ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ನಿರ್ದೇಶಕ ರಂಜಿತ್ ಬಂಧನ

ಸಿನಿಮಾ ಸಮಯದಲ್ಲಿ ರಂಜಿತ್ ತಮ್ಮನ್ನು ಕ್ಯಾರವಾನ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿ, ಕೊಚ್ಚಿ ನಗರ ಪೊಲೀಸ್ ಠಾಣೆಯಲ್ಲಿ ನಟಿಯೊಬ್ಬರು ದೂರು ದಾಖಲಿಸಿದ್ದರು
Ranjit
ರಂಜಿತ್
Updated on

ತಿರುವನಂತಪುರ: ಸಿನಿಮಾ ಸೆಟ್‌ನಲ್ಲಿ ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾರೆ ಎಂಬ ಆರೋಪ ಮೇಲೆ ಮಲಯಾಳಂ ನಿರ್ದೇಶಕ, ನಟ ರಂಜಿತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಸಿನಿಮಾ ಸಮಯದಲ್ಲಿ ರಂಜಿತ್ ತಮ್ಮನ್ನು ಕ್ಯಾರವಾನ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿ, ಸೋಮವಾರ ಕೊಚ್ಚಿ ನಗರ ಪೊಲೀಸ್ ಠಾಣೆಯಲ್ಲಿ ನಟಿಯೊಬ್ಬರು ದೂರು ದಾಖಲಿಸಿದ್ದರು

ದೂರಿನನ್ವಯ ಪೊಲೀಸರು ರಂಜಿತ್ ಅವರನ್ನು ಮಂಗಳವಾರ (ಮಾ.31) ತಡರಾತ್ರಿ ಇಡುಕ್ಕಿ ಜಿಲ್ಲೆಯ ತೋಡುಪುಳದಲ್ಲಿ ಬಂಧಿಸಿದಿದ್ದಾರೆ. ಅದಾದ ಬಳಿಕ ಅವರನ್ನು ಕೇರಳದ ಜೆಎಫ್‌ಎಂಸಿ (ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್) ಕೋರ್ಟ್ಗೆ ಹಾಜರುಪಡಿಸಿದ್ದು, 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಬಳಿಕ ಅವರನ್ನು ಎರ್ನಾಕುಲಂ ಜೈಲಿಗೆ ಸ್ಥಳಾಂತರಿಸಲಾಗಿದೆ.

ಮ್ಯಾಜಿಸ್ಟ್ರೇಟ್ ನಿವಾಸದ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ನಿರ್ದೇಶಕ ರಂಜಿತ್, ಈ ಆರೋಪ ಸುಳ್ಳು ಎಂದಿದ್ದಾರೆ. ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ ಅವರು ನನ್ನ ವಿರುದ್ಧ ಗಂಭೀರವಾದ ವೈಯಕ್ತಿಕ ಆರೋಪಗಳನ್ನು ಹೊರಿಸಿದ್ದಾರೆ.

Ranjit
ಮನೆಕೆಲಸದವಳಿಗೆ ಲೈಂಗಿಕ ಕಿರುಕುಳ; ‘ಧುರಂದರ್’ ನಟ ನದೀಮ್ ಖಾನ್ ಬಂಧನ

ಇದು ಕೆಲವು ಸಮಯದಿಂದ ನಡೆಯುತ್ತಲೇ ಇದೆ. ನಿಖರವಾಗಿ ಹೇಳುವುದಾದರೆ, ನಾನು ಕೇರಳ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಾಗಿನಿಂದ, ಒಂದು ಗುಂಪು ಬಹಳ ಸಮಯದಿಂದ ನನ್ನ ವ್ಯಕ್ತಿತ್ವ ಹಾಳು ಮಾಡಲು ಪ್ರಯತ್ನಿಸುತ್ತಿದೆ ಎಂದಿದ್ದಾರೆ.

ಕೇರಳದಲ್ಲಿ, ರಂಜಿತ್ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ವ್ಯಾಪಕ ಕೂಗುಗಳು ಕೇಳಿಬಂದವು, ಚಲನಚಿತ್ರ ನಿರ್ಮಾಪಕ ಡಾ. ಬಿಜು ಅವರಂತಹ ಪ್ರಮುಖರು ರಾಜಿನಾಮೆಗೆ ಆಗ್ರಹಿದ್ದಾರೆ. ಸದ್ಯ ಕೊಚ್ಚಿ ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ಈ ಪ್ರಕರಣದ ತನಿಖೆ ನಡೆಸುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com