

ಯಶ್ ನಟಿಸಿರುವ 'ಟಾಕ್ಸಿಕ್' ಚಿತ್ರದ ಐದನೇ ನಾಯಕಿಯ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಕಾಂತಾರದಲ್ಲಿ ಯುವ ರಾಣಿಯಾಗಿ ಮಿಂಚಿದ್ದ, ಡಿ ಗ್ಲ್ಯಾಮರಸ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ರುಕ್ಮಿಣಿ ವಸಂತ್ ಅವರನ್ನು ಟಾಕ್ಸಿಕ್ ಚಿತ್ರತಂಡ 5ನೇ ನಾಯಕಿಯಾಗಿ ಘೋಷಿಸಿದೆ.
ಗ್ಲ್ಯಾಮರ್ ಲುಕ್‌ನಲ್ಲಿ ರುಕ್ಮಿಣಿ ವಸಂತ್ ಕಾಣಿಸಿಕೊಂಡಿದ್ದು ಅವರ ಪಾತ್ರದ ಹೆಸರು ಮೆಲ್ಲಿಸಾ ಅನ್ನೋದಾಗಿ ಚಿತ್ರತಂಡ ಘೋಷಿಸಿದೆ.
ಟಾಕ್ಸಿಕ್ ಚಿತ್ರದಲ್ಲಿ ಐವರು ಪ್ರಖ್ಯಾತ ನಟಿಯರು ನಟಿಸಿದ್ದಾರೆ. ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾನಿ, ಬಹುಭಾಷಾ ನಟಿ ನಯನತಾರಾ, ಹುಮಾ ಖುರೇಶಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್. ಟಾಕ್ಸಿಕ್ ಚಿತ್ರದಲ್ಲಿ ನಟಿಸುವುದು ಕನಸಾಗಿತ್ತು, ಅದು ಈಡೇರಿದೆ. ಚಿತ್ರದಲ್ಲಿ ಅವಕಾಶ ನೀಡಿದ್ದಕ್ಕೆ ಆಭಾರಿ ಎಂದು ರುಕ್ಮಿಣಿ ವಸಂತ್ ಹೇಳಿಕೊಂಡಿದ್ದಾರೆ.
ಕಳೆದೊಂದು ತಿಂಗಳಿಂದ ಯಶ್ ಮತ್ತು ಚಿತ್ರತಂಡ ತಮ್ಮ ಚಿತ್ರದ ನಟಿಯರ ಪರಿಚಯ ಮಾಡಿಕೊಡುತ್ತಿದ್ದರು. ಇದೀಗ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿರುವ ಐದನೇ ನಾಯಕಿಯ ರುಕ್ಮಿಣಿ ವಸಂತ್ ಇಂಟ್ರುಡಕ್ಷನ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಒಟ್ಟು ಐವರು ನಾಯಕಿಯ ಅನಾವರಣ ಆಗಿದೆ.
ಇದೇ ಜನವರಿ 8ಕ್ಕೆ ಯಶ್ ಹುಟ್ಟುಹಬ್ಬವಿದ್ದು ಟೀಸರ್ ರಿಲೀಸ್ ಆಗುವ ಸಾಧ್ಯತೆ ಇದೆ. ಗೀತು ಮೋಹನ್ ದಾಸ್ ನಿರ್ದೇಶನದ ಚಿತ್ರ ಮಾರ್ಚ್ 19ರಂದು ತೆರೆಗೆ ಬರಲಿದೆ.
Advertisement