ಅಕೌಂಟ್ ಅನ್ನು ಹ್ಯಾಕರ್ ಗಳಿಂದ ರಕ್ಷಿಸಿಕೊಳ್ಳಲು ಈ ರೀತಿ ಪಾಸ್ ವರ್ಡ್ ಬಳಸಿ

ಕಂಪ್ಯೂಟರ್ ಅನಕ್ಷರಸ್ಥರು ಹೆಚ್ಚಾಗಿ ಇರುವ ಈ ದೇಶದಲ್ಲಿ, ಅಥವಾ ಈಗ ತಾನೆ ಕಂಪ್ಯೂಟರನ್ನು ಸಾಮಾನ್ಯರು ನಿತ್ಯ ಬಳಕೆಗೆ ತರುತ್ತಿರುವ ಸಮಯದಲ್ಲಿ ಕಂಪ್ಯೂಟರ್ ಮತ್ತು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕಂಪ್ಯೂಟರ್ ಅನಕ್ಷರಸ್ಥರು ಹೆಚ್ಚಾಗಿ ಇರುವ ಈ ದೇಶದಲ್ಲಿ, ಅಥವಾ ಈಗ ತಾನೆ ಕಂಪ್ಯೂಟರನ್ನು ಸಾಮಾನ್ಯರು ನಿತ್ಯ ಬಳಕೆಗೆ ತರುತ್ತಿರುವ ಸಮಯದಲ್ಲಿ ಕಂಪ್ಯೂಟರ್ ಮತ್ತು ಮೊಬೈಲ್ ನಲ್ಲಿ ನಮ್ಮ ಮಾಹಿತಿಯನ್ನು ಗೋಪ್ಯವಾಗಿ ಅಥವಾ ಸುರಕ್ಷಿತವಾಗಿ ಇಡುವುದು ಅತೀ ದೊಡ್ಡ ಸವಾಲು. ಬಹುತೇಕ ಜನರಿಗೆ ತಮ್ಮ ಸ್ವಂತ ಮಾಹಿತಿಗಳು ತಮಗೆ ಗೊತ್ತಿಲ್ಲದೇ ಕದಿಯಲ್ಪಡುತ್ತಿರುವದು ಗೊತ್ತಾಗುವುದೇ ಇಲ್ಲ. ಅಲ್ಲದೇ ಅನೇಕ ಜನರಿಗೆ ಈ ರೀತಿ ತಮ್ಮ ಮಾಹಿತಿ ಕಳ್ಳತನ ಆಗುವುದರಿಂದ ನಡೆಯುವ ಅನಾಹುತಗಳೇನು ಎಂಬ ಎಂಬುದರ ಸಣ್ಣ ಅರಿವೂ ಇರುವುದಿಲ್ಲ.
 ನಾವು ನಮ್ಮ ಮನೆಯವರ ಜೊತೆಗೆ ತೆಗೆದುಕೊಂಡಿರುವ ಅನೇಕ ಫೋಟೋಗಳು, ಆಫೀಸಿನ ದಾಖಲೆಗಳು, ನಾವು ಸುತ್ತಾಡಿ ಬಂದ ತಾಣಗಳು, ಮುಂದೆ ಎಲ್ಲಲ್ಲಿ ಹೋಗಲಿರುವೆವು ಎಂಬ ಮಾಹಿತಿಗಳು, ವಿಮಾನ, ರೇಲ್ವೆ ಬುಕಿಂಗ್ ವಿವರಗಳು,ಟಿಕೆಟ್ ಗಳು ನಮ್ಮ ಮೊಬೈಲ್ ನಲ್ಲಿ ನಾವು ಇಟ್ಟುಕೊಂಡಿರುತ್ತೇವೆ. ಅಲ್ಲದೇ ಫೇಸ್ ಬುಕ್, ಜಿ ಮೇಲ್, ವಾಟ್ಸಾಪ್ ಇತ್ಯಾದಿಗಳು ಯಾವಾಗಲೂ ತೆರೆದುಕೊಂಡೇ ಇರುತ್ತವೆ. ಸೈಬರ್ ಲೋಕದ ವಿಶೇಷತೆ ಮತ್ತು ಅಪಾಯಕಾರಿ ಅಂಶವೆಂದರೆ ಒಮ್ಮೆ ಈ ಲೋಕದೊಳಗೆ ಹೊಕ್ಕುಬಿಟ್ಟರೆ ಆ ಮಾಹಿತಿ ವಿಶ್ವದ ಸೊತ್ತಾಗಿಬಿಡುತ್ತದೆ. ಅಂದರೆ ವಿಶ್ವದ ಯಾವುದೇ ವ್ಯಕ್ತಿ ನಿಮ್ಮ ಮಾಹಿತಿಯನ್ನು ಯಾವುದೇ ಸಮಯದಲ್ಲಿ ನೋಡಬಹುದು ಮತ್ತು ದುರ್ಬಳಕೆ ಮಾಡಿಕೊಳ್ಳಬಹುದು. ಅದರ ಮೇಲೆ ನಿಮ್ಮ ಯಾವ ನಿಯಂತ್ರಣವೂ ಇರುವುದಿಲ್ಲ. ಹಾಗೂ ನಿಮ್ಮ ಮಾಹಿತಿಯನ್ನು ದುರ್ಬಳಕೆ ಮಾಡಿಕೊಂಡವರಾರು ಎಂದು ತಿಳಿಯುವುದೂ ಕಷ್ಟ. ತಿಳಿದರೂ ನಿಮ್ಮ ಮಾಹಿತಿ ಅದಾಗಲೇ ಜಗತ್ತಿನ ಸೊತ್ತಾಗಿರುವುದರಿಂದ ಮತ್ತೊಬ್ಬ ಅದನ್ನು ದುರ್ಬಳಕೆ ಮಾಡಿಕೊಳ್ಳಬಹುದು. ಎಷ್ಟು ಜನರ ಹಿಂದೆ ನಾವು ಮಾಹಿತಿ ರಕ್ಷಿಸಿಕೊಳ್ಳಲು ಓಡಲು ಸಾಧ್ಯ? ಇದಲ್ಲದೇ ನಿಮ್ಮ ಬ್ಯಾಂಕ್ ಪಾಸ್ ವರ್ಡ್ ಗಳನ್ನು ಕದ್ದು ಬಿಟ್ಟರೆ ನಿಮ್ಮ ಹಣವನ್ನು ತಮ್ಮ ಅಕೌಂಟ್ ಗಳಿಗೆ ವರ್ಗಾಯಿಸಿಕೊಳ್ಳುವುದು ಎರಡು ನಿಮಿಷದ ಕೆಲಸ!
 ಆದ್ದರಿಂದ ನಮ್ಮ ಮಾಹಿತಿಯನ್ನು ಸುರಕ್ಷಿತವಾಗಿಟ್ಟುಕೊಳ್ಳುವುದೇ ನಮಗಿರುವ ಅತ್ಯತ್ತಮ ಮಾರ್ಗ! ನಮ್ಮ ಕಂಪ್ಯೂಟರ್ ಮತ್ತು ಮೊಬೈಲ್ ಗಳನ್ನು ಸುರಕ್ಷಿತವಾಗಿಡಲು ನಮ್ಮ ಪಾಸ್ ವರ್ಡ್ ಅತ್ಯಂತ ಗಟ್ಟಿಯಾಗಿರುವುದು ಮುಖ್ಯ. ಪಾಸ್ ವರ್ಡ್ ನಮಗೆ ನೆನಪಿರುವಂತೆಯೂ ಬೇರೆಯವರಿಗೆ ಊಹಿಸಲು ಸುಲಭವಾಗಿರದಂತೆಯೂ ಇರಬೇಕು. ಬಲವಾದ ಪಾಸ್ ವರ್ಡ್ ಗಳು ಹೇಗಿರಬೇಕು ಎಂಬುದಕ್ಕೆ ತಜ್ಞರು ಕೆಲವು ಸೂಚನೆಗಳನ್ನು ಕೊಡುತ್ತಾರೆ.

1. ಪದಗಳ ಜೊತೆಗೆ ನಂಬರ್ ಗಳನ್ನು ಮತ್ತು ಚಿಹ್ನೆಗಳನ್ನು ಸೇರಿಸಬೇಕು. ಉದಾಹರಣೆಗೆ : password$1208my
  password ಎಂಬುದು ನಿಮಗೆ ನೆನಪಿಡಬಹುದಾದ ಯಾವುದೇ ಪದವಾಗಿರಬಹುದು. $ ಜಾಗದಲ್ಲಿ #@*& ಇತ್ಯಾದಿಗಳನ್ನು ಬಳಸಬಹುದು. ಸಂಖ್ಯೆಯು ನಿಮ್ಮ ಮಗುವುನ ನಿಮ್ಮ ಯಾರದೇ ಹುಟ್ಟು ಹಬ್ಬ, ಮದುವೆ ದಿನ, ಮೊದಲ ಕೆಲಸಕ್ಕೆ ಹಾಜರಾದ ದಿನ, ಡಿಗ್ರೀ ಪಡೆದ ದಿನ ಯಾವುದಾದರೂ ಆಗಿರಬಹುದು
2. ಅಕ್ಷರಗಳ ಬದಲಿಗೆ ಚಿಹ್ನೆಗಳನ್ನು ಬಳಸಿ
  ಉದಾಹರಣೆಗೆ  password$1208my ಎಂಬುದನ್ನು P@ssw0rd$1208my ಎಂದು ಬರೆದರೆ ಪಾಸ್ ವರ್ಡ್ ಗಟ್ಟಿಯಾಗುತ್ತದೆ. ಅಂದರೆ ಅ ಜಾಗದಲ್ಲಿ @ ಮತ್ತು o ಜಾಗದಲ್ಲಿ 0 ಅನ್ನು ಬಳಸುವುದು. ಹೀಗೆಯೇ ಬೇರೆ ಅಕ್ಷರಗಳಿಗೂ ಪ್ರಯೋಗ ಮಾಡಬಹುದು.
 3. ಪದಗಳ ಬದಲಿಗೆ ಒಂದು ವಾಕ್ಯವನ್ನು ಪಾಸ್ ವರ್ಡ್ ಮಾಡುವುದು.
 ಉದಾಹರಣೆಗೆ: I@te1dlyt0d@y41stt1me.
 ಈ ಪಾಸ್ ವರ್ಡ್ ಅನ್ನು ಜಗತ್ತಿನ ಯಾರಿಗೂ ಊಹಿಸಲೂ ಸಾಧ್ಯವಿಲ್ಲ ಆದರೆ ನೀವು ಸುಲಭವಾಗಿ ನೆನಪಿಟ್ಟುಕೊಳ್ಳಬಹುದು. ಇಲ್ಲಿ ಒಂದು ವಾಕ್ಯವನ್ನು ಬಳಸಲಾಗಿದೆ. ಅದು I ate idly today for 1st time.
ಎಂಬ ವಾಕ್ಯವನ್ನು ಪಾಸ್ ವರ್ಡ್ ಮಾಡಲಾಗಿದೆ. ನಡುವಿನ ಸ್ಪೇಸ್ ಅನ್ನು ತೆಗೆದುಹಾಕಲಾಗಿದೆ. a ಜಾಗದಲ್ಲಿ @ ಅನ್ನೂ i ಜಾಗದಲ್ಲಿ 1 ಅನ್ನೂ  o ಜಾಗದಲ್ಲಿ 0 ಅನ್ನೂ for ಬದಲು 4 ಅನ್ನೂ ಬಳಸಲಾಗಿದೆ. ನೀವು I ate idly for 1st time ಎಂಬುದನ್ನು ನೆನಪಿಟ್ಟುಕೊಂಡರೆ ಸಾಕು. ಉಳಿದಂತೆ ಯಾವದಕ್ಕೆ ಯಾವ ಬದಲಿ ಚಿಹ್ನೆಗಳು ಎಂಬುದು ಸಾಧಾರಣವಾಗಿ ನೆನಪಿರುತ್ತವೆ. ಚಿಹ್ನೆ ಮತ್ತು ಅಕ್ಷರಗಳು ಹತ್ತಿರ ಇರುವಂತೆ ನೋಡಿಕೊಳ್ಳುವುದು ಒಳ್ಳೆಯದು. a ಮತ್ತು @ ಒಂದೇ ರೀತಿ ಕಾಣುತ್ತವೆ. o ಮತ್ತು 0 ಹಾಗೂ i ಮತ್ತು 1 ಗಳು ಒಂದೇ ರೀತಿ ಕಾಣುತ್ತವೆ. ಹಾಗಾಗಿ ಇವನ್ನು ನೆನಪಿಟ್ಟುಕೊಳ್ಳುವುದು ಸುಲಭ!
 ನಿಮ್ಮ ಮಾಹಿತಿಯನ್ನು ರಕ್ಷಿಸಲು ಪಾಸ್ ವರ್ಡ್ ಅನ್ನು ಇಂದೇ ಗಟ್ಟಿಗೊಳಿಸಿಕೊಳ್ಳು ನಿಮ್ಮ ಅಕೌಂಟ್ ಗಳು, ಕಂಪ್ಯೂಟರ್ ಗಳು ಹ್ಯಾಕ್ ಆಗುವ ಸಾಧ್ಯತೆಗಳನ್ನು ಆದಷ್ಟು ಕಡಿಮೆ ಮಾಡಿಕೊಳ್ಳಿ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com