
ಬೆಂಗಳೂರು: ಬಿಗ್ ಬಾಸ್ ಕನ್ನಡ 12ನೇ ಆವೃತಿ ನಿಧಾನವಾಗಿ ಕಾವೇರ ತೊಡಗಿದೆ. ಮನೆಯಲ್ಲಿರುವ ಸ್ಪರ್ಧಿಗಳ ವರ್ತನೆ ಮೀತಿ ಮೀರುತ್ತಿದೆ. ಇದಕ್ಕೆ ವೀಕ್ಷಕರು ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ. ರಕ್ಷಿತಾ ಶೆಟ್ಟಿಯನ್ನು ಟಾರ್ಗೆಟ್ ಮಾಡಿಕೊಂಡಿರುವ ಅಶ್ವಿನಿ ಗೌಡ ಮತ್ತು ಜಾನ್ವಿ ವಿರುದ್ಧ ವೀಕ್ಷಕರು ಗರಂ ಆಗಿದ್ದು ರಕ್ಷಿತಾ ಶೆಟ್ಟಿ ಪರವಾಗಿ ನಿಂತಿದ್ದಾರೆ. ಇಂದಿನ ಮೊದಲ ಪ್ರೋಮೋ ಬಿಡುಗಡೆಯಾಗಿದೆ. ನಾವು ಕೊಟ್ಟಿರೋ ಮಾತನ್ನು ತಪ್ಪಲ್ಲ, ತಪ್ಪಾಗಿ ಆಡಿರೋ ಮಾತಿಗೆ ಬುದ್ಧಿ ಕಲಿಸದೇ ಬಿಡಲ್ಲ. ಒಳ್ಳೆಯ ಕೆಲಸ ಮಾಡಿದಾಗ ನಾವು ಕೈ ತಟ್ಟಿ ಚಪ್ಪಾಳೆಯನ್ನು ಸಹ ಕೊಡ್ತೀವಿ. ಎಲ್ಲಿದ್ದೀವಿ ಅನ್ನೋದನ್ನು ಮರೆತು ಬಾಯಿಗೆ ಬಂದ ಹಾಗೆ ಮಾತಾಡಿದವರಿಗೆ ಚೂರು ತಲೆ ಮೇಲೆ ತಟ್ಟಿ ಬುದ್ದಿ ಹೇಳಬೇಕಾಗುತ್ತದೆ ಎಂದು ಸುದೀಪ್ ಆರಂಭದಲ್ಲಿಯೇ ಹೇಳಿದ್ದು ಇಂದಿನ ಸಂಚಿಕೆಯ ತೀವ್ರ ಕುತೂಹಲ ಕೆರಳಿಸಿದೆ.
ಸ್ಪರ್ಧಿಗಳಾದ ಅಶ್ವಿನಿ ಗೌಡ ಮತ್ತು ಜಾಹ್ನವಿ ಪದೇ ಪದೆ ರಕ್ಷಿತಾರನ್ನು ಟಾರ್ಗೆಟ್ ಮಾಡಿದ್ದು, ಮನೆಯಲ್ಲಿ ಟೆನ್ಶನ್ ಸೃಷ್ಟಿಸಿದೆ. ಗೆಜ್ಜೆ ಸದ್ದನ್ನು ತಾವೇ ಮಾಡಿ ಅದನ್ನು ರಕ್ಷಿತಾ ಮೇಲೆ ಹಾಕಲು ಯತ್ನಿಸಿದ್ದು, ಅವರ ನಡವಳಿಕೆಯು ವೀಕ್ಷಕರ ಕೋಪಕ್ಕೆ ಕಾರಣವಾಗಿದೆ. ಮಿಡ್ ವೀಕ್ ಎಲಿಮಿನೇಷನ್ ಸಮಯದಲ್ಲಿ, ರಕ್ಷಿತಾ ಮತ್ತು ಗಿಲ್ಲಿ ಜಾಹ್ನವಿಯ ಮೋಸವನ್ನು ಬಹಿರಂಗಪಡಿಸಿದ್ದು, ನಾಮಿನೇಟ್ ಮಾಡಿದರು. ಇದಾದ ಬಳಿಕ ರಕ್ಷಿತಾ ಶೆಟ್ಟಿ ಟಾರ್ಗೆಟ್ ಆಗಿದ್ದಳು.
ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರ ವರ್ತನೆಯನ್ನು ವೀಕ್ಷಕರು ಮತ್ತು ಮಾಜಿ ಸ್ಪರ್ಧಿಗಳು ಕಟುವಾಗಿ ಟೀಕಿಸಿದ್ದಾರೆ. ಇದು ದುರಹಂಕಾರದ ಮತ್ತು ತಾನೇ ಎಂಬುದನ್ನು ತೋರಿಸುತ್ತದೆ. ಅನೇಕರು ರಕ್ಷಿತಾ ಅವರ ವಿರುದ್ಧ ನಿಂತಿರುವುದಕ್ಕೆ ಹೊಗಳಿದ್ದಾರೆ. ಇನ್ನೂ ಕೆಲವರು ಸುದೀಪ್ ಈ ಸಮಸ್ಯೆಯನ್ನು ಪರಿಹರಿಸಬೇಕು ಎಂದಿದ್ದಾರೆ. ರಕ್ಷಿತಾಳ ಮುಗ್ಧತೆಯು ಇದೀಗ ನೋಡುಗರ ಹೃದಯಗಳನ್ನು ಗೆಲ್ಲುತ್ತಲೇ ಇದೆ. ಅಶ್ವಿನಿ ಗೌಡ ಮತ್ತು ಜಾಹ್ನವಿಯ ದುರಹಂಕಾರ ಮತ್ತು ದ್ವಿಮುಖ ನಡವಳಿಕೆಯು ನಕಾರಾತ್ಮಕ ಅಭಿಪ್ರಾಯಗಳನ್ನು ಉಂಟುಮಾಡಿದೆ. ರಕ್ಷಿತಾಳ ಮುಗ್ಧತೆ ಮತ್ತು ಮನರಂಜನಾ ಉಪಸ್ಥಿತಿಯು ಈ ಆವೃತ್ತಿಯ ಪ್ರಮುಖ ಅಂಶವಾಗಿದೆ.
Advertisement