ಮೋಹನ್ ಲಾಲ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ; SRK, ವಿಕ್ರಾಂತ್ ಮಾಸ್ಸೆ ಹಾಗೂ ರಾಣಿ ಮುಖರ್ಜಿಗೆ ಅತ್ಯುತ್ತಮ ನಟ-ನಟಿ ಪ್ರಶಸ್ತಿ ಪ್ರದಾನ!

71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನವದೆಹಲಿಯಲ್ಲಿ ನಡೆದಿದ್ದು ಮಲಯಾಳಂ ಚಿತ್ರರಂಗದ ದಂತಕಥೆ ನಟ ಮೋಹನ್ ಲಾಲ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರು
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರು
Updated on

ನವದೆಹಲಿ: 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನವದೆಹಲಿಯಲ್ಲಿ ನಡೆದಿದ್ದು ಮಲಯಾಳಂ ಚಿತ್ರರಂಗದ ದಂತಕಥೆ ನಟ ಮೋಹನ್ ಲಾಲ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು. ಮೋಹನ್ ಲಾಲ್ ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ಬಂದಾಗ ಸಭಾಂಗಣದಲ್ಲಿ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿ ಅಭಿನಂದನೆ ಸಲ್ಲಿಸಿದರು.

ಇದೇ ಕಾರ್ಯಕ್ರಮದಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ತಮ್ಮ ಮೊದಲ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿದರು. ಶಾರುಖ್ ಖಾನ್ "ಜವಾನ್" ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು. ಇದು ಅವರ 33 ವರ್ಷಗಳ ಚಲನಚಿತ್ರ ವೃತ್ತಿಜೀವನದ ಒಂದು ಹೆಗ್ಗುರುತು ಕ್ಷಣವಾಗಿದೆ. ನಟ ಶಾರುಖ್ ಖಾನ್ ಹಾಗೂ 12th ಫೇಲ್​ ಚಿತ್ರಕ್ಕೆ ವಿಕ್ರಾಂತ್ ಮಾಸ್ಸಿ ಇಬ್ಬರು ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದರೆ, ಶ್ರೀಮತಿ ಚಟರ್ಜಿ vs ನಾರ್ವೆ ಚಿತ್ರದಲ್ಲಿನ ಮನಮೋಹಕ ಅಭಿನಯಕ್ಕಾಗಿ ನಟಿ ರಾಣಿ ಮುಖರ್ಜಿ ಅತ್ಯುತ್ತಮ ನಟಿ ಪ್ರಶಸ್ತಿ ಸ್ವೀಕರಿಸಿದರು.

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರು
ದಕ್ಷಿಣ ಭಾರತದ ಸ್ಟಾರ್ ನಟ ಮೋಹನ್​​ಲಾಲ್​​ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, PM ಮೋದಿ ಅಭಿನಂದನೆ!

71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿ:

ಅತ್ಯುತ್ತಮ ನಿರ್ದೇಶಕ: ಸುದೀಪ್ತೋ ಸೇನ್ –The Kerala Story

ಅತ್ಯುತ್ತಮ ಚಲನಚಿತ್ರ: 12th Fail

ಭಾಷಾ ವಿಭಾಗದ ಅತ್ಯುತ್ತಮ ಕನ್ನಡ ಚಿತ್ರ: 'ಕಂದೀಲು–ದ ರೇ ಆಫ್ ಹೋಪ್'

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com