

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ 'ಟಾಕ್ಸಿಕ್ ' ಸಿನಿಮಾದ ಕಿಲ್ಲರ್ ಪೋಸ್ಟರ್ ಗಳು ಡಿಸೆಂಬರ್ ತಿಂಗಳಿನಲ್ಲಿ ವೈರಲ್ ಆಗಿತ್ತು. ಯಶ್ ಅವರ ರಗಡ್ ಲುಕ್ ಹಾಗೂ ನಯನ ತಾರಾ ಅವರ ಗಂಗಾ ಪಾತ್ರದ ಅವತಾರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಈ ಮಧ್ಯೆ ಇದೀಗ ನಯನ ತಾರಾ ಮತ್ತು ಯಶ್ ಅವರ BTS ವಿಡಿಯೋವೊಂದು ಆನ್ ಲೈನ್ ನಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ ನಯನ ತಾರಾ ವ್ಯಕ್ತಿಯೊಬ್ಬರ ಬಳಿಗೆ ಹೋಗಿ ಹ್ಯಾಂಡ್ ಶೇಕ್ ಮಾಡ್ತಾರೆ. ಯಶ್ ಕೂಡಾ ಅದೇ ರೀತಿ ಮಾಡ್ತಾರೆ.
ನಯನ ತಾರಾ ಕಪ್ಪು ಗೌನ್‌ನಲ್ಲಿ ಆಕರ್ಷಕವಾಗಿ ಕಾಣುತ್ತಿದ್ದರೆ, ಯಶ್ ಬಿಳಿ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಹಿಂಭಾಗದಲ್ಲಿ ಹುಮಾ ಖುರೇಷಿಯೂ ಕಾಣಿಸುತ್ತಾರೆ. ಇವರು ಎಲಿಜಬೆತ್ ಪಾತ್ರ ಮಾಡುತ್ತಿದ್ದಾರೆ. ಅಭಿಮಾನಿಗಳು ಆರಂಭಿಕ ಚಿತ್ರದ ಪೋಸ್ಟರ್ ಹಾಗೂ ಈಗ BTS ವಿಡಿಯೋಗಳನ್ನು ಆಧರಿಸಿ, ಟಾಕ್ಸಿಕ್, 'ಬಾಂಬೆ ವೆಲ್ವೆಟ್' ಮತ್ತು 'ಪೀಕಿ ಬ್ಲೈಂಡರ್' ಸಿನಿಮಾಗಳ ನಡುವೆ ವಿವಿಧ ಹೋಲಿಕೆಗಳನ್ನು ಮಾಡುತ್ತಿದ್ದಾರೆ.
Advertisement