ಕೋಟಿ ಸಿನಿಮಾ ಸ್ಟಿಲ್
ಕೋಟಿ ಸಿನಿಮಾ ಸ್ಟಿಲ್

'ಕೋಟಿ' ಸಿನಿಮಾ ವಿಮರ್ಶೆ: ಡಾಲಿ ಮಾಸ್ ಗೂ ಸೈ, ಕ್ಲಾಸ್ ಗೂ ಜೈ; ನಿಯತ್ತು-ಪ್ರಾಮಾಣಿಕತೆಯೇ ಹೈಲೈಟ್; ಸ್ವಲ್ಪ ತಾಳ್ಮೆ ಬೇಕು ಅಷ್ಟೇ!

Rating(3 / 5)

ಕನ್ನಡ ಮನರಂಜನಾ ವಾಹಿನಿಯಲ್ಲಿ ಹಲವು ವರ್ಷಗಳ ಕಾಲ ಅತ್ಯಂತ ಯಶಸ್ವಿಯಾಗಿ ಸೇವೆ ಸಲ್ಲಿಸಿರುವ ಪರಮೇಶ್ವರ್‌ ಗುಂಡ್ಕಲ್‌ ಚೊಚ್ಚಲ ಬಾರಿಗೆ ಕೋಟಿ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಾಕಷ್ಟು ನಿರೀಕ್ಷೆಯೊಂದಿಗೆ ಸಿನಿಮಾ ತಯಾರು ಮಾಡಿದ್ದಾರೆ.

ಡಾಲಿ ಧನಂಜಯ ನಟನೆಯ ಕೋಟಿ ಸಿನಿಮಾಜದಲ್ಲಿ ಪರಮೇಶ್ವರ್ ಮಧ್ಯಮ ವರ್ಗದ ಜನರ ನಿಯತ್ತಿನ ಬದುಕು, ಆರ್ಥಿಕ ಜಂಜಾಟ- ತೊಳಲಾಟ ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ಜನತಾ ನಗರದಲ್ಲಿ ಕೋಟಿ (ಧನಂಜಯ) ತನ್ನ ತಾಯಿ(ತಾರಾ), ಸಹೋದರ(ಪೃಥ್ವಿ ಶಾಮನೂರು) ಮತ್ತು ಸಹೋದರಿ(ತನುಜಾ) ಬದುಕುವಾತ. ಬ್ಯಾಂಕ್ ಸಾಲ, ರೆಫ್ರಿಜರೇಟರ್ ಖರೀದಿಯಂತಹ ಹಣಕಾಸಿನ ವೆಚ್ಚಗಳನ್ನುಎಚ್ಚರಿಕೆಯಿಂದ ನಿಭಾಯಿಸುವ ಮಧ್ಯಮ ವರ್ಗದ ಬದುಕು ಆತನದ್ದು. ಡಾನ್ ದಿನೂ ಸಾವ್ಕಾರ್‌ (ರಮೇಶ್‌ ಇಂದಿರಾ) ನಿಂದ ಟ್ರಕ್‌ ಬಾಡಿಗೆಗೆ ಪಡೆದು ಸಣ್ಣ ಮೂವರ್ಸ್‌ ಮತ್ತು ಪ್ಯಾಕರ್ಸ್‌ ಬಿಸ್ನೆಸ್‌ ನಡೆಸುತ್ತಾನೆ. ಈ ಬಿಸ್ನೆಸ್‌ ಇಲ್ಲದೆ ಇರುವಾಗ ಕ್ಯಾಬ್‌ ಡ್ರೈವರ್‌ ಆಗಿಯೂ ದುಡಿಯುತ್ತಾನೆ. ಮೂವರ್ಸ್ ಮತ್ತು ಪ್ಯಾಕರ್ಸ್ ಲಾರಿ ಓಡಿಸಿಕೊಂಡು ಹಣ ಸಂಪಾದಿಸುವ ಕೋಟಿಗೆ ತನ್ನದೆ ಆದ ಕ್ಯಾಬ್ ಹೊಂದುವ ಮಹಾದಾಸೆ ಇರುತ್ತದೆ.

ಕೋಟಿ ಪ್ರಾಮಾಣಿಕತೆಯ ಬಗ್ಗೆ ಹೆಮ್ಮೆ ಪಡುವ ದಿನೂ ಸಾಹುಕಾರ ತನ್ನ ವೈಯಕ್ತಿಕ ಲಾಭಕ್ಕಾಗಿ ಆತನನ್ನು ದುರ್ಬಳಕೆ ಮಾಡಲು ಪ್ರಯತ್ನಿಸುತ್ತಾನೆ. ದೀನೂ ಸಾಹುಕಾರನಿಂದ ಪಡೆದ ಸಾಲವೇ ಕೋಟಿಗೆ ಶೂಲವಾಗುತ್ತದೆ. ಸಾಹುಕಾರನಿಂದ ಪಡೆದ ಹಣವನ್ನು ಕೋಟಿ ವಾಪಸ್ ಹೇಗೆ ನೀಡುತ್ತಾನೆ, ಪ್ರಾಮಾಣಿಕನಾಗಿರುವ ಕೋಟಿಗೆ ಕೋಟ್ಯಾಧೀಶ್ವರ ಆಗೋ ಬಯಕೆ. ಅದು ಸಾಧ್ಯವಿಲ್ಲ ಎಂದು ಎಲ್ಲರೂ ಹೇಳಿದರೆ ಅದನ್ನು ಒಪ್ಪೋಕೆ ಆತ ರೆಡಿ ಇಲ್ಲ. ಕೊನೆಯಲ್ಲಿ ಕೋಟಿ ಹಣ ಮಾಡುತ್ತಾನಾ? ಪ್ರಾಮಾಣಿಕತೆ ಬಿಟ್ಟು ಕೆಟ್ಟ ಹಾದಿ ಹಿಡಿಯುತ್ತಾನಾ? ಅನ್ನೋ ಕುತೂಹಲಕ್ಕೆ ಸಿನಿಮಾದಲ್ಲಿ ಉತ್ತರ ಕಂಡುಕೊಳ್ಳಬೇಕು.

ಕೋಟಿ ಸಿನಿಮಾ ಸ್ಟಿಲ್
ಪರಮ್ ನಿರ್ದೇಶನದ 'ಕೋಟಿ' ಸಿನಿಮಾ ಘೋಷಣೆ; ಡಾಲಿ ಧನಂಜಯ್ ನಾಯಕ, ಪೋಸ್ಟರ್ ಬಿಡುಗಡೆ

ನಾಯಕಿಯಾಗಿ ಮೋಕ್ಷ ಕುಶಾಲ್ ನವಮಿ ಪಾತ್ರದಲ್ಲಿ ಉತ್ತಮವಾಗಿ ನಟಿಸಿದ್ದಾರೆ. ಚಾರ್ಟರ್ಡ್ ಅಕೌಂಟೆಂಟ್ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಕ್ಯಾಬ್ ರೈಡ್ ಮೂಲಕ ಪರಿಚಯವಾಗುವ ನವಮಿ ಕೋಟಿಯ ಜೀವನದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಸಾಲ ತೀರಿಸಲು ಕೋಟಿ ತನ್ನ ಕಳೆದು ಹೋದ ಜೀವನ ಘನತೆಯನ್ನು ಮರಳಿ ಪಡೆಯುವ ಸಂಕಲ್ಪ ಪ್ರೇಕ್ಷಕರ ಗಮನ ಸೆಳೆಯುತ್ತದೆ. ಒಮ್ಮೆ ಜೀವನದ ಸವಾಲುಗಳನ್ನು ಧಿಕ್ಕರಿಸಿದ ಕೋಟೆ ತನ್ನ ಹೋರಾಟಗಳನ್ನು ನೇರವಾಗಿ ಎದುರಿಸುತ್ತಾನೆ. ಆ

ಮೂಲಕ ಧನಂಜಯ್ ಕಾಮನ್ ಮ್ಯಾನ್ ನ ಕಥೆಯಲ್ಲಿ ಸಹಜಾಭಿನಯದ ಮೂಲಕ ಇಷ್ಟವಾಗುತ್ತಾರೆ. ಡಾಲಿ ಕೋಟಿಯ ಪಾತ್ರದಲ್ಲಿ ಜೀವಿಸಿದ್ದಾರೆ. ಮಧ್ಯಮ ವರ್ಗದ ಜನತೆಗಿರುವಂತೆ ಕೋಟಿಗಿರುವ ಕನಸುಗಳು ನೈಜತೆಗೆ ಹತ್ತಿರವಾದವು ಎನ್ನಿಸುತ್ತದೆ. ಧನಂಜಯ ಮತ್ತು ರಮೇಶ್ ಇಂದಿರಾ ಅವರ ಕಾರಣದಿಂದ ಚಿತ್ರ ಬೇಸರ ತರಿಸದು. ಸಿನಿಮಾದಲ್ಲಿ ಉತ್ತಮ ನಿರೂಪಣೆ, ಹದವಾದ ಹಾಸ್ಯ, ಸೆಂಟಿಮೆಂಟ್ ಬೆರೆಸುವಲ್ಲಿ ಪರಮೇಶ್ವರ್ ಸಾಕಷ್ಟು ಕೆಲಸ ಮಾಡಿದ್ದಾರೆ. ಚೊಚ್ಚಲ ಸಿನಿಮಾವನ್ನು ಕುಶಲತೆಯಿಂದ ಕಟ್ಟಿ ಪ್ರೇಕ್ಷಕನಿಗೆ ಮನರಂಜನೆ ಉಣಬಡಿಸಲು ಸಾಕಷ್ಟು ಪ್ರಯತ್ನಿಸಿದ್ದಾರೆ.

ಸಿನಿಮಾದ ಮೊದಲಾರ್ದ ಸ್ವಲ್ಪ ಮಂದಗತಿಯಲ್ಲಿ ಸಾಗುತ್ತದೆ, ಚಿತ್ರದ ದ್ವಿತೀಯಾರ್ಧದಲ್ಲಿ ಕೆಲ ಅನಿರೀಕ್ಷಿತ ತಿರುವುಗಳು ಕಂಡು ಬರುತ್ತವೆ. ಕೆಲವು ಹಾಡುಗಳು ಗಮನ ಸೆಳೆಯುತ್ತವೆ, ಎಂದಿನಂತೆ ರಮೇಶ್ ಇಂದಿರಾ ಖಳನಾಯಕನ ಪಾತ್ರದಲ್ಲಿ ಖಡಕ್ ಡೈಲಾಗ್ ಹೊಡೆದು ಚಪ್ಪಾಳೆ ಗಿಟ್ಟಿಸುತ್ತಾರೆ. ಭಾವನಾತ್ಮಕ ದೃಶ್ಯಗಳಲ್ಲಿ ನಟಿ ತಾರಾ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಚಿಕ್ಕ ಕಡಿಮೆ ಸಮಯದಲ್ಲಿ ರಂಗಾಯಣ ರಘು ತಮ್ಮ ನಟನೆಯ ಮೂಲಕ ಆವರಿಸಿಕೊಳ್ಳುತ್ತಾರೆ. ಇನ್ನೂ ಕೋಟಿಯ ಒಡ ಹುಟ್ಟಿದವರ ಪಾತ್ರದಲ್ಲಿ ತನುಜಾ ಮತ್ತು ಪೃಥ್ವಿ ನಟನೆ ಓ.ಕೆ ಅನ್ನಿಸುವಂತಿದೆ. ವಾಸುಕಿ ವೈಭವ್ ಅವರ ಸಂಗೀತ ಮತ್ತು ನೋಬಿನ್ ಪಾಲ್ ಹಿನ್ನೆಲೆ ಸಂಗೀತವು ಸಿನಿಮಾ ಕಥೆಗೆ ಪೂರಕವಾಗಿದೆ. ಅರುಣ್ ಬ್ರಹ್ಮಾವರ ಛಾಯಾಗ್ರಹಣ ಅತ್ಯುತ್ತಮವಾಗಿದೆ.

ಪರಮೇಶ್ವರ್ ಗುಂಡ್ಕಲ್ ಅವರ ಧಾರಾವಾಹಿ ಹಿನ್ನೆಲೆ ಕೋಟಿ ಸಿನಿಮಾದ ಮೇಲೆ ಪ್ರಭಾವ ಬೀರಿದೆ, ಚಿತ್ರಕಥೆ ಅಲ್ಲಿಲ್ಲಿ ಎಳೆದಾಡಿದಂತೆ ಕಾಣುತ್ತದೆ, ಮಂದಗತಿಯ ನಿರೂಪಣೆ ಪ್ರೇಕ್ಷಕನ ತಾಳ್ಮೆ ಬೇಡುತ್ತದೆ. ಕುಟುಂಬಕ್ಕಾಗಿ ಯಾವುದೇ ಅತಿರೇಕಕ್ಕೆ ಹೋಗಲು ಸಿದ್ಧವಿರುವ ವ್ಯಕ್ತಿಯ ಕಥೆಯನ್ನಾಧರಿಸಿ ಈ ಹಿಂದೆ ಹಲವು ಕಥೆಗಳು ಬಂದಿವೆ, ಅದರಲ್ಲಿ ಕೋಟಿ ಸ್ವಲ್ಪ ಭಿನ್ನವಾಗಿರುವಂತೆ ಕಂಡರೂ ಕೆಲವೊಮ್ಮೆ ಅತಿಶಯೋಕ್ತಿ ಎಂಬಂತೆ ಭಾಸವಾಗುತ್ತದೆ. ಒಟ್ಟಾರೆ ಸಿನಿಮಾದಲ್ಲಿ ಕೋಟಿಯ

ಪ್ರಾಮಾಣಿಕತೆಯೇ ಹೈಲೈಟ್ ಆಗಿದೆ. ಕೆಲವು ದೃಶ್ಯಗಳನ್ನು ಇನ್ನಷ್ಟು ಹದವಾಗಿ ಕಟ್ಟಿಕೊಡಬಹುದಾಗಿತ್ತು. ಒಟ್ಟಾರೆ ಕೋಟಿ ಮಧ್ಯಮ ವರ್ಗಗಳಿಗೆ ಆಪ್ತವೆನಿಸುವ ಕೌಟುಂಬಿಕ ಕಥೆಯಾಗಿದೆ.

ಸಿನಿಮಾ: ಕೋಟಿ

ನಿರ್ದೇಶಕ: ಪರಮೇಶ್ವರ ಗುಂಡ್ಕಲ್

ಕಲಾವಿದರು: ಧನಂಜಯ್, ರಮೇಶ್ ಇಂದಿರಾ, ಮೋಕ್ಷ ಕುಶಾಲ್, ತಾರಾ, ಶಾಮನೂರು, ಮತ್ತು ತನುಜಾ ವೆಂಕಟೇಶ್

X

Advertisement

X
Kannada Prabha
www.kannadaprabha.com