

ಬಿಗ್ ಬಾಸ್ ಕನ್ನಡ ಮಾಜಿ ಸ್ಪರ್ಧಿ ತನಿಷಾ ಕುಪ್ಪಂಡ (Tanisha Kuppanda) ಗೆ ಸ್ಟ್ರೀಟ್ ಫೋಟೋಗ್ರಾಫರ್ ಒಬ್ಬ ನಿನ್ನ ರೇಟ್ ಎಷ್ಟು, ಡೇಟಿಂಗ್ ಗೆ ಬರ್ತೀಯಾ ಎಂದು ಕೇಳಿದ್ದಾನೆ. ಇದರಿಂದ ಆಕ್ರೋಶಗೊಂಡ ನಟಿ ಆ ಫೋಟೋಗ್ರಾಫರ್ ಜನ್ಮ ಜಾಲಾಡಿದ್ದಾರೆ.
ಅತ್ಯಂತ ಕೀಳು ಮಟ್ಟದ ಭಾಷೆಯಲ್ಲಿ ಡೇಟಿಂಗ್ ಬರ್ತೀಯಾ? ನಿನ್ನ ರೇಟ್ ಎಷ್ಟು? ಎಂದು ಮೆಸೇಜ್ ಮಾಡಿದ್ದವನ ಹಿನ್ನೆಲೆ ಚೆಕ್ ಮಾಡಿದ ತನಿಷಾ ಆತನ ಗುರುತನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ. ಅನಿಲ್ ಕುಮಾರ್ ಎಂಬಾತ ಕಳುಹಿಯಿಸಿದ್ದ ಅಸಭ್ಯ ಮೆಸೇಜ್ ಹಾಗೂ ಆತನ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಅನ್ನು ತನಿಷಾ ಸ್ಕ್ರೀನ್‌ಶಾಟ್ ತೆಗೆದು ತಮ್ಮ ಸ್ಟೇಟಸ್‌ನಲ್ಲಿ ಹಾಕಿದ್ದಾರೆ. ನೋಡಿ ಇವನ ಯೋಗ್ಯತೆಯನ್ನು ಎಂದು ಬರೆದುಕೊಂಡಿದ್ದಾರೆ.
ಫೋಟೋಗ್ರಾಫರ್ ಕೃತ್ಯದ ವಿರುದ್ಧ ಇದೀಗ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಕೇವಲ ಸ್ಕ್ರೀನ್‌ಶಾಟ್ ಹಾಕಿದರೆ ಸಾಲದು, ಇಂತಹ ನೀಚರನ್ನು ಜೈಲಿಗಟ್ಟಬೇಕು" ಎಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ.
Advertisement