
ಬೆಂಗಳೂರು: ಮಾಜಿ ಸಂಸದೆ ಹಾಗೂ ಮೋಹಕತಾರೆ ನಟಿ ರಮ್ಯಾ ಅವರು ಅಮೆರಿಕದಲ್ಲಿ ನಡೆಯುವ ನಾವಿಕ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದಾರೆ. ಈ ಬಾರಿಯ ನಾವಿಕ ಸಮಾರಂಭಕ್ಕೆ ರಮ್ಯಾ ಜೊತೆ ನಟ ವಿನಯ್ ರಾಜ್‌ಕುಮಾರ್ ಸಹ ಹೋಗಿದ್ದಾರೆ. ವಿಶೇಷ ಅಂದ್ರೆ ಪುನೀತ್ ರಾಜ್‌ಕುಮಾರ್ ಅವರ ಕಿರಿಯ ಪುತ್ರಿ ವಂದಿತಾ ಕೂಡಾ ಇವರ ಜೊತೆಗಿದ್ದಾರೆ.
ಅಮೆರಿಕದಲ್ಲಿರುವ ನಟಿ ರಮ್ಯಾ ಅವರು ಸಮಾರಂಭದ ಬಿಡುವಿನ ವೇಳೆ ಅಮೆರಿಕದ ಬ್ಯೂಟಿಫುಲ್ ಲೊಕೇಶನ್‌ನಲ್ಲಿ ನಟ ವಿನಯ್ ರಾಜ್‌ಕುಮಾರ್ ಹಾಗೂ ವಂದಿತಾ ಜತೆ ಸುತ್ತಾಟ ನಡೆಸಿದ್ದಾರೆ.
ಅಮೆರಿಕದಲ್ಲಿ ಮೂವರೂ ಎಂಜಾಯ್ ಮಾಡ್ತಿರುವ ಫೋಟೋಗಳನ್ನ ರಮ್ಯಾ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡ್ಕೊಂಡಿದ್ದು, ಫೋಟೋಗಳ ಜೊತೆಗೆ ಅದಕ್ಕೆ ಕ್ಯಾಪ್ಷನ್ ಹಾಕಿರುವ ರಮ್ಯಾ `ನಾನು ಹಾಗೂ ಬೆಸ್ಟ್ ಕಂಪನಿ’ ಎಂದು ವಿನಯ್ ರಾಜ್‌ಕುಮಾರ್ ಮತ್ತು ವಂದಿತಾ ಪುನೀತ್ ರಾಜ್‌ಕುಮಾರ್ ಅವರನ್ನು ಟ್ಯಾಗ್ ಮಾಡಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಈ ಫೋಟೋಗಳು ವೈರಲ್ ಆಗಿದ್ದು, ಕೆಲವರು ನಟಿ ರಮ್ಯಾ ಹಾಗೂ ವಿನಯ್ ಅವರ ಫೋಟೋಗಳನ್ನು ಟ್ರೋಲ್ ಮಾಡಿದ್ದಾರೆ. ಹಲವರು ಡೇಟಿಂಗ್‌ನಲ್ಲಿ ಇದ್ದಾರೆ ಎಂದು ಬರೆದುಕೊಂಡಿದ್ದರು.
ಇದೀಗ ಟ್ರೋಲ್ ಗಳಿಗೆ ಪ್ರತಿಕ್ರಿಯಿಸಿರುವ ರಮ್ಯಾ, `ನೀವು ತುಂಬಾ ತಮಾಷೆ ಮಾಡುತ್ತಿದ್ದೀರಾ.. ವಿನಯ್ ರಾಜ್‌ಕುಮಾರ್ ನನಗೆ ತಮ್ಮನ ತರಹ. ನಿಮ್ಮೆಲ್ಲರ ಕಲ್ಪನೆಗೂ ಒಂದು ಮಿತಿ ಇರಲಿ’’ ಎಂದು ತಿರುಗೇಟು ನೀಡಿದ್ದಾರೆ.
Advertisement