'ಹ್ಯಾಪಿ ಬರ್ತ್‌ಡೇ ಟು ಮಿ' ಸಿನಿಮಾ ಸ್ಟಿಲ್
'ಹ್ಯಾಪಿ ಬರ್ತ್‌ಡೇ ಟು ಮಿ' ಸಿನಿಮಾ ಸ್ಟಿಲ್

'ಹ್ಯಾಪಿ ಬರ್ತ್‌ಡೇ ಟು ಮಿ' ಸಿನಿಮಾ ವಿಮರ್ಶೆ: ಬೋಲ್ಡ್ ಕಾಮಿಡಿ ಡ್ರಾಮಾ; ಹೊಟ್ಟೆ ಹುಣ್ಣಾಗಿಸುವ ಹಾಸ್ಯ, ಫುಲ್ ಪೈಸಾ ವಸೂಲ್!

Rating(3.5 / 5)
Summary

ಒಟ್ಟಾರೆ OTT ಪ್ರೇಕ್ಷಕರನ್ನು ಗಮನದಲ್ಲಿರಿಸಿಕೊಂಡು ಚಿತ್ರ ತಯಾರಿಸಲಾಗಿದೆ. ಹ್ಯಾಪಿ ಬರ್ತ್‌ಡೇ ಟು ಮಿ ಚಿತ್ರದಲ್ಲಿನ ಪ್ರತಿಯೊಬ್ಬ ನಟನೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚೈತ್ರ ಆಚಾರ್ ಕಥೆಯ ಕೇಂದ್ರ ಬಿಂದು.

ರಾಕೇಶ್ ಕದ್ರಿ ಮತ್ತು ರೂಪೇಶ್ ಶೆಟ್ಟಿ ಜೊತೆಗೂಡಿ ರಚಿಸಿದ ಗಿರ್ಗಿಟ್ 2019 ರ ಥಿಯೇಟರ್ ಬಿಡುಗಡೆಯೊಂದಿಗೆ ತುಳು ಚಿತ್ರರಂಗದಲ್ಲಿ ಯಶಸ್ಸನ್ನು ಕಂಡಿತ್ತು, ಈಗ ರಾಕೇಶ್ ಕದ್ರಿ ನಿರ್ದೇಶಿಸಿ ಚೈತ್ರಾ ಜೆ ಆಚಾರ್‌, ಸಿದ್ದು ಮೂಲಿಮನಿ ಮತ್ತು ಇತರೆ ಯುವ ಕಲಾವಿದರು ನಟಿಸಿರುವ ಹ್ಯಾಪಿ ಬರ್ತ್‌ಡೇ ಟು ಮಿ ಸಿನಿಮಾವು ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಹುಟ್ಟುಹಬ್ಬದ ಸಂಭ್ರಮದಲ್ಲಿ ನಡೆದ ಘಟನೆಯೊಂದರ ಸುತ್ತ ಈ ಹಾಸ್ಯಕಥೆಯಿದೆ.

ತಮ್ಮ ಸಿನಿಮಾ ಕಥೆಗೆ ಆಲ್ಫ್ರೆಡ್ ಹಿಚ್‌ಕಾಕ್ ಅವರ 1948 ರ ಚಲನಚಿತ್ರ ರೋಪ್ ಸಿನಿಮಾ ಕಥೆಯೇ ಸ್ಫೂರ್ತಿ ಎಂದು ರಾಕೇಶ್ಕದ್ರಿ ಬಹಿರಂಗವಾಗಿ ಹೇಳಿದ್ದಾರೆ. ಆದರೂ ತಮ್ಮದೇ ಆದ ನಿರೂಪಣೆ ಶೈಲಿಯನ್ನು ಸಿನಿಮಾವನ್ನು ಹೊರತಂದಿದ್ದಾರೆ. ಸಾಂಪ್ರದಾಯಿಕ ಸಿನಿಮಾ ಮತ್ತು ಉದಯೋನ್ಮುಖ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ನಡುವಿನ ವ್ಯತ್ಯಾಸಗಳ ತೀಕ್ಷ್ಣವಾದ ತಿಳುವಳಿಕೆ ತೋರಿಸುತ್ತದೆ.

ಹ್ಯಾಪಿ ಬರ್ತ್‌ಡೇ ಟು ಮಿ ಒಂದು ಚಮತ್ಕಾರಿ ಬ್ಲ್ಯಾಕ್ ಕಾಮಿಡಿಯಾಗಿ ತೆರೆದುಕೊಳ್ಳುತ್ತದೆ, ಸಾವಿನ ಸುತ್ತ ಹೆಣೆದಿರುವ ಕಥೆಯಾಗಿದೆ. ಹುಟ್ಟುಹಬ್ಬದ ಸಂಭ್ರಮದಲ್ಲಿ ನಡೆದ ಘಟನೆಯೊಂದರ ಸುತ್ತ ಈ ನಗೆ ನಾಟಕ ಇರಲಿದೆ. ಈಗಿನ ತಲೆಮಾರಿನ ಯುವ ಜನತೆಯನ್ನು ಗಮನದಲ್ಲಿಟ್ಟುಕೊಂಡು ಈ ಸಿನಿಮಾ ತಯಾರಿಸಲಾಗಿದೆ. ಹುಟ್ಟುಹಬ್ಬದ ದಿನದಂದು ಏನೋ ಮಾಡಲು ಹೋಗಿ ಏನೋ ನಡೆದ ಅನಿರೀಕ್ಷಿತ ಘಟನೆಯನ್ನಿಟ್ಟುಕೊಂಡು ಹ್ಯಾಪಿ ಬರ್ತ್‌ಡೇ ಟು ಮೀ ಚಿತ್ರ ರಚಿಸಲಾಗಿದೆ. ತನ್ನ ಹುಟ್ಟುಹಬ್ಬವನ್ನು ತನ್ನದೆ ರೀತಿಯಲ್ಲಿ ಆಚರಿಸಿಕೊಳ್ಳಲು ಬಯಸುವ ಬರ್ತ್‌ಡೇ ಬಾಯ್ ಪುನೀತ್ (ಸಿದ್ಧಾರ್ಥ ಮಾಧ್ಯಮಿಕ) ತನ್ನ ಫ್ಲಾಟ್‌ಮೇಟ್ ತಿರುಮಲೇಶ್ (ಟ್ರಿಪ್ಪಿ- ಸಿದ್ದು ಮೂಲಮನಿ)ಯನ್ನು ಹೊರಹಾಕಲು ಬಯಸುತ್ತಾನೆ.

ಆದರೆ ತನ್ನ ಮನೆಗೆ ಬಂದ ಮಹಿಳಾ ಅತಿಥಿ (ಚೈತ್ರ ಆಚಾರ್) ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಅಕಾಲಿಕ ಮರಣ ಹೊಂದಿದಾಗ ಹುಟ್ಟು ಹಬ್ಬ ಆಚರಣೆ ಅನಿರೀಕ್ಷಿತ ತಿರುವು ಪಡೆಯುತ್ತದೆ. ಮನೆಯಲ್ಲಿದ್ದ ಶವವನ್ನು ಸಾಗಿಸುವಾಗ ಎದುರಾಗುವ ಹಲವು ಹಾಸ್ಯ ಸನ್ನಿವೇಶಗಳು ಹೊಟ್ಟೆ ಹುಣ್ಣಾಗಿಸುವಂತೆ ಮಾಡುತ್ತವೆ.

ಪುನೀತ್ ಗೆಳತಿ, ಸೀಮಾ (ರಚನಾ ರೈ), ಜಮೀನುದಾರ ಜನಾರ್ದನ್ (ಗೋಪಾಲ ಕೃಷ್ಣ ದೇಶಪಾಂಡೆ), ನೆರೆಹೊರೆಯವರಾದ (ಅರ್ಚನಾ ಕೊಟ್ಟಿಗೆ), ಅಪಾರ್ಟ್‌ಮೆಂಟ್ ಸೆಕ್ಯುರಿಟಿ (ನಾಟ್ಯ ರಂಗ), ಜೊತೆಗೆ ಸ್ನೇಹಿತರು ಸುಹಾನ್ ಪ್ರಸಾದ್, ರಾಹುಲ್ ಅಮೀನ್ ಮತ್ತು ಅರ್ಪಿತ್ ಇಂದ್ರವರ್ಧನ್ ಹುಟ್ಟು ಹಬ್ಬ ಆಚರಣೆಗೆಂದು ಬಂದಾಗ ಮತ್ತಷ್ಟು ಹಾಸ್ಯ ಭರಿತ ಸನ್ನಿವೇಶಗಳು ತೆರೆದುಕೊಳ್ಳುತ್ತವೆ. ಹಲವು ಬೋಲ್ಡ್ ಕಾಮಿಡಿ ದೃಶ್ಯಗಳು ವೀಕ್ಷಕರನ್ನು ರಂಜಿಸುತ್ತವೆ.

ಚಿತ್ರವು ಡಾರ್ಕ್ ಕಾಮಿಡಿಯ ಚಮತ್ಕಾರಿ ಅಂಶಗಳೊಂದಿಗೆ ಸಂಯೋಜನೆಗೊಂಡಿದೆ, ಸಾಂಪ್ರದಾಯಿಕವಲ್ಲದ ನಿರೂಪಣೆಗಳನ್ನು ಬಯಸುವ ಪ್ರೇಕ್ಷಕರಿಗೆ ಸಿನಿಮಾ ರಿಫ್ರೆಶ್ ನೀಡುತ್ತದೆ.ಕಥೆಯು ಅಸ್ತವ್ಯಸ್ತವಾಗಿರಬಹುದು, ಆದರೆ ರಾಜೇಶ್ ಕದ್ರಿ ಅವರ ನಿರೂಪಣೆ ಎಲ್ಲಾ ಲೋಪದೋಷಗಳನ್ನು ಮುಚ್ಚಿಹಾಕುತ್ತದೆ.

ಸಿನಿಮಾದಲ್ಲಿ ಹಾಸ್ಯದ ಅಂಶವನ್ನು ಮೀರಿ, ಬಿಕ್ಕಟ್ಟಿನ ಸನ್ನಿವೇಶ ಎದುರಾದಾಗ ಹೆಗಲಿಗೆ ಹೆಗಲು ಕೊಟ್ಟು ಸಮಸ್ಯೆಯಿಂದ ಹೊರಬರಲು ಸಹಾಯ ಮಾಡುವ ಡೈನಾಮಿಕ್ ಗೆಳೆತನದ ಬಗ್ಗೆ ತೋರಿಸಲಾಗಿದೆ. ಸಿನಿಮಾ ನಿರೂಪಣೆಯಲ್ಲಿ ಕೆಲವು ದೃಶ್ಯಗಳಲ್ಲಿ ಬೋಲ್ಡ್ ಸಂಭಾಷಣೆಗಳಿದ್ದರೂ ಅದು ಅಶ್ಲೀಲವೆನಿಸುವುದಿಲ್ಲ, ಬದಲಿಗೆ ಸೃಜನಾತ್ಮಕವೆನಿಸುತ್ತವೆ.

ಒಟ್ಟಾರೆ OTT ಪ್ರೇಕ್ಷಕರನ್ನು ಗಮನದಲ್ಲಿರಿಸಿಕೊಂಡು ಚಿತ್ರ ತಯಾರಿಸಲಾಗಿದೆ. ಹ್ಯಾಪಿ ಬರ್ತ್‌ಡೇ ಟು ಮಿ ಚಿತ್ರದಲ್ಲಿನ ಪ್ರತಿಯೊಬ್ಬ ನಟನೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚೈತ್ರ ಆಚಾರ್ ಕಥೆಯ ಕೇಂದ್ರ ಬಿಂದು. ಸಿದ್ಧಾರ್ಥ್ ಮಧ್ಯಮಿಕಾ ಮತ್ತು ಸಿದ್ದು ಮೂಲಿಮನಿ ಕಥೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿದ್ದಾರೆ. ಗೋಪಾಲ ಕೃಷ್ಣ ದೇಶಪಾಂಡೆ ಅವರು ಚಿತ್ರಕ್ಕೆ ತಡವಾಗಿ ಆಗಮಿಸಿದರೂ ಸಿನಿಮಾದುದ್ದಕ್ಕೂ ಅವರ ಪಾತ್ರ ಗಮನ ಸೆಳೆಯುತ್ತದೆ. ರಚನಾ ರೈ ಮತ್ತು ಅರ್ಚನಾ ಕೊಟ್ಟಿಗೆ ತಮ್ಮ ಸಿಕ್ಕ ಸಮಯದಲ್ಲಿ ಉತ್ತಮವಾಗಿ ಅಭಿನಯಿಸಿದ್ದಾರೆ. ತಮ್ಮ ಪಾತ್ರಗಳು ಕೇವಲ ಸ್ಟೀರಿಯೊಟೈಪ್‌ಗಳಾಗಿ ಬರದಂತೆ ನೋಡಿಕೊಂಡಿದ್ದಾರೆ. ವಿಶೇಷವಾಗಿ ಸಿದ್ದು ಪಾತ್ರದ ಹಾಸ್ಯ ಮನರಂಜನೆಯ ಮಹಾ ಹೂರಣ ನೀಡುತ್ತದೆ.

ಕಥೆ, ಮತ್ತು ಪಾತ್ರಗಳು ಎರಡು ಗಂಟೆಗಳ ಸಸ್ಪೆನ್ಸ್‌ ನಿಮಗೆ ಸಂಪೂರ್ಣ ಮನರಂಜನೆ ನೀಡುತ್ತದೆ. ಆದರೂ ಕ್ಲೈಮ್ಯಾಕ್ಸ್ ಅನ್ನು ಮತ್ತಷ್ಟು ಉತ್ತಮವಾಗಿ ತರಬಹುದಿತ್ತು ಎಂಬ ಅಭಿಪ್ರಾಯ ಮೂಡಿಸುತ್ತದೆ. ಒಟ್ಟಿನಲ್ಲಿ ಸಿನಿಮಾ ಸಂಪೂರ್ಣವಾದ ಕಾಮಿಡಿಯಾಗಿದ್ದು, ವೀಕ್ಷಕರ ಮನಗೆಲ್ಲುತ್ತದೆ.

ಚಿತ್ರ: ಹ್ಯಾಪಿ ಬರ್ತ್ ಡೇ ಟು ಮಿ

ನಿರ್ದೇಶಕ: ರಾಕೇಶ್ ಕದ್ರಿ

ಪಾತ್ರವರ್ಗ: ಚೈತ್ರ ಆಚಾರ್, ಸಿದ್ಧಾರ್ಥ್ ಮಾಧ್ಯಮಿಕ, ಸಿದ್ದು ಮೂಲಿಮನಿ, ಗೋಪಾಲ ಕೃಷ್ಣ ದೇಶಪಾಂಡೆ, ರಚನಾ ರೈ ಮತ್ತು ಅರ್ಚನಾ ಕೊಟ್ಟಿಗೆ

X

Advertisement

X
Kannada Prabha
www.kannadaprabha.com