
ಇನ್ಸ್ಟಾಗ್ರಾಂ ರೀಲ್ಸ್ ಬಂದ ಮೇಲೆ ಸೋಷಿಯಲ್ ಮೀಡಿಯಾ ಹವಾ ಹೆಚ್ಚಾಗುತ್ತಿದೆ. ದಿನಬೆಳಗಾಗುವಷ್ಟರಲ್ಲಿ ಹಲವರು ಇದ್ದಕ್ಕಿದ್ದಂತೆ ಫೇಮಸ್ ಆಗಿಬಿಡುತ್ತಾರೆ. ಕನ್ನಡದ ಬಿರುಗಾಳಿ ಚಿತ್ರದ ಹೂವಿನ ಬಾಣದಂತೆ ಹಾಡನ್ನು ಫನ್ನಿಯಾಗಿ ಹಾಡಿ ನಿತ್ಯಶ್ರೀ ಎಂಬ ಕಾಲೇಜು ವಿದ್ಯಾರ್ಥಿನಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದಾಳೆ.
ಈಗ ಫೇಸ್ ಬುಕ್, ಇನ್ಸ್ಟಾಗ್ರಾಂ ತೆರೆದು ನೋಡಿದರೆ ಸಾಕು ನಿತ್ಯಶ್ರೀ ಹಾಡಿದ ಶೈಲಿಯಲ್ಲಿ ಹಾಡಿ ತಮಾಷೆ ಮಾಡುತ್ತಿರುತ್ತಾರೆ.
ಇದು ಹಾಡಿಗೆ ಸಂಗೀತ ನಿರ್ದೇಶನ ಮಾಡಿದ ಅರ್ಜುನ್ ಜನ್ಯ ಅವರ ಗಮನಕ್ಕೆ ಸಹ ಬಂದಿದೆ. ನಿತ್ಯ ಅವರ ಮೊಬೈಲ್ ಗೆ ನಿತ್ಯಶ್ರೀ ಹಾಡಿದ ವಿಡಿಯೊ ಬರುತ್ತದಂತೆ. ಹೀಗೆಂದು ಕಾರ್ಯಕ್ರಮ ವೇದಿಕೆಯಲ್ಲಿ ಹೇಳಿರುವ ಅರ್ಜುನ್ ಜನ್ಯ ಆಕೆ ಹಾಡಿದ ರೀತಿಯಲ್ಲೇ ಹಾಡಿ ನಗಿಸಿದ್ದಾರೆ. ಮುಗ್ಧವಾಗಿ ಹಾಡಿರುವ ಆ ಮಗುವಿಗೆ ಒಳ್ಳೇದಾಗಲಿ ಎಂದು ಹರಸಿದ್ದಾರೆ.
Advertisement