ಕೈಗೆ ಚುಂಬಿಸಿದ ವಿಜಯ್ ದೇವರಕೊಂಡ, ನಾಚಿ ನೀರಾದ ರಶ್ಮಿಕಾ-Video Viral

ಕಳೆದ ಹಲವು ದಿನಗಳಿಂದ ಈ ಜೋಡಿಯ ವಿವಾಹದ ಸುದ್ದಿ ಹಬ್ಬಿದೆ. ದೇವರಕೊಂಡ ಸಾರ್ವಜನಿಕವಾಗಿ ರಶ್ಮಿಕಾರ ಕೈಗೆ ಮುತ್ತಿಟ್ಟರು.
Vijay Devarakonda kisses Rashmika Mandanna hand
ರಶ್ಮಿಕಾ ಕೈಗೆ ಮುತ್ತನ್ನಿಟ್ಟ ವಿಜಯ್ ದೇವರಕೊಂಡ
Updated on

‘ದಿ ಗರ್ಲ್ ಫ್ರೆಂಡ್’ (The Girlfriend) ಸಿನಿಮಾ ಸಕ್ಸಸ್ ಕಾರ್ಯಕ್ರಮ ನಿನ್ನೆ ಹೈದರಾಬಾದ್ ನಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ವಿಜಯ್ ದೇವರಕೊಂಡ, ರಶ್ಮಿಕಾ ಕೈಗೆ ಮುತ್ತು ಕೊಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ.

ಕಳೆದ ಹಲವು ದಿನಗಳಿಂದ ಈ ಜೋಡಿಯ ವಿವಾಹದ ಸುದ್ದಿ ಹಬ್ಬಿದೆ. ದೇವರಕೊಂಡ ಸಾರ್ವಜನಿಕವಾಗಿ ರಶ್ಮಿಕಾರ ಕೈಗೆ ಮುತ್ತಿಟ್ಟರು. ಈ ದೃಶ್ಯವನ್ನು ನೋಡಿದ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಸಭಾಂಗಣದಲ್ಲಿ ನಗೆಗಡಲಲ್ಲಿ ತೇಲಾಡಿದರು. ಆ ಸಮಯದಲ್ಲಿ, ರಶ್ಮಿಕಾ ನಾಚಿ ನೀರಾದರು.

Vijay Devarakonda kisses Rashmika Mandanna hand
'ವಿಜಯ್ ದೇವರಕೊಂಡ ಅಂಥವರು ಪ್ರತಿಯೊಬ್ಬರ ಜೀವನದಲ್ಲಿ ಸಿಗಬೇಕು ಎಂಬುದು ನನ್ನ ಭಾವನೆ, ಅವರು ಒಂದು ವರ': ರಶ್ಮಿಕಾ ಮಂದಣ್ಣ

ಕೊನೆಗೂ ಸಾರ್ವಜನಿಕವಾಗಿ ಒಪ್ಪಿಕೊಂಡರಲ್ಲಾ ಎಂದು ಜೋಡಿಗೆ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಇತ್ತೀಚೆಗಷ್ಟೇ ಎಂಗೇಜ್ ಮೆಂಟ್ ಮಾಡಿಕೊಂಡಿರುವ ಜೋಡಿ ಮುಂದಿನ ವರ್ಷ ಫೆಬ್ರವರಿಯಲ್ಲಿ ಹಸೆಮಣೆ ಏರಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com