BiggBoss ಮನೆಯಲ್ಲಿ ರಿಷಾ ಬಟ್ಟೆ ಮುಟ್ಟಿದ್ದಕ್ಕೆ ಗಿಲ್ಲಿ ನಟ ವಿರುದ್ಧ ಮಹಿಳಾ ಆಯೋಗಕ್ಕೆ ದೂರು!

Biggboss ಮನೆಯಲ್ಲಿ ಜಗಳ, ರಂಪಾಟ, ಕಾಮಿಡಿ ಅತಿರೇಕದ ವರ್ತನೆ ಎಲ್ಲವೂ ನಡೆಯುತ್ತಿರುತ್ತದೆ. ಕಾಮಿಡಿ ಮಾಡುತ್ತಾ ಎಲ್ಲರನ್ನೂ ರೇಗಿಸುತ್ತ ಗಿಲ್ಲಿ ನಟ ಮನೆ ತುಂಬಾ ಓಡಾಡಿಕೊಂಡಿರುತ್ತಾರೆ.
Risha Gowda-Gilli Nata
ರಿಷಾ ಗೌಡ-ಗಿಲ್ಲಿ ನಟ
Updated on

ಬೆಂಗಳೂರು: Biggboss ಮನೆಯಲ್ಲಿ ಜಗಳ, ರಂಪಾಟ, ಕಾಮಿಡಿ ಅತಿರೇಕದ ವರ್ತನೆ ಎಲ್ಲವೂ ನಡೆಯುತ್ತಿರುತ್ತದೆ. ಕಾಮಿಡಿ ಮಾಡುತ್ತಾ ಎಲ್ಲರನ್ನೂ ರೇಗಿಸುತ್ತ ಗಿಲ್ಲಿ ನಟ ಮನೆ ತುಂಬಾ ಓಡಾಡಿಕೊಂಡಿರುತ್ತಾರೆ. ಆದರೆ ಒಂದು ದಿನ ಪ್ರತಿಸ್ಪರ್ಧಿ ರಿಷಾ ಅವರು ಗಿಲ್ಲಿ ನಟನ ತಾಳ್ಮೆ ಕೆಡುವಂತೆ ನಡೆದುಕೊಂಡಿದ್ದರು. ಬಕೆಟ್ ನೀರು ವಿಚಾರಕ್ಕೆ ಇಬ್ಬರ ನಡುವೆ ಕಿತ್ತಾಟ ಶುರುವಾಗಿತ್ತು.

ಸ್ನಾನಕ್ಕೆ ಹೋಗುವ ಮುನ್ನ ರಿಷಾಳನ್ನು ಗಿಲ್ಲಿ ನಟ ಬಕೆಟ್ ನೀರು ಕೊಡುವಂತೆ ಕೇಳಿದ್ದನು. ಆದರೆ ರಿಷಾ ನೀರು ಕೊಡದೆ ಸ್ನಾನ ಮಾಡಲು ಮುಂದಾದರು. ಸ್ವಲ್ಪ ಸಮಯ ನಂತರ ಗಿಲ್ಲಿ ನಟ ಈಗಲೇ ಬಕೆಟ್ ನೀರು ಕೊಡುವಂತೆ ಒತ್ತಾಯಿಸಿದರು. ಆಗ ರಿಷಾ ಸ್ನಾನ ಮಾಡುತ್ತಿದ್ದೇನೆ. ಸ್ನಾನವಾದ ನಂತರ ನೀರು ಕೊಡುತ್ತೇನೆ ಎಂದರು. ಅದಕ್ಕೆ ಗಿಲ್ಲಿ ನಟ ಮಲಗುವ ಕೋಣೆಗೆ ಬಂದು ರಿಷಾಳ ಬಟ್ಟೆಗಳನ್ನು ತೆಗೆದುಕೊಂಡು ಹೋಗಿ ಸ್ನಾನದ ಕೋಣೆಯ ಬಳಿ ಹಾಕಿದ್ದನು.

ಸ್ನಾನ ಮಾಡಿ ಹೊರಬಂದ ರಿಷಾ ತನ್ನ ಬಟ್ಟೆಗಳು ನೆಲದ ಮೇಲೆ ಬಿದ್ದಿರುವುದನ್ನು ಕಂಡು ಆಕ್ರೋಶಗೊಂಡು ಗಲ್ಲಿ ನಟನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಳು. ನೀನು ಈಗೇ ಮಾಡುತ್ತೀಯಾ ಅಂದುಕೊಂಡಿರಲಿಲ್ಲ. ನೀನು ಮಾಡಿದ್ದು ಸರಿಯಿಲ್ಲ ಎಂದು ಗಿಲ್ಲಿ ನಟನನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಈ ಘಟನೆ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದು ಮಹಿಳಾ ಆಯೋಗದ ಮೆಟ್ಟಿಲೇರಿದೆ. ಗಿಲ್ಲಿ ನಟ ರಿಷಾಳ ಬಟ್ಟೆಗಳನ್ನು ಮುಟ್ಟಿದ್ದು ಸರಿಯಲ್ಲ. ಗಿಲ್ಲಿ ನಟ ಮಹಿಳೆಯರ ಬಗ್ಗೆ ಅವಮಾನಕರ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಆರೋಪಿಸಿ ಹೆಚ್ ಸಿ ಕುಶಲ ಎಂಬುವರು ಮಹಿಳಾ ಆಯೋಗದಲ್ಲಿ ದೂರು ನೀಡಿದ್ದಾರೆ.

Risha Gowda-Gilli Nata
BBK 12: ಬಿಗ್‌ ಬಾಸ್‌ ಮನೆಯಿಂದ ಹೊರಗೆ ಬಂದ ಕಾಕ್ರೋಚ್‌ ಸುಧಿ! ಇದೇ ಮುಳುವಾಯಿತೇ?

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com