Biggboss ಸ್ಪರ್ಧಿ Rithu Video Leaked: ನನ್ನ ಗಂಡನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ; ವಿಡಿಯೋ ಹರಿಬಿಟ್ಟ ನಟ ಧರ್ಮ ಪತ್ನಿ!

ಸಾಮಾಜಿಕ ಮಾಧ್ಯಮದ ಪ್ರಭಾವಿ ಮತ್ತು ಚಲನಚಿತ್ರ ನಟ ಧರ್ಮಮಹೇಶ್ ಅವರ ಪತ್ನಿ ಗೌತಮಿ ಮತ್ತೊಮ್ಮೆ ಆಕ್ರೋಶ ಹೊರಹಾಕಿದ್ದಾರೆ. ತೆಲುಗು ಬಿಗ್ ಬಾಸ್ 9ನೇ ಆವೃತ್ತಿಯ ಸ್ಪರ್ಧಿ ರಿತು ಚೌಧರಿ ತನ್ನ ಗಂಡನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಧರ್ಮಮಹೇಶ್ ಅವರ ಪತ್ನಿ ಗೌತಮಿ ಆರೋಪಿಸಿದ್ದಾರೆ.
ರಿತು ಚೌಧರಿ-ಧರ್ಮ ಮಹೇಶ್
ರಿತು ಚೌಧರಿ-ಧರ್ಮ ಮಹೇಶ್
Updated on

ಸಾಮಾಜಿಕ ಮಾಧ್ಯಮದ ಪ್ರಭಾವಿ ಮತ್ತು ಚಲನಚಿತ್ರ ನಟ ಧರ್ಮಮಹೇಶ್ ಅವರ ಪತ್ನಿ ಗೌತಮಿ ಮತ್ತೊಮ್ಮೆ ಆಕ್ರೋಶ ಹೊರಹಾಕಿದ್ದಾರೆ. ತೆಲುಗು ಬಿಗ್ ಬಾಸ್ 9ನೇ ಆವೃತ್ತಿಯ ಸ್ಪರ್ಧಿ ರಿತು ಚೌಧರಿ ತನ್ನ ಗಂಡನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಧರ್ಮಮಹೇಶ್ ಅವರ ಪತ್ನಿ ಗೌತಮಿ ಆರೋಪಿಸಿದ್ದಾರೆ. ಕೆಲ ರಾತ್ರಿ ತನ್ನ ಪತಿಯೊಂದಿಗೆ ರಿತು ಚೌಧರಿ ತಮ್ಮ ಫ್ಲಾಟ್‌ಗೆ ಬರುತ್ತಿದ್ದರು. ಈ ವೇಳೆ ಇಬ್ಬರೂ ಒಟ್ಟಿಗೆ ಕೋಣೆಯಲ್ಲಿ ಏನು ಮಾಡುತ್ತಾರೆಂದು ಹೇಳಲು ಸಾಧ್ಯವಿಲ್ಲ ಎಂದರು.

ಧರ್ಮ ಮಹೇಶ್ ಜೊತೆ ಅವರ ಮಲಗುವ ಕೋಣೆಗೆ ಹೋಗಿ ಡ್ರಗ್ಸ್ ಸೇವಿಸಿ ಸೇವಿಸಿ ಹೊರಬರುವ ಕೆಲವು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸೋರಿಕೆಯಾಗಿವೆ. ಅಲ್ಲದೆ ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ಗೌತಮಿ ಅವರೇ. ಧರ್ಮ ಮಹೇಶ್ ಪತ್ನಿ ಗೌತಮಿ ಕಳೆದ ಕೆಲವು ದಿನಗಳಿಂದ ಮಾಧ್ಯಮಗಳಿಗೆ ಬಂದು ತನ್ನ ಪತಿಯ ದಾಂಪತ್ಯ ದ್ರೋಹವನ್ನು ಬಹಿರಂಗಪಡಿಸುತ್ತಿದ್ದಾರೆ. ಈಗ, ಧರ್ಮ ಮಹೇಶ್ ಮತ್ತು ರಿತು ಚೌಧರಿ ಅವರ ವೀಡಿಯೊಗಳು ಬಿಡುಗಡೆಯಾಗಿರುವುದರಿಂದ, ತೆಲುಗು ಟಿವಿ ಜಗತ್ತು ಆಘಾತಕ್ಕೊಳಗಾಗಿದೆ. ಆದಾಗ್ಯೂ, ಇಬ್ಬರ ನಡುವೆ ನಿಜವಾಗಿಯೂ ಅಕ್ರಮ ಸಂಬಂಧವಿದೆಯೇ ಅಥವಾ ಅವರು ಡ್ರಗ್ಸ್ ತೆಗೆದುಕೊಳ್ಳಲು ಮಾತ್ರ ಭೇಟಿಯಾದರೋ ಎಂಬ ಚರ್ಚೆ ನಡೆಯುತ್ತಿದೆ. ಇದು ನಿಜವಾಗಿಯೂ ಡ್ರಗ್ಸ್ ಸಂಬಂಧವಾಗಿದ್ದರೆ ಬಿಗ್ ಬಾಸ್ ಮನೆಯಿಂದ ಮಧ್ಯದಲ್ಲಿಯೂ ಅವರನ್ನು ಹೊರಗೆ ಕಳುಹಿಸುವ ಅವಕಾಶವಿದ್ದು ಏನಾಗುತ್ತದೆ ಎಂದು ಕಾದು ನೋಡಬೇಕಿದೆ.

ಸಂದರ್ಶನವೊಂದರಲ್ಲಿ, ಗೌತಮಿ ಮತ್ತೊಮ್ಮೆ ಬಿಗ್ ಬಾಸ್ ಸ್ಪರ್ಧಿ ರಿತು ಚೌಧರಿ ಬಗ್ಗೆ ಹಲವಾರು ಕಾಮೆಂಟ್‌ಗಳನ್ನು ಮಾಡಿದ್ದಾರೆ. 'ಧರ್ಮಮಹೇಶ್ ಮತ್ತು ನಾನು 13 ವರ್ಷಗಳಿಂದ ಪ್ರೀತಿಸುತ್ತಿದ್ದೆವು. 2019ರಲ್ಲಿ ನಾವು ವಿವಾಹವಾದೆವು. ಆದರೆ, ರಿತು ಚೌಧರಿ ನಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದಾಳೆ. ಮದುವೆಯ ನಂತರ ನಾವು ತುಂಬಾ ಹತ್ತಿರವಾದೆವು. ಆದರೆ, 2023ರಲ್ಲಿ ನಾನು ಗರ್ಭಿಣಿಯಾದೆ. ಇದರಿಂದಾಗಿ, ನಾನು ಸ್ವಲ್ಪ ತೂಕ ಹೆಚ್ಚಿಸಿಕೊಂಡೆ. ಇದರಿಂದಾಗಿ, ಧರ್ಮಮಹೇಶ್ ನನ್ನನ್ನು ಇಷ್ಟಪಡಲಿಲ್ಲ. ನೀನು ತುಂಬಾ ತೂಕ ಹೆಚ್ಚಿಸಿಕೊಂಡಿದ್ದೀಯಾ ಎಂದು ಮುಖಕ್ಕೆ ಹೊಡೆದಂತೆ ಹೇಳುತ್ತಾನೆ. ನನಗೆ ನಿನ್ನ ಬಗ್ಗೆ ಹೆಚ್ಚು ಆಸಕ್ತಿ ಇಲ್ಲ. ಅವನು ಹಾಗೆ ಹೇಳಿದಾಗ ನನಗೆ ನೋವು ಸಹಿಸಲಾಗಲಿಲ್ಲ ಎಂದು ಹೇಳಿದ್ದಾರೆ.

ರಿತು ಚೌಧರಿ-ಧರ್ಮ ಮಹೇಶ್
ನಿರ್ಮಾಪಕರನ್ನು ದೋಚುವುದು ನಾಚಿಕೆಗೇಡು: 'Kalki 2' ಚಿತ್ರದಿಂದ Deepika Padukone ನಿರ್ಗಮನ ಬೆನ್ನಲ್ಲೇ Aamir Khan ಹೇಳಿಕೆ, Video ವೈರಲ್!

ಆ ಸಮಯದಲ್ಲಿಯೇ ನನ್ನ ಪತಿ ರಿತು ಚೌಧರಿಯನ್ನು ಭೇಟಿಯಾದರು. ಮೊದಲಿಗೆ, ಅವಳು ಸಾಂದರ್ಭಿಕವಾಗಿ ಮಾತ್ರ ನಮ್ಮ ಫ್ಲಾಟ್‌ಗೆ ಬರುತ್ತಿದ್ದಳು. ನಂತರ, ಅವಳು ನಿಯಮಿತವಾಗಿ ಬರ ತೊಡಗಿದಳು. ಕೆಲವೊಮ್ಮೆ ರಾತ್ರಿಯೆಲ್ಲಾ ಮನೆಯಲ್ಲೇ ಇರುತ್ತಿದ್ದರು. ವಿಶೇಷವಾಗಿ ರಿತು ಚೌಧರಿ ನನ್ನ ವೈಯಕ್ತಿಕ ಜೀವನದಲ್ಲಿ ತೊಡಗಿಸಿಕೊಂದ್ದಾಳೆ. ಅವಳು ನನ್ನ ಫ್ಲಾಟ್‌ಗೆ ಬರುವ ಅಗತ್ಯವೇನು? ಗೌತಮಿ ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com