳಿಂದ ಡೇಟಿಂಗ್ ನಲ್ಲಿದ್ದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡಗೆ ಕಡೆಗೂ ಕಂಕಣ ಕೂಡಿ ಬಂದಿದ್ದು, ಮದುವೆ ಫಿಕ್ಸ್ ಆಗಿದೆ. ಫೆಬ್ರವರಿ 26, 2026 ರಂದು ರಾಜಸ್ಥಾನದ ಉದಯಪುರದಲ್ಲಿ ವಿವಾಹವಾಗಲಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ 'thecinegossips' ಎಂಬ ಖಾತೆಯಿಂದ ವೈರಲ್ ಆಗಿರುವ ಪೋಸ್ಟ್ ನಲ್ಲಿ ಉದಯಪುರದ ಸುಂದರ ಅರಮನೆಯಲ್ಲಿ ವಿವಾಹ ನಡೆಯಲಿದೆ ಎಂದು ಹೇಳಿಕೊಂಡಿದೆ. ಆದರೆ, ಈ ಸುದ್ದಿಯನ್ನು ರಶ್ಮಿಕಾ ಮಂದಣ್ಣ ಆಗಲಿ ಅಥವಾ ವಿಜಯ್ ದೇವರಕೊಂಡ ಆಗಲಿ ಅಧಿಕೃತವಾಗಿ ದೃಢಪಡಿಸಿಲ್ಲ ಅಥವಾ ನಿರಾಕರಿಸಿಲ್ಲ.
ಕಳೆದ ತಿಂಗಳು ಈ ಜೋಡಿಯ ನಿಶ್ಚಿತಾರ್ಥ ನಡೆದಿರುವ ಬಗ್ಗೆ ವರದಿಯಾಗಿತ್ತು. ಆದರೆ, ಈ ಬಗ್ಗೆ ಯಾರೂ ಅಧಿಕೃತವಾಗಿ ಹೇಳಿಕೊಂಡಿರಲಿಲ್ಲ.
ಹೈದರಾಬಾದ್‌ನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸಮಾರಂಭದಲ್ಲಿ ಕುಟುಂಬ ಸದಸ್ಯರು ಮತ್ತು ಬೆರಳೆಣಿಕೆಯಷ್ಟು ಆಪ್ತ ಸ್ನೇಹಿತರು ಮಾತ್ರ ಭಾಗವಹಿಸಿದ್ದರು ಎಂದು ಹೇಳಲಾಗಿತ್ತು.
ಇತ್ತೀಚೆಗೆ ಬಿಡುಗಡೆಯಾದ 'Thamma' ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ, ರಶ್ಮಿಕಾ ಅವರ ನಿಶ್ಚಿತಾರ್ಥದ ಸುತ್ತಲಿನ ವದಂತಿಗಳ ಬಗ್ಗೆ ಪ್ರಶ್ನಿಸಲಾಗಿತ್ತು. ಅವರು, ನಗುನಗುತ್ತಾ, ಎಲ್ಲರಿಗೂ ಅದರ ಬಗ್ಗೆ ತಿಳಿದಿದೆ ಎಂದು ಹೇಳಿದ್ದರು.
ಜಗಪತಿ ಬಾಬು ಅವರ ಟಾಕ್ ಶೋ ಜಯಮ್ಮು ನಿಶ್ಚಯಮ್ಮೂರ್ ನಲ್ಲಿ ರಶ್ಮಿಕಾ ತಮ್ಮ ನಿಶ್ಚಿತಾರ್ಥದ ಉಂಗುರವನ್ನು ತೋರಿಸಿದ್ದರು. ಜಗಪತಿ ಬಾಬು ರಶ್ಮಿಕಾ ಅವರನ್ನು ಬೆರಳುಗಳಲ್ಲಿರುವ ಎರಡು ಉಂಗುರಗಳ ಬಗ್ಗೆ ಕೇಳಿದಾಗ ಆ ಎರಡೂ ಉಂಗುರಗಳು ಅತ್ಯಂತ ಮುಖ್ಯವೆಂದು ರಶ್ಮಿಕಾ ಹೇಳಿದ್ದರು. ಅದರಲ್ಲಿ ಒಂದು ನಟಿಗೆ ಅತ್ಯಂತ ಮುಖ್ಯವಾಗಿದೆ ಎಂದು ಜಗಪತಿ ಬಾಬು ಹೇಳುವ ಮೂಲಕ ಅವರನ್ನು ಮತ್ತಷ್ಟು ಕಾಲೆಳೆದಿದ್ದರು. ಇದಕ್ಕೆ, ರಶ್ಮಿಕಾ ನಾಚಿಕೆಪಡುತ್ತಾ ಅದನ್ನು ಆನಂದಿಸುತ್ತಿದ್ದೇನೆ ಅಂತಾ ಹೇಳಿದ್ದರು.
Advertisement