

ಕವಿನ್ ನಟಿಸಿದ ಮಾಸ್ಕ್ ಚಿತ್ರದ ಮೂಲಕ ನಟಿ ಆಂಡ್ರಿಯಾ ಜೆರೆಮಿಯಾ ನಿರ್ಮಾಪಕಿಯಾಗಿ ಪಾದಾರ್ಪಣೆ ಮಾಡಿದರು. ಅಲ್ಲದೆ ಚಿತ್ರದಲ್ಲಿ ಖಳನಾಯಕಿ ಪಾತ್ರವನ್ನೂ ನಿರ್ವಹಿಸಿದ್ದರು. ಇನ್ನು ಆಂಡ್ರಿಯಾ ಅಭಿನಯದ ಪಿಸಾಸು 2 ಮತ್ತು ಮಾನುಷಿ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ನಟಿ ಆಂಡ್ರಿಯಾ ಈಗ ಮಿಸ್ಕಿನ್ ನಿರ್ದೇಶನದ ಪಿಸಾಸು 2 ಚಿತ್ರದ ನಗ್ನ ದೃಶ್ಯದ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ. ಬಾಲಾ ನಿರ್ಮಿಸಿದ ಪಿಸಾಸು 1ರ ಅದ್ಭುತ ಯಶಸ್ಸಿನ ನಂತರ, ನಿರ್ದೇಶಕ ಮಿಸ್ಕಿನ್ ಪಿಸಾಸು ಭಾಗ 2ರ ಕೆಲಸ ಶುರು ಮಾಡಿದ್ದಾರೆ. ವಿಜಯ್ ಸೇತುಪತಿ, ರಾಜ್‌ಕುಮಾರ್ ಪಿಚುಮಣಿ ಮತ್ತು ಇತರರೊಂದಿಗೆ ಆಂಡ್ರಿಯಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ರಾಕ್‌ಪೋರ್ಟ್ ಎಂಟರ್‌ಟೈನ್‌ಮೆಂಟ್ ನಿರ್ಮಿಸಿರುವ ಈ ಚಿತ್ರಕ್ಕೆ ಕಾರ್ತಿಕ್ ರಾಜಾ ಸಂಗೀತ ಸಂಯೋಜಿಸಿದ್ದಾರೆ.
ಚಿತ್ರದಲ್ಲಿ ಆಂಡ್ರಿಯಾ 15 ನಿಮಿಷಗಳ ಕಾಲ ನಗ್ನವಾಗಿ ನಟಿಸಿದ್ದಾರೆ ಎಂಬ ವರದಿಗಳು ಸಂಚಲನ ಸೃಷ್ಟಿಸಿವೆ. ಚಿತ್ರದ ಕಥೆ ಇಷ್ಟಪಟ್ಟ ಕಾರಣ ಆಂಡ್ರಿಯಾ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದರು. ಇದಕ್ಕಾಗಿ ಮಹಿಳಾ ಛಾಯಾಗ್ರಾಹಕಿಯೊಂದಿಗೆ ಫೋಟೋಶೂಟ್ ಮಾಡಿಸಿಕೊಂಡಿದ್ದಾಗಿ ನಿರ್ದೇಶಕ ಮಿಸ್ಕಿನ್ ಹೇಳಿದ್ದರು. ಆದರೆ ಯುವಕರು ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ ಎಂದು ಭಾವಿಸಿ ಆ ದೃಶ್ಯವನ್ನು ಡಿಲೀಟ್ ಮಾಡಿಸಿದ್ದರು ಎಂದು ಹೇಳಲಾಗುತ್ತಿದೆ.
ಇತ್ತೀಚಿನ ಸಂದರ್ಶನವೊಂದರಲ್ಲಿ, ಆಂಡ್ರಿಯಾ ಪಿಸಾಸು 2 ಚಿತ್ರದಲ್ಲಿನ ನಗ್ನತೆಯ ದೃಶ್ಯದ ಬಗ್ಗೆ ಮುಕ್ತವಾಗಿ ಮಾತನಾಡಿದರು. ಮಿಸ್ಕಿನ್ ಸರ್ ಒಬ್ಬ ಮಹಿಳೆ ಪ್ರಧಾನ ಆಧರಿಸಿ ಚಿತ್ರಕತೆ ಬರೆಯುತ್ತಿದ್ದಾರೆ. ಅವರು ಹೊಸ ನಿರ್ದೇಶಕರಲ್ಲ. ಅವರು ಈಗಾಗಲೇ ಅನೇಕ ದೊಡ್ಡ ನಟರೊಂದಿಗೆ ಕೆಲಸ ಮಾಡಿದ್ದಾರೆ. ಅವರಿಗೆ ಬೇರೆ ಆಯ್ಕೆ ಇಲ್ಲದ ಕಾರಣ ಅವರು ಈ ಚಿತ್ರವನ್ನು ಮಾಡಲಿಲ್ಲ. ಅವರು ಸ್ಪಷ್ಟವಾಗಿ ಈ ಚಿತ್ರವನ್ನು ತಮ್ಮದೇ ಆದ ಆಯ್ಕೆಯಿಂದ ಮಾಡುತ್ತಿದ್ದಾರೆ.
ಪಿಶಾಸು 2ರ ಚಿತ್ರಕಥೆಯಲ್ಲಿ ನಗ್ನ ದೃಶ್ಯಗಳಿದ್ದವು. ಆದರೆ ಮಿಸ್ಕಿನ್ ಆ ದೃಶ್ಯಗಳನ್ನು ಮಾಡಲಿಲ್ಲ. ಚಿತ್ರದಲ್ಲಿ ಯಾವುದೇ ನಗ್ನ ದೃಶ್ಯಗಳಿಲ್ಲ. ಆದರೆ ರೊಮ್ಯಾಂಟಿಕ್ ದೃಶ್ಯಗಳಿವೆ. ಅವರೊಬ್ಬ ಪ್ರತಿಭಾವಂತ ನಿರ್ದೇಶಕ, ಸಿನಿಮಾಕ್ಕಾಗಿ ಬೆತ್ತಲೆ ದೃಶ್ಯದಲ್ಲಿ ನಟಿಸಬೇಕು ಎಂದಿದ್ದಾರೆ ನಾನು ಹಿಂಜರಿಯದೆ ನಟಿಸಿರುತ್ತಿದ್ದೆ ಎಂದು ಆಂಡ್ರೆಯಾ ಹೇಳಿದ್ದಾರೆ.
Advertisement