

ಬಿಗ್ ಬಾಸ್ ಕನ್ನಡ ಸೀಸನ್ 12 (BiggBoss Kannada 12)ಫಿನಾಲೆ ನೋಡಲು ಅನೇಕ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಈ ಬಾರಿ ಯಾರು ವಿನ್ ಆಗಬಹುದೆಂಬ ಲೆಕ್ಕಾಚಾರ, ಚರ್ಚೆ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ನಡೆಯುತ್ತಿದೆ.
ಈ ಮಧ್ಯೆ ಈ ಸೀಸನ್ ನಲ್ಲಿ ಕಲರ್ಸ್ ಕನ್ನಡ ಚಾನೆಲ್ ವಿಶೇಷ ಮಾರ್ಪಾಡು ಮಾಡಿದೆ. ಇಂದು ಜನವರಿ 17 ಮತ್ತು ನಾಳೆ ಜನವರಿ 18 ರಂದು ಎರಡು ದಿನಗಳ ಫಿನಾಲೆ ಎಪಿಸೋಡ್ ಪ್ರಸಾರಗೊಳ್ಳಬೇಕಿತ್ತು. ಆದರೆ, ಈ ಬಾರಿ ಫಿನಾಲೆ ಕೇವಲ ಒಂದು ದಿನ ನಾಳೆ ಭಾನುವಾರ ಮಾತ್ರ ನಡೆಯಲಿದೆ. ಇಂದು ಪ್ರಿ ಫಿನಾಲೆ ನಡೆಯಲಿದೆ ಎಂದು ವಾಹಿನಿ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ.
ಒಂದೇ ದಿನ ಫಿನಾಲೆ
ಸಾಮಾನ್ಯವಾಗಿ ಬಿಗ್ ಬಾಸ್ ಕನ್ನಡದಲ್ಲಿ ಫಿನಾಲೆ ಎಪಿಸೋಡ್ ಎರಡು ದಿನಗಳ ವಿಶೇಷ ಕಾರ್ಯಕ್ರಮವಾಗಿ ಪ್ರಸಾರವಾಗುತ್ತಿತ್ತು. ಫೈನಲಿಸ್ಟ್‌ಗಳ ಪ್ರದರ್ಶನ, ಹಳೆ ಸ್ಪರ್ಧಿಗಳ ರೀ-ಎಂಟ್ರಿ, ವಿಶೇಷ ಅತಿಥಿಗಳ, ಅವರೊಂದಿಗೆ ನಿರೂಪಕ ಕಿಚ್ಚ ಸುದೀಪ್ ಹರಟೆ, ಮಾತುಕತೆ ಹೀಗೆ ಎರಡು ದಿನ ಕಾರ್ಯಕ್ರಮ ಮಜಾ ಕೊಡುತ್ತಿತ್ತು.
ಆದರೆ ಈ ಬಾರಿ ಸೀಸನ್ 12 ಫಿನಾಲೆ ಒಂದೇ ದಿನ ನಡೆಯಲಿದೆ.
Advertisement