
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ತೆಲುಗಿನ ಸ್ಟಾರ್ ನಟ ವಿಜಯ್ ದೇವರಕೊಂಡ ಅವರ ಸಂಬಂಧದ ಬಗ್ಗೆ ಹಲವು ವರ್ಷಗಳಿಂದ ಕೇಳಿಬರುತ್ತಿರುವ ಗಾಸಿಪ್ ನಿಜವಾಗುವ ಲಕ್ಷಣ ಕಾಣುತ್ತಿದೆ. ಹಲವು ಮೂಲಗಳ ಪ್ರಕಾರ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಿನ್ನೆ ಶುಕ್ರವಾರ ಸಂಜೆ ವಿಜಯ್ ದೇವರಕೊಂಡ ನಿವಾಸದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಉಂಗುರ ಬದಲಾಯಿಸಿಕೊಂಡಿದ್ದಾರೆ ಎಂದು ಹೇಳಲಾಗಿದ್ದು, ಈ ಸಮಾರಂಭದಲ್ಲಿ ನಿಕಟ ಕುಟುಂಬ ಸದಸ್ಯರು ಮಾತ್ರ ಭಾಗವಹಿಸಿದ್ದರು.
ಈ ಜೋಡಿ ಫೆಬ್ರವರಿಯಲ್ಲಿ ವಿವಾಹವಾಗಲಿದ್ದಾರೆ ಎಂದು ವರದಿಯಾಗಿದೆ. ಅಧಿಕೃತ ಘೋಷಣೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ತಾರಾ ಜೋಡಿ ಇದುವರೆಗೆ ತಮ್ಮ ನಿಶ್ಚಿತಾರ್ಥ ಬಗ್ಗೆ ಹೇಳಿಕೊಂಡಿಲ್ಲ ಅವರ ಕುಟುಂಬ ವರ್ಗ ಕೂಡ ಅಧಿಕೃತವಾಗಿ ಘೋಷಿಸಿಲ್ಲ. ಸಾಕಷ್ಟು ಗೌಪ್ಯವಾಗಿ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿತು ಎಂದು ಹೇಳಲಾಗುತ್ತಿದೆ.
ರಶ್ಮಿಕಾ ಇತ್ತೀಚೆಗೆ ಸುಂದರವಾದ ಸೀರೆಯಲ್ಲಿ ಧರಿಸಿದ್ದ ಫೋಟೋ ಇನ್ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದರು. ಈ ಫೋಟೋ ಬಗ್ಗೆ ಅವರ ಅಭಿಮಾನಿಗಳು ನಾನಾ ರೀತಿಯ ಕಮೆಂಟ್ ಮಾಡುತ್ತಿದ್ದಾರೆ. ದಸರಾ ಹಬ್ಬದ ಸಂದರ್ಭದಲ್ಲಿ, 'ತಮ' ಚಿತ್ರದ ನಟಿ ರಶ್ಮಿಕಾ ಸಾಂಪ್ರದಾಯಿಕ ಉಡುಪನ್ನು ಧರಿಸಿ, ಹಣೆಯ ಮೇಲೆ ತಿಲಕ ಧರಿಸಿರುವ ಚಿತ್ರವನ್ನು ಹಂಚಿಕೊಂಡು ತಮ್ಮ ಚಿತ್ರದ ಬಗ್ಗೆ ಬರೆದು ಎಲ್ಲರ ಪ್ರೀತಿ, ಆಶೀರ್ವಾದ ಸಿಗಲಿ ಎಂದು ಕೇಳಿಕೊಂಡಿದ್ದರು.
ರಶ್ಮಿಕಾ ಮತ್ತು ವಿಜಯ್ ಸಂಬಂಧದ ಬಗ್ಗೆ ಇಂಡಸ್ಟ್ರಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಕೇಳಿಬರುತ್ತಲೇ ಇತ್ತು. ಅವರು ಒಟ್ಟಿಗೆ ರಜಾದಿನಗಳನ್ನು ಕಳೆಯುತ್ತಿದ್ದುದ ಆಗಾಗ ಇಂಟರ್ನೆಟ್, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿತ್ತು.
ವೃತ್ತಿಗೆ ಬರುವುದಾದರೆ ರಶ್ಮಿಕಾ ಮಂದಣ್ಣ ನಿರ್ದೇಶಕ ಆದಿತ್ಯ ಸರ್ಪೋತ್ದಾರ್ ಅವರ ಹಾರರ್-ಹಾಸ್ಯಮಯ 'ತಮ'ದಲ್ಲಿ ಆಯುಷ್ಮಾನ್ ಖುರಾನಾ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ, ಪರೇಶ್ ರಾವಲ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ಇದೇ ಅಕ್ಟೋಬರ್ 21 ದೀಪಾವಳಿಗೆ ಬಿಡುಗಡೆಯಾಗಲಿದೆ.
ವಿಜಯ್ ದೇವರಕೊಂಡ ಕೊನೆಯದಾಗಿ ಗೌತಮ್ ತಿನ್ನನುರಿಯ ತೆಲುಗು ಸ್ಪೈ ಆಕ್ಷನ್-ಥ್ರಿಲ್ಲರ್ 'ಕಿಂಗ್ಡಮ್' (2025) ನಲ್ಲಿ ಕಾಣಿಸಿಕೊಂಡಿದ್ದರು.
Advertisement