Dulquer Salmaan ನಿರ್ಮಾಣ ಸಂಸ್ಥೆ ಮೇಲೆ ಮಹಿಳೆಯಿಂದ ಕಾಸ್ಟಿಂಗ್ ಕೌಚ್ ದೂರು: ಆರೋಪ ನಿರಾಕರಿಸಿದ ವೇಫೇರರ್ ಫಿಲ್ಮ್ಸ್ ಹೇಳಿದ್ದೇನು?

ವೇಫೇರರ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯ ಸಿನಿಮಾದಲ್ಲಿ ಪಾತ್ರವನ್ನು ನೀಡುವ ನೆಪದಲ್ಲಿ ಧಿನಿಲ್ ಬಾಬು ತನ್ನನ್ನು ಸಂಪರ್ಕಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
Dulquer Salmaan’s Production House Responds To Casting Couch Claims Against Dhinil Babu
ದಿನಿಲ್ ಬಾಬು ವಿರುದ್ಧದ ಕಾಸ್ಟಿಂಗ್ ಕೌಚ್ ಆರೋಪಗಳಿಗೆ ದುಲ್ಕರ್ ಸಲ್ಮಾನ್ ಅವರ ನಿರ್ಮಾಣ ಸಂಸ್ಥೆ ಪ್ರತಿಕ್ರಿಯೆ
Updated on

ಮಲಯಾಳಂ ಚಿತ್ರರಂಗದ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಅವರ ನಿರ್ಮಾಣ ಸಂಸ್ಥೆ 'ಲೋಕಾ' ಚಿತ್ರದ ಯಶಸ್ಸಿನಲ್ಲಿ ಮುಳುಗಿದ್ದರೂ, ಇತ್ತೀಚೆಗೆ ವಿವಾದಕ್ಕೆ ಸಿಲುಕಿದೆ. ಕಂಪನಿಯೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಯೊಬ್ಬರು ತಮ್ಮನ್ನು ಕಾಸ್ಟಿಂಗ್ ಕೌಚ್ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ.

ದುಲ್ಕರ್ ಸಲ್ಮಾನ್ ನಿರ್ಮಾಣ ಸಂಸ್ಥೆ ಕಾಸ್ಟಿಂಗ್ ಕೌಚ್ ವಿವಾದದಲ್ಲಿ

ಮಹಿಳೆ ನೀಡಿದ ದೂರಿನಲ್ಲಿ ಸಹಾಯಕ ನಿರ್ದೇಶಕ ಧಿನಿಲ್ ಬಾಬು ಅವರ ಮೇಲೆ ಆರೋಪ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ದುಲ್ಕರ್ ಸಲ್ಮಾನ್ ಅವರ ನಿರ್ಮಾಣ ಸಂಸ್ಥೆ ಥೇವರ ಪೊಲೀಸ್ ಠಾಣೆ ಮತ್ತು ಫೆಫ್ಕಾಗೆ ಅಧಿಕೃತ ವರದಿಗಳನ್ನು ಸಲ್ಲಿಸಿದ್ದು, ಧಿನಿಲ್ ಬಾಬು ಜೊತೆ ಕಂಪನಿ ಯಾವುದೇ ಸಂಬಂಧ ಹೊಂದಿಲ್ಲ. ಅವರ ಯಾವುದೇ ಯೋಜನೆಗಳಲ್ಲಿ ಕೆಲಸ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ.

ಆರೋಪ ವಿವರಗಳು

ವೇಫೇರರ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯ ಸಿನಿಮಾದಲ್ಲಿ ಪಾತ್ರವನ್ನು ನೀಡುವ ನೆಪದಲ್ಲಿ ಧಿನಿಲ್ ಬಾಬು ತನ್ನನ್ನು ಸಂಪರ್ಕಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಕಂಪನಿಯ ಪಣಂಪಿಲ್ಲಿ ನಗರ ಕಚೇರಿಯ ಬಳಿಯ ಕಟ್ಟಡದಲ್ಲಿ ಭೇಟಿಯಾಗಲು ಆಹ್ವಾನಿಸಿ ಧಿನಿಲ್ ತನ್ನನ್ನು ಒಂದು ಕೋಣೆಗೆ ಕರೆದೊಯ್ದು ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು, ಇದನ್ನು ವಿರೋಧಿಸಿದರೆ ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಭವಿಷ್ಯದ ಅವಕಾಶಗಳು ಕೈತಪ್ಪಿ ಹೋಗುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ದೂರುದಾರರು ಪೊಲೀಸರಿಗೆ ಸಾಕ್ಷ್ಯವಾಗಿ ಧ್ವನಿ ಸಂದೇಶಗಳನ್ನು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

Dulquer Salmaan’s Production House Responds To Casting Couch Claims Against Dhinil Babu
Shwetha Menon ಮಲಯಾಳಂ ಕಲಾವಿದರ ಸಂಘ AMMA ಅಧ್ಯಕ್ಷರಾಗಿ ಆಯ್ಕೆ; ಮೊದಲ ಮಹಿಳೆ ಎಂಬ ಇತಿಹಾಸ ಸೃಷ್ಟಿ!

ಆರೋಪ ನಿರಾಕರಣೆ

ವೇಫೇರರ್ ಫಿಲ್ಮ್ಸ್ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಇದಕ್ಕೂ ಕಂಪೆನಿಗೂ ಯಾವುದೇ ಸಂಬಂಧವಿಲ್ಲ ಎಂದಿದೆ. ಕಾಸ್ಟಿಂಗ್ ಕೌಚ್ ಆರೋಪಗಳಿಗೆ ಸಂಬಂಧಿಸಿದ ಮಾನನಷ್ಟದಿಂದ ವೇಫೇರರ್ ಫಿಲ್ಮ್ಸ್ ನ್ನು ರಕ್ಷಿಸಲು ಧಿನಿಲ್ ಬಾಬು ವಿರುದ್ಧ ದೂರು ದಾಖಲಿಸಲಾಗಿದೆ ಎಂದು ನಿರ್ಮಾಣ ಸಂಸ್ಥೆ ಹೇಳಿದೆ. ಧಿನಿಲ್ ಬಾಬು ತಮ್ಮ ಯಾವುದೇ ಯೋಜನೆಗಳೊಂದಿಗೆ ಸಂಬಂಧ ಹೊಂದಿಲ್ಲ ಮತ್ತು ಕಂಪನಿಯೊಂದಿಗಿನ ಅವರ ಸಂಬಂಧದ ಯಾವುದೇ ಹೇಳಿಕೆಗಳು ಸುಳ್ಳು ಎಂದು ವೇಫೇರರ್ ಫಿಲ್ಮ್ಸ್ ಹೇಳಿದ್ದು, ವೇಫೇರರ್ ಫಿಲ್ಮ್ಸ್ ಹೆಸರಿನಲ್ಲಿ ಯಾರಾದರೂ ಕರೆ ಮಾಡಿದರೆ ಎಚ್ಚರಿಕೆಯಿಂದಿರುವಂತೆ ಕರೆ ನೀಡಿದೆ.

ದೂರಿನ ಹಿನ್ನೆಲೆಯಲ್ಲಿ, ಎರ್ನಾಕುಲಂ ದಕ್ಷಿಣ ಪೊಲೀಸರು ಔಪಚಾರಿಕ ಪ್ರಕರಣ ದಾಖಲಿಸಿ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಮಲಯಾಳಂ ಚಲನಚಿತ್ರ ಮಂಡಳಿ ಫೆಫ್ಕಾಗೆ ಪರಿಸ್ಥಿತಿಯ ಬಗ್ಗೆಯೂ ತಿಳಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com