ಫಾರ್​ ರಿಜಿಸ್ಟ್ರೇಷನ್ ಸಿನಿಮಾ ಸ್ಟಿಲ್
ಫಾರ್​ ರಿಜಿಸ್ಟ್ರೇಷನ್ ಸಿನಿಮಾ ಸ್ಟಿಲ್

'ಫಾರ್​ ರಿಜಿಸ್ಟ್ರೇಷನ್' ಚಿತ್ರ ವಿಮರ್ಶೆ: ಕೊಂಚ ಸಸ್ಪೆನ್ಸ್, ಫುಲ್ ರೋಮ್ಯಾನ್ಸ್; ಪೃಥ್ವಿ-ಮಿಲನಾ ಕೆಮಿಸ್ಟ್ರಿ ಸೂಪರ್!

ಚಿತ್ರದ ಟೈಟಲ್ ಮೂಲಕವೇ ಸಾಕಷ್ಟು ಗಮನ ಸೆಳೆದಿದ್ದ ‘ಫಾರ್​ ರಿಜಿಸ್ಟ್ರೇಷನ್' ಸಿನಿಮಾ ಥಿಯೇಟರ್ ಗಳಲ್ಲಿ ರಿಲೀಸ್ ಆಗಿದೆ. ನಟ ಪೃಥ್ವಿ ಅಂಬರ್ ಮತ್ತು ಮಿಲನಾ ನಾಗರಾಜ್ ಪ್ರೆಶ್ ಕಾಂಬಿನೇಶನ್ ಸಖತ್ ಮೋಡಿ ಮಾಡಿದೆ.
Rating(3.5 / 5)

ಚಿತ್ರದ ಟೈಟಲ್ ಮೂಲಕವೇ ಸಾಕಷ್ಟು ಗಮನ ಸೆಳೆದಿದ್ದ 'ಫಾರ್​ ರಿಜಿಸ್ಟ್ರೇಷನ್' ಸಿನಿಮಾ ಥಿಯೇಟರ್ ಗಳಲ್ಲಿ ರಿಲೀಸ್ ಆಗಿದೆ. ನಟ ಪೃಥ್ವಿ ಅಂಬರ್ ಮತ್ತು ಮಿಲನಾ ನಾಗರಾಜ್ ಫ್ರೆಶ್ ಕಾಂಬಿನೇಶನ್ ಸಖತ್ ಮೋಡಿ ಮಾಡಿದೆ. ಇಬ್ಬರೂ ಕಲಾವಿದರು ರೊಮ್ಯಾನ್ಸ್ ಮತ್ತು ಫ್ಯಾಮಿಲಿ ಕಥೆ ಎರಡಕ್ಕೂ ಹೊಂದಿಕೊಳ್ಳುವ ಪ್ರತಿಭೆ ಹೊಂದಿದ್ದಾರೆ.

ದಿಯಾ ಮೂಲಕ ಪೃಥ್ವಿ ಅಂಬರ್, ಲವ್ ಮಾಕ್ಟೇಲ್ 1 ಮತ್ತು 2 ಹಾಗೂ ಕೌಸಲ್ಯ ಸುಪ್ರಜಾ ರಾಮ ಸಿನಿಮಾಗಳಲ್ಲಿ ತಮ್ಮ ಸೂಕ್ಷ್ಮ ಅಭಿನಯದ ಮೂಲಕ ಮಿಲನಾ ಗಮನ ಸೆಳೆದಿದ್ದಾರೆ. ಇನ್ನೂ ಫಾರ್​ ರಿಜಿಸ್ಟ್ರೇಷನ್ ಕಥೆಗೆ ಬಂದರೆ, ಸಿನಿಮಾ ಮೊದಲರ್ಧ ಲವ್ ರೊಮ್ಯಾನ್ಸ್ ಗೆ ಮೀಸಲಾಗಿದೆ, ದ್ವಿತಿಯಾರ್ಧದಲ್ಲಿ ಸಸ್ಪೆನ್ಸ್ ಫೋಟೋ ಒಂದು ಕಥೆಗೆ ಟ್ವಿಸ್ಟ್ ಕೊಡುತ್ತದೆ.

ವಕೀಲರ ಮುಂದೆ ಈ ಜೋಡಿ ಹಾಜರಾಗುವ ಮೂಲಕ ಕಥೆ ಆರಂಭವಾಗುತ್ತದೆ. ಕಂಪನಿಯೊಂದರಲ್ಲಿ ಮಾರ್ಕೆಂಟಿಂಗ್ ಮ್ಯಾನೇಜರ್ ಆಗಿರುವ ಅಕ್ಷಯ್ (ಪೃಥ್ವಿ) ಮತ್ತು ಟ್ರಾವೆಲ್ ಏಜೆನ್ಸಿ ನಡೆಸುತ್ತಿರುವ ಅನ್ವಿತಾ (ಮಿಲನಾ) ನಡುವೆ ಪ್ರೀತಿ ಚಿಗುರುತ್ತದೆ. ಮನೆಯವರಿಗೆ ಹೇಳದೇ, ಈ ಜೋಡಿ ಗುಟ್ಟಾಗಿ ಮದುವೆ ಕೂಡ ಆಗುತ್ತದೆ. ಆದರೆ ಈ ರಹಸ್ಯ ಮದುವೆ ಕುಟುಂಬದವರಿಗೆ ತಿಳಿದು, ಸಂಪ್ರದಾಯ ಬದ್ದವಾಗಿ ಜನರಿಗೆ ಗೊತ್ತಾಗುವಂತೆ ಮದುವೆ ಮಾಡೋಣ ಎಂಬ ನಿರ್ಧಾರಕ್ಕೆ ಬರುತ್ತಾರೆ. ಆನಂತರ ಏನಾಗುತ್ತದೆ ಎಂಬುದೇ 'ಫಾರ್ ರಿಜಿಸ್ಟ್ರೇಷನ್' ಸಿನಿಮಾ ಕಥೆ.

ನವೀನ್ ದ್ವಾರಕನಾಥ್ ತಮ್ಮ ಮೊದಲ ಪ್ರಯತ್ನದಲ್ಲೇ ಫ್ಯಾಮಿಲಿ ಆಡಿಯೆನ್ಸ್ ಕಡೆಗೆ ಹೆಚ್ಚಿನ ಗಮನ ನೀಡಿದ್ದಾರೆ. ಮೊದಲ ಸಿನಿಮಾ ಮೂಲಕವೇ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಲವ್, ಮ್ಯಾರೇಜ್ ಸುತ್ತವೇ ಸುತ್ತುವ ಈ ಕಥೆಯಲ್ಲಿ ಸಂಬಂಧಗಳನ್ನು ಕಾಪಾಡಿಕೊಳ್ಳುವುದರ ಬಗ್ಗೆ ಮಹತ್ವ ನೀಡಲಾಗಿದೆ ಹಾಗೆಯೇ ಸಿನಿಮಾ ಮೂಲಕ ಸುಖ ಸಂಸಾರಕ್ಕೆ ಏನು ಬೇಕು ಎಂಬುದರ ಬಗ್ಗೆ ಸಂದೇಶ ಕೂಡ ನೀಡಿದ್ದಾರೆ. ಸಿನಿಮಾ ಮೊದಲರ್ಧವು ಸಿಂಪಲ್ ಆಗಿದೆ ಮತ್ತು ಅಲ್ಲಲ್ಲಿ ನಿಧಾನವಾಗಿ ಸಾಗುತ್ತದೆ. ಆದರೆ ಇಂಟರ್ವಲ್‌ ಹೊತ್ತಿಗೆ ಕಥೆಯು ಒಳ್ಳೆಯ ಟ್ವಿಸ್ಟ್ ಪಡೆದುಕೊಳ್ಳುತ್ತದೆ. ದ್ವಿತಿಯಾರ್ಧದ ಕಥೆಯು ರೊಮ್ಯಾಂಟಿಕ್‌ ಥ್ರಿಲ್ಲರ್‌ನಂತೆ ಸಾಗುತ್ತದೆ.

ಗಂಡ-ಹೆಂಡತಿ ನಡುವೆ ನಂಬಿಕೆ ಎಷ್ಟು ಮುಖ್ಯ, ಸಂಸಾರದಲ್ಲಿ ಮೂರನೇ ವ್ಯಕ್ತಿ ತಲೆ ಹಾಕಿದರೆ ಏನಾಗುತ್ತದೆ ಎಂಬುದನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ಮದುವೆಯಾದ ನಂತರ ಅಕ್ಷಯ್ ನಲ್ಲಿ ಉಂಟಾಗುವ ಬದಲಾವಣೆಯಿಂದ ಅನ್ವಿತಾ ಕಳವಳಕ್ಕೊಳಗಾಗುತ್ತಾಳೆ. ನಿಗೂಢ ಫೋಟೋವೊಂದು ಅವರಿಬ್ಬರ ಮಧ್ಯೆ ವಾದ-ವಿವಾದಕ್ಕೆ ಕಾರಣವಾಗುತ್ತದೆ. ಅಂತಿಮವಾಗಿ ಅವರ ಮದುವೆ ಯಶಸ್ವಿಯಾಗುತ್ತದೆಯೋ ಅಥವಾ ಮುರಿದು ಬೀಳುತ್ತದೆಯೋ ಎಂಬುದನ್ನು ತಿಳಿದುಕೊಳ್ಳಲು ಸಿನಿಮಾ ನೋಡಬೇಕು.

ಪೃಥ್ವಿ ಅಂಬಾರ್ ಮತ್ತು ಮಿಲನಾ ನಾಗರಾಜ್ ರೋಮ್ಯಾಂಟಿಕ್ ಜೋಡಿಯ ಪ್ರೇಕ್ಷಕರ ಗಮನ ಸೆಳೆಯುತ್ತದೆ. ಫ್ರೆಶ್ ಕೆಮಿಸ್ಟ್ರಿ ತೆರೆಯ ಮೇಲೆ ಸಖತ್ ವರ್ಕೌಟ್ ಆಗಿದೆ. ಆನ್-ಸ್ಕ್ರೀನ್ ಸಂಬಂಧ ನೈಜ ಪ್ರೇಮಿಗಳನ್ನು ನಾಚಿಸುವಂತಿದೆ ಮತ್ತು ನಿಜ ಜೀವನದ ದಂಪತಿಯ ಅನುಭೂತಿ ನೀಡುತ್ತದೆ. ತಬಲಾ ನಾಣಿ ತಮ್ಮ ಹಾಸ್ಯದ ಸಂಭಾಷಣೆಗಳೊಂದಿಗೆ ಪ್ರೇಕ್ಷಕರನ್ನು ನಕ್ಕು ನಗಿಸುತ್ತಾರೆ. ಪೋಷಕ ನಟರಾಗಿ ಬಾಬು ಹಿರಣ್ಣಯ್ಯ, ಸುಧಾ ಬೆಳವಾಡಿ, ಅರವಿಂದ್ ಬೋಳಾರ್ ಮತ್ತು ನಯನಾ ಕೂಡ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಸದಾ ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ರವಿಶಂಕರ್ ಅವರು ವಕೀಲರ ಪಾತ್ರಕ್ಕೆ ಕಳೆ ತಂದಿದ್ದಾರೆ. ತಮ್ಮ ಸಂಭಾಷಣೆ ಮೂಲಕ ಗಮನ ಸೆಲೆಯುತ್ತಾರೆ.

ಫಾರ್​ ರಿಜಿಸ್ಟ್ರೇಷನ್ ಸಿನಿಮಾ ಸ್ಟಿಲ್
KTM ಚಿತ್ರ ವಿಮರ್ಶೆ: ಟ್ವಿಸ್ಟ್ ಮೇಲೆ ಟ್ವಿಸ್ಟ್; ವಿವಿಧ ಶೇಡ್ ಗಳಲ್ಲಿ ದೀಕ್ಷಿತ್ ನಟನೆ ಬೆಸ್ಟ್; ಪ್ರೀತಿ- ಸ್ನೇಹದ ಜೊತೆಗೆ ನೀತಿಪಾಠ

ಅಭಿಲಾಷ್ ಮತ್ತು ಅಭಿಷೇಕ್ ಅವರ ಛಾಯಾಗ್ರಹಣ ಉತ್ತಮವಾಗಿದೆ. ಇಮ್ರಾನ್ ಸರ್ದಾರಿಯಾ ಅಂಡರ್ ವಾಟರ್ ಹಾಡಿನ ಶೂಟಿಂಗ್ ಎಲ್ಲರ ಮನ ಸೆಳೆಯುತ್ತದೆ. ಪದೇ ಪದೇ ಬರುವ ಹಾಡುಗಳು ಕಥೆಯ ಓಟಕ್ಕೆ ಕೊಂಚ ಅಡ್ಡಿಪಡಿಸುತ್ತದೆ. ನಿರ್ದೇಶಕ ನವೀನ್ ದ್ವಾರಕ್ ನಾಥ್ ಕಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ತರಬಹುದಿತ್ತು ಎಂದೆನಿಸುತ್ತದೆ. ಹಲವು ಕೊರತೆಗಳಿದ್ದರೂ ಸಿನಿಮಾ ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಹಿಂದೆ ಬಿದ್ದಿಲ್ಲ.

ಚಿತ್ರ: ‘ಫಾರ್​ ರಿಜಿಸ್ಟ್ರೇಷನ್'

ನಿರ್ದೇಶನ: ನವೀನ್ ದ್ವಾರಕ್ ನಾಥ್

ಕಲಾವಿದರು: ಪೃಥ್ವಿ ಅಂಬರ್, ಮಿಲನಾ ನಾಗರಾಜ್, ರವಿಶಂಕರ್

Related Stories

No stories found.

Advertisement

X
Kannada Prabha
www.kannadaprabha.com