
ರಿಷಬ್ ಶೆಟ್ಟಿ ನಿರ್ದೇಶಿಸಿ ನಾಯಕನಾಗಿ ನಟಿಸಿರುವ ಕಾಂತಾರಾ-ಚಾಪ್ಟರ್ 1 ಚಿತ್ರಕ್ಕೆ ರಾಕಿಂಗ್ ಸ್ಟಾರ್ ಯಶ್ ದಂಪತಿ ಪ್ರಶಂಸೆಯ ಮಾತುಗಳನ್ನಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಅನೇಕ ಅಡೆತಡೆಗಳು ಚಿತ್ರ ತಯಾರಿ ಸಂದರ್ಭದಲ್ಲಿ ಬಂದರೂ ತಮ್ಮ ಉದ್ದೇಶದಿಂದ ಹಿಂದೆ ಸರಿಯದೆ ಚಿತ್ರವನ್ನು ಅದ್ದೂರಿಯಾಗಿ ತಯಾರಿಸಿ ಬಿಡುಗಡೆಗೊಳಿಸಿ ಯಶಸ್ವಿ ಪ್ರದರ್ಶನ ಕಾಣುತ್ತಿರುವುದಕ್ಕೆ ಖುಷಿಪಟ್ಟಿದ್ದಾರೆ.
ನಿಮ್ಮ ದೃಢನಿಶ್ಚಯ, ಸ್ಥಿತಿಸ್ಥಾಪಕತ್ವ ಗುಣ ಮತ್ತು ಸಂಪೂರ್ಣ ಭಕ್ತಿ ಪ್ರತಿ ಚೌಕಟ್ಟಿನಲ್ಲೂ ಸ್ಪಷ್ಟವಾಗಿ ಗೋಚರಿಸುತ್ತದೆ. ಬರಹಗಾರ, ನಿರ್ದೇಶಕ ಮತ್ತು ನಟನಾಗಿ, ನಿಮ್ಮ ದೃಷ್ಟಿಕೋನವು ಪರದೆಯ ಮೇಲೆ ನಿಜವಾಗಿಯೂ ತಲ್ಲೀನಗೊಳಿಸುವ ಅನುಭವವಾಗಿ ರೂಪಾಂತರಗೊಂಡಿದೆ. ಮಹತ್ವಾಕಾಂಕ್ಷೆಯ ಕೆಲಸಗಳಿಗೆ ನಿಮ್ಮ ದೂರದೃಷ್ಟಿ ಮತ್ತು ಬೇಷರತ್ತಾದ ಬೆಂಬಲವು ಚಿತ್ರೋದ್ಯಮದ ಮಟ್ಟವನ್ನು ನಿರಂತರವಾಗಿ ಹೆಚ್ಚಿಸುತ್ತದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಚಿತ್ರದಲ್ಲಿ ನಟಿಸಿರುವ ನಾಯಕಿ ರುಕ್ಮಿಣಿ ವಸಂತ್, ನಿರ್ಮಾಪಕರಾದ ವಿಜಯ್ ಕಿರಗಂದೂರು, ಗುಲ್ಷನ್ ದೇವಯ್ಯ, ಅಜನೀಶ್ ಅವರ ಸಂಗೀತ ಇನ್ನಷ್ಟು ಜೀವತುಂಬಿದೆ ಎಂದಿದ್ದಾರೆ. ರಾಕೇಶ್ ಪೂಜಾರಿ ಅವರ ಪ್ರತಿಭೆಗೆ ಸೂಕ್ತವಾದ ಗೌರವ ಸಿಕ್ಕಿದೆ. ಅರವಿಂದ್ ಕಶ್ಯಪ್ ಕ್ಯಾಮರಾ ವರ್ಕ್, ಜಯರಾಮ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡ್ ಸೇರಿ ಇಡೀ ಚಿತ್ರರಂಗದ ಶ್ರಮವನ್ನು ಯಶ್ ಕೊಂಡಾಡಿದ್ದಾರೆ.
ನಿಮ್ಮ ಪಯಣ ನಮಗೆ ಸ್ಫೂರ್ತಿ
ಇದಕ್ಕೆ ಪ್ರತಿಕ್ರಿಯಿಸಿರುವ ರಿಷಬ್ ಶೆಟ್ಟಿ, ನಿಮ್ಮ ಪಯಣ ಮತ್ತು ದೃಷ್ಟಿಕೋನ ಯಾವಾಗಲೂ ನಮಗೆ ಸ್ಫೂರ್ತಿ. ನಿಮ್ಮ ಸಾಧನೆಯನ್ನು ಇಂದು ನಿಂತು ನೋಡುವುದು ನನಗೆ ಹೆಮ್ಮೆಯ ಸಂಗತಿ. ನನ್ನ ಜೊತೆ ನಿಂತು ನನ್ನ ಕೆಲಸಕ್ಕೆ ಬೆಂಬಲ ನೀಡಿದ್ದಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಕಾಂತಾರ ಮನಸ್ಸಿಗೆ ಮುದ
ಕಾಂತಾರ ಚಿತ್ರ ನೋಡಿ ಮನಸ್ಸಿಗೆ ಮುದವಾಯಿತು ಎಂದು ರಾಧಿಕಾ ಪಂಡಿತ್ ಸಹ ಬರೆದುಕೊಂಡಿದ್ದಾರೆ.
Advertisement