ಜೀ ಕನ್ನಡ ವಾಹಿನಿಗೆ ರಕ್ಷಿತಾ ಪ್ರೇಮ್ ಗುಡ್ ಬೈ: 9 ವರ್ಷಗಳ ನಂಟಿಗೆ ಏಕಾಏಕಿ ವಿದಾಯ ಹೇಳಲು ಕಾರಣವೇನು!

ಜೀ ಕನ್ನಡ ವಾಹಿನಿಯ ರಿಯಾಲಿಟಿ ಶೋಗಳಲ್ಲಿ ಮಿಂಚುತ್ತಿದ್ದ ರಕ್ಷಿತಾ ಅವರ ಈ ದಿಢೀರ್‌ ನಿರ್ಧಾರದಿಂದ ಅಭಿಮಾನಿಗಳು ಆಘಾತಕ್ಕೆ ಒಳಗಾಗಿದ್ದಾರೆ. ಇದಕ್ಕೆ ಕಾರಣವೇನು ಎಂದು ರಕ್ಷಿತಾ ಪ್ರೇಮ್‌ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬಹಿರಂಗಪಡಿಸಿದ್ದಾರೆ
Rakshita prem
ರಕ್ಷಿತಾ ಪ್ರೇಮ್
Updated on

ಬೆಂಗಳೂರು: ಸಿನಿಮಾಗಳಿಂದ ದೂರ ಉಳಿದಿದ್ದ ನಟಿ ರಕ್ಷಿತಾ ಪ್ರೇಮ್ ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇನ್ನು ಮುಂದೆ ನಾನು ಅದನ್ನು ಮುಂದುವರಿಸುವುದಿಲ್ಲ ಎಂದು ರಿಯಾಲಿಟಿ ಶೋಗಳಿಗೆ ರಕ್ಷಿತಾ ಗುಡ್‌ಬೈ ಹೇಳಿದ್ದಾರೆ.

ಜೀ ಕನ್ನಡ ವಾಹಿನಿಯ ರಿಯಾಲಿಟಿ ಶೋಗಳಲ್ಲಿ ಮಿಂಚುತ್ತಿದ್ದ ರಕ್ಷಿತಾ ಅವರ ಈ ದಿಢೀರ್‌ ನಿರ್ಧಾರದಿಂದ ಅಭಿಮಾನಿಗಳು ಆಘಾತಕ್ಕೆ ಒಳಗಾಗಿದ್ದಾರೆ. ಇದಕ್ಕೆ ಕಾರಣವೇನು ಎಂದು ರಕ್ಷಿತಾ ಪ್ರೇಮ್‌ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬಹಿರಂಗಪಡಿಸಿದ್ದಾರೆ. ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಾದ "ಕಾಮಿಡಿ ಕಿಲಾಡಿಗಳು" ಹಾಗೂ "ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್" ಇದರಲ್ಲಿ ರಕ್ಷಿತಾ ತೀರ್ಪುಗಾರರಾಗಿ ಹಲವು ವರ್ಷಗಳಿಂದ ಕಾಣಿಸಿಕೊಂಡಿದ್ದರು. ಈ ಶೋಗಳ ಹಲವು ಸೀಸನ್‌ಗಳಲ್ಲಿಯೂ ಸತತವಾಗಿ ರಕ್ಷಿತಾ ಅವರೇ ಜಡ್ಜ್‌ ಆಗಿದ್ದರು. ಆದರೆ ಇನ್ನು ಮುಂದೆ ನಾನು ಈ ಕಾರ್ಯಕ್ರಮಗಳ ಹಾಗೂ ಆ ವಾಹಿನಿಯ ಭಾಗವಲ್ಲ ಎಂದು ಹೇಳಿದ್ದಾರೆ.

ನಿರ್ದಿಷ್ಟ ಕಾರ್ಯಕ್ರಮದಲ್ಲಿ ನನ್ನನ್ನ ನಿರೀಕ್ಷೆ ಮಾಡುತ್ತಿದ್ದೀರಿ. ಆದರೆ, ಕಳೆದ 9 ವರ್ಷಗಳಿಂದ ನಾನು ಕೆಲಸ ಮಾಡಿದ್ದ ಚಾನೆಲ್‌ನಲ್ಲಿ ನಾನು ಈಗ ಇಲ್ಲ. ಜೀವನದಲ್ಲಿ ಬದಲಾವಣೆ ಬೇಕು. ನನ್ನ ಕಮ್ಫರ್ಟ್‌ ಝೋನ್‌ನಿಂದ ನಾನು ಹೊರಗೆ ಬರಬೇಕು. ಹೊಸದನ್ನೇನಾದರೂ ಟ್ರೈ ಮಾಡಬೇಕು. ಹೀಗಾಗಿ, ನಾನು ಡ್ಯಾನ್ಸ್‌ ಶೋನಲ್ಲೂ ಭಾಗಿಯಾಗುತ್ತಿಲ್ಲ. ವೀಕ್ಷಕರು ಇಲ್ಲಿಯವರೆಗೂ ನನಗೆ ತೋರಿದ ಪ್ರೀತಿಗೆ ನಾನು ಚಿರಋಣಿ. ನಾನು ಅಲ್ಲಿ ಕಳೆದ ಸುಂದರ ಕ್ಷಣಗಳನ್ನ ಮರೆಯಲು ಸಾಧ್ಯವಿಲ್ಲ. ಎಲ್ಲರ ಆಶೀರ್ವಾದದೊಂದಿಗೆ ಸರಿಯಾದ ದಾರಿಯಲ್ಲಿ ಮುನ್ನಡೆಯುತ್ತಿದ್ದೇನೆ. ನಾನು ವಾಪಸ್ ಬಂದಾಗ ಅದೇ ಪ್ರೀತಿ ತೋರಿಸುತ್ತೀರಾ ಎಂಬ ಭರವಸೆ ಇದೆ. ಧನ್ಯವಾದಗಳು ಎಂದು ಇನ್ಸ್ಟಾಗ್ರಾಮ್‌ ಸ್ಟೋರಿಯಲ್ಲಿ ರಕ್ಷಿತಾ ಪ್ರೇಮ್ ಬರೆದುಕೊಂಡಿದ್ದಾರೆ.

ಕಾಮಿಡಿ ಕಿಲಾಡಿಗಳು" ರಿಯಾಲಿಟಿ ಶೋ ಮೂಲಕ ರಕ್ಷಿತಾ ಪ್ರೇಮ್‌ 2017ರಲ್ಲಿ ತೀರ್ಪುಗಾರರಾಗಿ ಎಂಟ್ರಿ ನೀಡಿದ್ದರು. ಬಳಿಕ "ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್" ಸೇರಿದಂತೆ ಇವುಗಳ ಸರಣಿ ಶೋಗಳಲ್ಲಿಯೂ ಜಡ್ಜ್‌ ಆಗಿ ಮುಂದುವರಿದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com