ಅವತಾರ ಪುರುಷ -2 ಸಿನಿಮಾ ಸ್ಟಿಲ್
ಅವತಾರ ಪುರುಷ -2 ಸಿನಿಮಾ ಸ್ಟಿಲ್

ಅವತಾರ ಪುರುಷ-2 ಚಿತ್ರ ವಿಮರ್ಶೆ: ಹಾರರ್ ಕಥೆಯಲ್ಲಿ ನೋ ಲಾಜಿಕ್- ಓನ್ಲಿ ಮ್ಯಾಜಿಕ್; ವಾಮಾಚಾರವೇ ಹೈಲೈಟ್- ಪ್ರೇಕ್ಷಕ ಪ್ರಭುವಿನದ್ದು 'ತ್ರಿಶಂಕು' ಸ್ಥಿತಿ!

Published on
Rating(2.5 / 5)
Summary

ಅವತಾರ ಪುರುಷ ಸಿನಿಮಾದಲ್ಲಿ ಭಯಾನಕ ಎನಿಸುವಷ್ಟು ಹಾರರ್ ದೃಶ್ಯಗಳಿಲ್ಲ, ನಕ್ಕು ನಗಿಸುವಷ್ಟು ಹಾಸ್ಯ ಸನ್ನಿವೇಶಗಳಲ್ಲಿ, ಶರಣ್ ಕಾಮಿಡಿ ಕೊಂಚ ಮಂಕಾಗಿದೆ ಎನಿಸುತ್ತದೆ. ಮಿತಿಮೀರಿದ ಫ್ಲ್ಯಾಷ್‌ಬ್ಯಾಕ್‌ಗಳು. ಪಾತ್ರದ ಹಠಾತ್ ಸಾವುಗಳು ಗೊಂದಲ ಮೂಡಿಸುತ್ತವೆ.

ಸಿಂಪಲ್ ಸುನಿ ನಿರ್ದೇಶಿಸಿ ಶರಣ್ ನಟಿಸಿದ ಅವತಾರ ಪುರುಷ ಸಿನಿಮಾ ಎರಡು ವರ್ಷಗಳ ಹಿಂದೆ ತೆರೆ ಕಂಡಿತ್ತು, ಈಗ ಅವತಾರ ಪುರುಷ ಸೀಕ್ವೆಲ್ ಬಿಡುಗಡೆಯಾಗಿದೆ. ಓವರ್ ಆ್ಯಕ್ಟಿಂಗ್ ಅನಿಲ್ ಪಾತ್ರದಲ್ಲಿ ಮೊದಲ ಭಾಗದಲ್ಲಿ ಶರಣ್ ಕಾಣಿಸಿಕೊಂಡಿದ್ದರು, ಆದರೆ ಸೀಕ್ವೆಲ್ ನಲ್ಲಿ ಅವರು ಪೂರ್ಣ ಪ್ರಮಾಣದಲ್ಲಿ ಮಂತ್ರವಾದಿಯಾಗಿದ್ದಾರೆ. ಸಿನಿಮಾದ ಮೊದಲ ಭಾಗದಲ್ಲಿ ಶರಣ್ ಹಾಸ್ಯ ಎಲ್ಲರನ್ನು ರಂಜಿಸಿತ್ತು, ಆದರೆ ಎರಡನೇ ಭಾಗದಲ್ಲಿ ಹಾಸ್ಯಕ್ಕೆ ಎಡೆ ಇಲ್ಲದಂತಾಗಿದೆ. ಇದರಲ್ಲಿ ಭಾರತೀಯ ಪುರಾಣಗಳು ಮತ್ತು ಕಾಲ ಜಾದೂ ಮೇಲೆ ಕಥೆ ಕೇಂದ್ರೀಕರಿಸಲಾಗಿದೆ.

ಸಿನಿಮಾದ ಮೊದಲ ಭಾಗದಲ್ಲಿ ನಾಯಕ ನಟ ಕರ್ಣ ಕಣ್ಮರೆಯಾಗಿರುತ್ತಾನೆ, ಜೂನಿಯರ್‌ ಆರ್ಟಿಸ್ಟ್‌ ಆಗಿದ್ದ ಅನಿಲ್ (ಶರಣ್‌), ರಾಮ ಜೊಯೀಸ್‌ (ಸಾಯಿಕುಮಾರ್‌) ಹಾಗೂ ಸುಶೀಲ(ಭವ್ಯಾ) ದಂಪತಿಯ ಮಗನಂತೆ ನಟಿಸುತ್ತಿರುತ್ತಾನೆ. ರಾಮ ಜೋಯೀಸರ ನಿಜವಾದ ಪುತ್ರ ‘ಕರ್ಣ’(ಶ್ರೀನಗರ ಕಿಟ್ಟಿ) ಕುಮಾರನಾಗಿ ಮನೆಗೆ ಬಂದ ನಂತರ ಅನಿಲ ಮನೆಯಿಂದ ಹೊರಬೀಳುತ್ತಾನೆ. ಕ್ಲೈಮ್ಯಾಕ್ಸ್‌ನಲ್ಲಿ ‘ಅನಿಲ’ ಒಬ್ಬ ಮಾಟಗಾರ ಎನ್ನುವುದು ತಿಳಿಯುತ್ತದೆ. ರಾಮ ಜೋಯೀಸರ ಮನೆಯಲ್ಲಿ ಅಷ್ಟದಿಗ್ಬಂಧನ ಹಾಕಿ ಇಟ್ಟಿದ್ದ ತ್ರಿಶಂಕು ಮಣಿ ಪಡೆಯಲು ‘ಕುಮಾರ’ ನಡೆಸುವ ಮಂತ್ರ–ತಂತ್ರಗಳಿಂದ ಎರಡನೇ ಭಾಗದ ಕಥೆ ಆರಂಭವಾಗುತ್ತದೆ. ತ್ರಿಶಂಕು ಸ್ವರ್ಗದ ಪರ್ಯಾಯ ಜಗತ್ತಿನಲ್ಲಿ ಜೀವನ ಹುಡುಕುವ ಕಥೆಯಾಗಿದೆ ಅವತಾರ ಪುರುಷ.

ಶರಣ್ ಮತ್ತು ಅನುಭವಿ ನಟರಾದ ಸಾಯಿಕುಮಾರ್, ಅಶುತೋಷ್ ರಾಣಾ ಮತ್ತು ಇತರರ ಬಹುಮುಖ ಅಭಿನಯ ಸೇರಿದಂತೆ ಶ್ರೀಮಂತ ನಿರ್ಮಾಣ ಮತ್ತು ಆಸಕ್ತಿದಾಯಕ ಪಾತ್ರವರ್ಗವು ಅವತಾರ ಪುರುಷನ ಹೈಲೈಟ್. ಆಶಿಕಾ ರಂಗನಾಥ್ ಮತ್ತು ಶ್ರೀನಗರ ಕಿಟ್ಟಿ ಪಾತ್ರ ಚಿಕ್ಕದಾಗಿದ್ದರೂ ಗಮನಾರ್ಹವಾದ ಪ್ರಭಾವ ಬೀರಿದೆ, ಸಾಧು ಕೋಕಿಲಾ ಅವರ ಹಾಸ್ಯ ಎಂದಿನಂತೆ ನಕ್ಕು ನಗಿಸುತ್ತದೆ.

ವಿಲಿಯಂ ಡೇವಿಡ್ ತಮ್ಮ ಛಾಯಾಗ್ರಹಣದ ಮೂಲಕ ಪರಿಸ್ಥಿತಿ ಹೊಂದಿಸಿದ್ದಾರೆ ಮತ್ತು ಅರ್ಜುನ್ ಜನ್ಯ ಅವರ ಹಿನ್ನೆಲೆ ಸಂಗೀತ ಚಿತ್ರದ ಮಾಧುರ್ಯವನ್ನು ಹೆಚ್ಚಿಸಿದೆ. ಸುನಿ ಮತ್ತು ಶರಣ್ ನಡುವಿನ ಸಹಯೋಗದಲ್ಲಿ ಮೂಡಿ ಬಂದಿದ್ದ ಅವತಾರ ಪುರುಷ ಮೊದಲ ಭಾಗ ನೋಡಿದ್ದ ಪ್ರೇಕ್ಷಕರು ಈ ಜೋಡಿ ಬಗ್ಗೆ ಹೆಚ್ಚಿನ ನಿರೀಕ್ಷೆ ಇಟ್ಟಿಕೊಂಡಿದ್ದರು. ಅವತಾರ ಪುರುಷ ಸೀಕ್ವೆಲ್ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆಯೇ ಕಾದು ನೋಡಬೇಕು.

ಕುಮಾರನ (ಶ್ರೀನಗರ ಕಿಟ್ಟಿ) ಆಗಮನದಿಂದ ಅನಿಲ (ಶರಣ) ಅವರ ನಿಜಸ್ವರೂಪ ಬಯಲಾಗಿದೆ. ಅನಿಲ ಮತ್ತು ಕುಮಾರ ಇಬ್ಬರೂ ತ್ರಿಶಂಕು ಮಣಿಗಾಗಿ ಹೋರಾಟ ನಡೆಸುತ್ತಾರೆ. ಈ ವೇಳೆ ಅನಿಲಾ ಸಿರಿ ಜೊತೆಯಲ್ಲಿ (ಆಶಿಕಾ ರಂಗನಾಥ್), ಮಾಟಮಂತ್ರ ಮತ್ತು ವಾಮಾಚಾರದಲ್ಲಿ ತೊಡಗಿಸಿಕೊಂಡಿರುವ ತನ್ನ ಹಿಂದಿನ ಜೀವನದ ಬಗ್ಗೆ ಹೇಳುತ್ತಾನೆ. ನಂತರ ಈ ಕತ್ತಲೆ ಕೂಪದಿಂದ ತಪ್ಪಿಸಿಕೊಳ್ಳುವ ಮತ್ತು ಆಧ್ಯಾತ್ಮಿಕ ಮಾರ್ಗದರ್ಶಕರ ಅಡಿಯಲ್ಲಿ ವಿಮೋಚನೆ ಕಂಡುಕೊಳ್ಳಲು ಬಯಸುತ್ತಾನೆ. ದಾರಕ ತ್ರಿಶಂಕು ಮಣಿಯನ್ನು ಹುಡುಕಿದಾಗ, ಎರಡೂ ಜಗತ್ತುಗಳ ಪರಿಚಯವಿರುವ ಅನಿಲ, ಜೋಯಿಸ್ ಕುಟುಂಬಕ್ಕೆ ಸಹಾಯ ಮಾಡಲು ನಿರ್ಧರಿಸುತ್ತಾನೆ. ತ್ರಿಶಂಕು ಮಣಿಯನ್ನು ವಶಪಡಿಸಿಕೊಳ್ಳುವ ಅನಿಲನ ಯೋಜನೆಗಳು ಫಲಿಸುತ್ತವೆಯೇ ಎಂಬುದನ್ನು ತಿಳಿದುಕೊಳ್ಳಲು ಸಿನಿಮಾ ನೋಡಬೇಕು. ಈ ಕಥೆ ಇಲ್ಲಿಗೆ ಸುನಿ ಮತ್ತೊಂದು ಪ್ರಾಜೆಕ್ಟ್ ಬಗ್ಗೆ ಸುಳಿವು ನೀಡಿದ್ದಾರೆ.

ತ್ರಿಶಂಕುವಿನ ಪ್ರಪಂಚದ ಐತಿಹಾಸಿಕ ಕಥನಗಳಲ್ಲಿ ಚಿತ್ರಿಸಿರುವಂತೆ, 'ತ್ರಿಶಂಕು ತನ್ನ ಮರ್ತ್ಯ ರೂಪದಲ್ಲಿ ಸ್ವರ್ಗದ ಅನ್ವೇಷಣೆ ಮಾಡುವಾಗ ತನ್ನದೇ ಆದ ಸೃಷ್ಟಿಯ ವಿಶಿಷ್ಟ ಕ್ಷೇತ್ರಕ್ಕೆ ಕಾರಣವಾಯಿತು. ಇದೊ ತ್ರಿಶಂಕು ಲೋಕ. ಸಿನಿಮಾ ಹಾಸ್ಯ ಮತ್ತು ಮಾಟಮಂತ್ರದ ನಡುವಿನ ತೆರೆದುಕೊಳ್ಳುತ್ತದೆ. ಸಿನಿಮಾದಲ್ಲಿ ಹಲವು ಸನ್ನಿವೇಶಗಳು ತರ್ಕಬದ್ಧವಾಗಿಲ್ಲ. ಮತ್ತು ಒಂದಕ್ಕೊಂದು ಸಂಬಂಧವಿಲ್ಲದಂತೆ ಸಂದರ್ಭಗಳು, ದೃಶ್ಯಗಳ ಹಠಾತ್ ಬದಲಾವಣೆ, ಮಿತಿಮೀರಿದ ಫ್ಲಾಶ್ ಬ್ಯಾಕ್ ಗಳು ನೋಡುಗರಿಗೆ ಕಿರಿಕಿರಿ ಎನಿಸುತ್ತವೆ. ಇದೊಂದು ಕಾಲ್ಪನಿಕ ಕಥೆಯಾಗಿದೆ. ಆದರೆ ಕತೆಗೆ ಬೇಕಾಗಿರುವ ಕೌತುಕ ಮತ್ತು ಭಯಾನಕ ಎಂಬಂತ ದೃಶ್ಯಗಳಿಲ್ಲ, ಶರಣ್ ಹಾಸ್ಯ ಯಾಕೋ ಸ್ವಲ್ಪ ಮಂಕಾದಂತಿದೆ.

ಕೆಲವು ಸನ್ನಿವೇಶಗಳಲ್ಲಿ ಸುನಿ ಮಾಡಿರುವ ಪ್ರಯೋಗ ಅಸಮಂಜಸವೆಂದು ಭಾವಿಸುತ್ತದೆ. ತ್ರಿಶಂಕು ಪ್ರಪಂಚದಂತೆಯೇ, ಅವತಾರ ಪುರುಷ 2 ಕಥೆ ಕೂಡ ತ್ರಿಶಂಕು ಪರಿಸ್ಥಿತಿಯಾಗಿದೆ. ಕೆಲವು ದೃಶ್ಯಗಳ ನಡುವೆ ಹಠಾತ್ ಬದಲಾವಣೆಗಳು ಮತ್ತು ಮಿತಿಮೀರಿದ ಫ್ಲ್ಯಾಷ್‌ಬ್ಯಾಕ್‌ಗಳು. ಪಾತ್ರದ ಹಠಾತ್ ಸಾವುಗಳು ಗೊಂದಲ ಮೂಡಿಸುತ್ತವೆ.

ಕಿಟ್ಟಿ ಮತ್ತು ಸುಧಾರಾಣಿ ಪಾತ್ರಗಳು ಸ್ವಲ್ಪ ವಿಶೇಷವಾಗಿವೆ. ಹಾಸ್ಯದ ಚಿತ್ರದ ಪ್ರಯತ್ನಗಳು ಕೇವಲ ಕೆಲಸ ಮಾಡುತ್ತವೆ ಮತ್ತು ಚಲನಚಿತ್ರ ನಿರ್ಮಾಪಕರು ದೃಶ್ಯ ಪರಿಣಾಮಗಳೊಂದಿಗೆ ತಮ್ಮ ಅತ್ಯುತ್ತಮ ಪ್ರಯತ್ನವನ್ನು ತೋರುತ್ತಿದ್ದಾರೆ. ಅನಿಲ ಮತ್ತು ದಾರಕ ನಡುವಿನ ಹೋರಾಟದ ಪರಾಕಾಷ್ಠೆಯು ಅಸಂಬದ್ದವಾಗಿ ಕೊನೆಗೊಳ್ಳುತ್ತದೆ. ಅವತಾರ ಪುರುಷನ ಎರಡನೇ ಭಾಗದಲ್ಲಿ ವಿಎಫ್‌ಎಕ್ಸ್‌ ಹೆಚ್ಚಿನ ಪ್ರಮಾಣದಲ್ಲಿದೆ. ಕ್ಲೈಮ್ಯಾಕ್ಸ್‌ ಹಂತ ತಲುಪುತ್ತಾ ವಿಎಫ್‌ಎಕ್ಸ್‌ ಬಹಳ ಕೃತಕವಾಗಿದೆ. ಕೆಲ ದೃಶ್ಯಗಳ ನೈಜತೆಯನ್ನು ಇದು ಹಳಿತಪ್ಪಿಸಿದೆ.

ಚಿತ್ರವು ಹಲವು ವೈರುಧ್ಯಗಳ ನಡುವೆ ತನ್ನ ನೆಲೆಯನ್ನು ಕಂಡುಕೊಳ್ಳಲು ಹೆಣಗಾಡುತ್ತಿದೆ. ಮೊದಲ ಚಿತ್ರದಲ್ಲಿನ ದೃಶ್ಯಗಳಿಗೆ ಹೋಲಿಸಿದರೆ ಆಶಿಕಾ ರಂಗನಾಥ್ ಅವರ ಸ್ಕ್ರೀನ್ ಟೈಮ್ ಕಡಿಮೆ. ಸಾಯಿಕುಮಾರ್ ಮತ್ತು ಶರಣ್ ನಡುವಿನ ಕೆಲವು ಸನ್ನಿವೇಶಗಳು ಮನಸ್ಸಿಗೆ ಹಿಡಿಸುತ್ತವೆ. ಒಟ್ಟಿನಲ್ಲಿ ಸಿನಿಮಾ ಪ್ರೇಕ್ಷಕರನ್ನು ಸಂಪೂರ್ಣವಾಗಿ ತೃಪ್ತಿಪಡಿಸಲು ವಿಫಲವಾಗಿದೆ. ಅತೀಂದ್ರಿಯ ಶಕ್ತಿಯ ಅಭಿಮಾನಿಗಳಿಗೆ, ಅವತಾರ ಪುರುಷ 2 ಸಿನಿಮಾದಲ್ಲಿ ಸ್ವಲ್ಪ ನಗು ಮತ್ತು ಮ್ಯಾಜಿಕ್ ಕಾಣುತ್ತದೆ. ಒಟ್ಟಿನಲ್ಲಿ ಅವತಾರ ಪುರುಷ-2 ನಲ್ಲಿ ಪೂರ್ಣ ಹಾಸ್ಯವಿಲ್ಲ, ಜೊತೆಗೆ ಸಂಪೂರ್ಣವಾಗಿ ಹಾರರ್ ಅಂಶಗಳು ಇಲ್ಲ ಪ್ರೇಕ್ಷಕ ಪ್ರಭುವಿನದ್ದು ತ್ರಿಶಂಕು ಪರಿಸ್ಥಿತಿ.

ಸಿನಿಮಾ: ಅವತಾರ ಪುರುಷ-2

ನಿರ್ದೇಶನ: ಸಿಂಪಲ್ ಸುನಿ

ಕಲಾವಿದರು: ಶರಣ್, ಆಶಿಕಾ ರಂಗನಾಥ್, ಶ್ರೀನಗರ ಕಿಟ್ಟಿ, ಸುಧಾರಾಣಿ ಮತ್ತು ಇತರರು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com