ಲೈನ್ ಮ್ಯಾನ್ ಸಿನಿಮಾ ಸ್ಟಿಲ್
ಲೈನ್ ಮ್ಯಾನ್ ಸಿನಿಮಾ ಸ್ಟಿಲ್

'ಲೈನ್ ಮ್ಯಾನ್' ಸಿನಿಮಾ ವಿಮರ್ಶೆ: ಊರೆಲ್ಲಾ ಕತ್ತಲಾದಾಗ ಅಂತರಂಗದಲ್ಲಿ ಮೂಡುವ ಬೆಳಕು; ಮಾನವೀಯತೆ ಮಗ್ಗುಲಲ್ಲಿ ಅರಳಿದ ಕತೆ!

Published on
Rating(3 / 5)
Summary

ಆಧುನಿಕ ಜೀವನದಲ್ಲಿ ಮನುಷ್ಯರೇ ಸೃಷ್ಟಿಸಿಕೊಂಡ ಸಂಕೀರ್ಣತೆ ಮತ್ತು ತಂತ್ರಜ್ಞಾನದ ಗೀಳಿಗೆ ಹೇಗೆ ಶರಣಾಗಿದ್ದೇವೆ, ಇದರಿಂದ ಮಾನವೀಯ ಮೌಲ್ಯಗಳನ್ನು ಹೇಗೆ ಮರೆಯುತ್ತಿದ್ದೇವೆ ಎಂಬ ಬಗ್ಗೆ ಪ್ರಬುದ್ಧ ಸಂದೇಶವನ್ನು ಚಿತ್ರ ರವಾನಿಸಿದೆ.

ಲೂಸ್ ಕನೆಕ್ಷನ್ ಮತ್ತು ರನ್ ಆಂಟೋನಿ ಸಿನಿಮಾ ನಿರ್ದೇಶಕ ರಘು ಶಾಸ್ತ್ರಿ ಮತ್ತೊಮ್ಮೆ ವಿಭಿನ್ನ ಕಥಾ ವಸ್ತುವನ್ನು ಪ್ರೇಕ್ಷಕರ ಮುಂದೆ ತಂದಿದ್ದಾರೆ.

ಲೈನ್ ಮ್ಯಾನ್ ಸಿನಿಮಾ ಕತೆ ನೈಜಘಟನೆಗಳಿಂದ ಆಧರಿಸಿ ಹೆಣೆಯಲಾಗಿದೆ ಎಂದು ಸ್ವತಃ ನಿರ್ದೇಶಕರೇ ಹೇಳಿದ್ದಾರೆ. ಚಿತ್ರದಲ್ಲಿ ಮಾನವೀಯ ಮೌಲ್ಯಗಳನ್ನು ಮಾನವೀಯತೆಯ ಅಸ್ತಿತ್ವದ ಬಗ್ಗೆ ತೋರಿಸಿದ್ದಾರೆ. ಗ್ರಾಮದಲ್ಲಿ ಕತ್ತಲು ಆವರಿಸಿದಾಗ ಮನುಷ್ಯನ ಅಂತರಂಗದಲ್ಲಿ ಬೆಳಕು ತೆರೆದುಕೊಳ್ಳುವ ಸುತ್ತ ಕತೆ ಸುತ್ತುತ್ತದೆ.

ಆಧುನಿಕ ಜೀವನದಲ್ಲಿ ಮನುಷ್ಯರೇ ಸೃಷ್ಟಿಸಿಕೊಂಡ ಸಂಕೀರ್ಣತೆ ಮತ್ತು ತಂತ್ರಜ್ಞಾನದ ಗೀಳಿಗೆ ಹೇಗೆ ಶರಣಾಗಿದ್ದೇವೆ, ಇದರಿಂದ ಮಾನವೀಯ ಮೌಲ್ಯಗಳನ್ನು ಹೇಗೆ ಮರೆಯುತ್ತಿದ್ದೇವೆ ಎಂಬ ಬಗ್ಗೆ ಪ್ರಬುದ್ಧ ಸಂದೇಶ ರವಾನಿಸಿದ್ದಾರೆ. ವಿವಿಧ ತಲೆಮಾರುಗಳ ಜನರುವಾಸಿಸುವ ವಿಲಕ್ಷಣವಾದ ಪುಟ್ಟ ಹಳ್ಳಿಯೊಂದರಿಂದ ಕತೆ ಆರಂಭವಾಗುತ್ತದೆ, ಪ್ರಕೃತಿಯೊಂದಿಗೆ ಬೆರೆತು, ಸಾಮರಸ್ಯದಿಂದ ಜೀವನ ನಡೆಸುವ ಹಳ್ಳಿಗಾಡಿನ ಸೊಗಸು ಸಿನಿಮಾದಲ್ಲಿ ಮೂಡಿ ಬಂದಿದೆ.

ರಾಜ್ಯ ಸರ್ಕಾರದ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ಲೈನ್‌ಮ್ಯಾನ್ ಆಗಿರುವ ನಟೇಶ (ತ್ರಿಗುಣ್) ಮೂಲಕ ಕಥೆ ತೆರೆದುಕೊಳ್ಳುತ್ತದೆ. ಗ್ರಾಮದಲ್ಲಿ ಎಲ್ಲರಿಗೂ ಆತ ಪ್ರೀತಿಯ ನಟ. ಸೂಲಗಿತ್ತಿ ಶಾರದಮ್ಮ (ಬಿ. ಜಯಶ್ರೀ) ಅವರ 100 ನೇ ಹುಟ್ಟುಹಬ್ಬವನ್ನು ಆಚರಿಸುವ ಸಮಯ ಬರುತ್ತದೆ. ಈ ವೇಳೆ ಇಡೀ ಗ್ರಾಮವನ್ನು ಬೆಳಗಿಸಬೇಕೆಂಬ ಜವಾಬ್ದಾರಿ ಆತನ ಮೇಲೆ ಬರುತ್ತದೆ. ಈ ವೇಳೆ ಆತ ಅನಿವಾರ್ಯವಾಗಿ ವಿದ್ಯುತ್ ಕಡಿತಗೊಳಿಸುವ ಸಂದರ್ಭ ಎದುರಾಗುತ್ತದೆ. ಎಲ್ಲಾ ಸವಾಲು ಸಂದಿಗ್ಥತೆಯನ್ನು ಎದುರಿಸಿ ಆತ ಊರನ್ನು ಬೆಳಕಾಗಿಸುತ್ತಾನೆಯೇ ಎಂಬುದನ್ನು ತಿಳಿದುಕೊಳ್ಳಲು ಸಿನಿಮಾ ನೋಡಬೇಕು.

ಸಿನಿಮಾ ಕಥೆಯಲ್ಲಿ ನಾಲ್ಕು ಮೊಟ್ಟೆಗಳನ್ನು ಜೀವನದ ವಿವಿಧ ಹಂತಗಳನ್ನು ಪ್ರತಿನಿಧಿಸುವ ಸಂಕೇತವಾಗಿ ಬಳಸಿಕೊಳ್ಳಲಾಗಿದೆ. ಆಧುನಿಕತಯ ಹೆಸರಿನಲ್ಲಿ ನಮ್ಮ ಮನಸ್ಸಿನಲ್ಲಿ ಸೃಷ್ಟಿಸಿಕೊಂಡಿರುವ ನಿಲುವುಗಳನ್ನು ಪ್ರಶ್ನಿಸುವಂತೆ ಮಾಡುತ್ತದೆ. ಪ್ರಾಪಂಚಿಕ ವಸ್ತುಗಳು, ಅಭಿವೃದ್ಧಿ ಮತ್ತು ಸಮತೋಲನ ಹಾಗೂ ಸೂಕ್ಷ್ಮ ಸಾಮರಸ್ಯದ ಎಳೆಗಳನ್ನು ನಿರ್ದೇಶಕರು ಸಿನಿಮಾದಲ್ಲಿ ತೋರಿಸಿದ್ದಾರೆ.

ಇದರ ಜೊತೆಗೆ ತಂತ್ರಜ್ಞಾನದ ವ್ಯಾಮೋಹದಿಂದ ಮನುಷ್ಯನಿಗೆ ಎದುರಾಗುವ ಸಂಕಷ್ಟದ ಕಟುಸತ್ಯಗಳು, ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆ, ಉಂಟಾಗುವ ಮೋಸ ವಂಚನೆಗಳ ಬಗ್ಗೆ ಲೈನ್ ಮ್ಯಾನ್ ಸಂದೇಶ ಹೊತ್ತು ತಂದಿದ್ದಾನೆ, ಆ ಮೂಲಕ ವೀಕ್ಷಕರು ತಮ್ಮ ಆದ್ಯತೆಗಳ ಬಗ್ಗೆ ಪರಿಶೀಲನೆ ನಡೆಸುವಂತ ವಿಚಾರ ಧಾರೆಯನ್ನು ಮನಸ್ಸಿಗೆ ನಾಟುವಂತೆ ಸಿನಿಮಾದಲ್ಲಿ ಹೇಳಿದ್ದಾರೆ.

ತಂತ್ರಜ್ಞಾನ, ಗ್ಯಾಡ್ಜೆಟ್ ಗಳಿಗೆ ಶರಣು ಹೋಗಿರುವ ಮಾನವ ಅವುಗಳ ಮೇಲೆ ಅತಿಯಾಗಿ ಅವಲಂಬಿಸಬಾರದು, ಎಲ್ಲದಕ್ಕೂ ಮಿತಿಯಿರಬೇಕು ಎಂಬ ಜೀವನದ ಸಾರವನ್ನು ಸಿನಿಮಾ ತಿಳಿಸುತ್ತದೆ. ನಿರ್ದೇಶಕರು ನೈಜ ಘಟನೆಗಳನ್ನು ಕಾಲ್ಪನಿಕ ನಿರೂಪಣೆಗಳೊಂದಿಗೆ ಹೆಣೆದಿದ್ದಾರೆ. ಕಲೆ ಮತ್ತು ವಾಸ್ತವದ ನಡುವಿನ ಗೆರೆಗಳನ್ನು ಅಳಿಸಿ ನಮ್ಮದೆ ಕತೆ ಎನ್ನುವಂತೆ ನಿರೂಪಿಸಿದ್ದಾರೆ. ಸಿನಿಮಾದಲ್ಲಿ ಮನರಂಜನೆ ಮಾತ್ರವಲ್ಲದೆ ಶಿಕ್ಷಣವನ್ನೂ ನೀಡಿದ್ದಾರೆ. ಸಿನಿಮಾ ಮೂಲಕ ನೀಡಿರುವ ಸಂದೇಶ ಶಾಶ್ವತವಾಗಿ ಮನಮುಟ್ಟುತ್ತದೆ.

ಆದರೆ ಕಲಾವಿದರೂ ಪಾತ್ರಕ್ಕೆ ತಕ್ಕಂತೆ ಭಾವಾನಾತ್ಮಕವಾಗಿ ಅಭಿನಯಿಸಲು ವಿಫಲರಾಗಿರುವುದು ಎದ್ದು ತೋರುತ್ತದೆ. ಹಿರಿಯ ನಟಿ ಬಿ ಜಯಶ್ರೀ ಅಭಿನಯ ಮನೋಜ್ಞವಾಗಿದೆ. ಸಿನಿಮಾದಲ್ಲಿ ಸಾಮರ್ಥ್ಯವಿರುವ ಬಹಳ ಕಲಾವಿದರಿದ್ದರೂ ಅವರ ಪಾತ್ರ ಹೆಚ್ಚಿನ ಪ್ರಭಾವ ಬೀರುವುದಿಲ್ಲ.

'ಲೈನ್ ಮ್ಯಾನ್' ಸಾಂಪ್ರಾದಾಯಿಕ ಸಿನಿಮಾಗಳ ಗಡಿ ದಾಟಿ ನಿಲ್ಲುತ್ತಾನೆ. ವೀಕ್ಷಕರಿಗೆ ಮಾನವ ಅಸ್ತಿತ್ವವನ್ನು ಚಿಂತನೆಗೊಡ್ಡುವಂತೆ ಮಾಡುತ್ತದೆ. ಪ್ರೇಕ್ಷಕರು ತಮ್ಮ ಸುತ್ತಲಿನ ಪ್ರಪಂಚದೊಂದಿಗೆ ತಮ್ಮ ಸಂಬಂಧವನ್ನು ಹೇಗೆ ರೂಪಿಸಿಕೊಳ್ಳಬೇಕು, ಪ್ರಕೃತಿಯ ಜೊತೆ ತಾವು ಹೇಗೆ ಹೊಂದಿಕೊಂಡು ಬದುಕಬೇಕು ಎಂಬ ಬಗ್ಗೆ ಮನವರಿಕೆ ಮಾಡಿಕೊಡುತ್ತದೆ. ಕ್ಲೈಮ್ಯಾಕ್ಸ್ ನಲ್ಲಿ ಹೇಳುವ ನೀತಿ ಪಾಠ, ಕೊಡುವ ಜ್ಞಾನ ಸಿನಿಮಾದ ಹಲವು ಮೈನಸ್ ಪಾಯಿಂಟ್ ಗಳನ್ನು ಮರೆ ಮಾಚುತ್ತದೆ.

ಸಿನಿಮಾ: ಲೈನ್ ಮ್ಯಾನ್

ನಿರ್ದೇಶನ: ರಘು ಶಾಸ್ತ್ರಿ

ಕಲಾವಿದರು: ತ್ರಿಗುಣ್, ಬಿ.ಜಯಶ್ರೀ, ಮೈಕೋ ನಾಗರಾಜ್

ಲೈನ್ ಮ್ಯಾನ್ ಸಿನಿಮಾ ಸ್ಟಿಲ್
'ಫೋಟೋ' ಚಿತ್ರ ವಿಮರ್ಶೆ: ಲಾಕ್ ಡೌನ್ ಕರಾಳ ದಿನಗಳ ನರಕದ ಸತ್ಯದರ್ಶನ; ಬಡವನ ಬದುಕಿನ ನೋವಿನ ಅನಾವರಣ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com