ಪ್ರಜಾತಂತ್ರದಲ್ಲೂ ರಾಜರು, ನವಾಬರ ದರ್ಬಾರು!

ಖಾಸಗಿ ಕ್ಲಬ್‍ಗಳಲ್ಲಿ ಕಡ್ಡಾಯವಾಗಿ ಪ್ಯಾಂಟ್ ಮತ್ತು ಶೂ ಧರಿಸಬೇಕೆಂಬ ವಸಾಹತು ಕಾಲದ ಡ್ರೆಸ್‍ಕೋಡ್ ರದ್ದುಗೊಳಿಸಿ ಕರ್ನಾಟಕ ಸರ್ಕಾರ ಸುತ್ತೋಲೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಖಾಸಗಿ ಕ್ಲಬ್‍ಗಳಲ್ಲಿ ಕಡ್ಡಾಯವಾಗಿ ಪ್ಯಾಂಟ್ ಮತ್ತು ಶೂ ಧರಿಸಬೇಕೆಂಬ ವಸಾಹತು ಕಾಲದ ಡ್ರೆಸ್‍ಕೋಡ್ ರದ್ದುಗೊಳಿಸಿ ಕರ್ನಾಟಕ ಸರ್ಕಾರ ಸುತ್ತೋಲೆ ಹೊರಡಿಸಿತು.ತಮಿಳುನಾಡು ಸರ್ಕಾರವು ಪಂಚೆ ಧರಿಸುವುದರ ಮೇಲೆ ಹೇರಿದ್ದ ನಿಷೇಧವನ್ನು ತೆರವುಗೊಳಿಸುವ ಮೂಲಕ ಪ್ರಬುದ್ಧ ರೀತಿಯಲ್ಲಿ ಸಮಸ್ಯೆಯನ್ನು ನಿಭಾಯಿಸಿತು. ಆದರೆ ಕರ್ನಾಟಕವು,  ಪಂಚೆ ನಿಷೇಧವನ್ನು, ರಾಜಕಾರಣಿಗಳು ಹಾಗೂ ಹಿರಿಯ ಅಧಿಕಾರಿಗಳ ಕಾಲ ಕಳೆವ ಸ್ಥಳಗಳಾಗಿ ಖಾಸಗಿ ಕ್ಲಬ್‍ಗಳನ್ನು ಬಳಸಿಕೊಳ್ಳಲು ಅನುವಾಗುವಂತೆ ಮಾಡುವ ಮುಂದಾಲೋಚನೆಯೊಂದಿಗೆ ಈ ಮಸೂದೆ ಜಾರಿಗೆ ತರಲು ಮುಂದಾಗಿದೆ ಎನಿಸಿದೆ. ಖಾಸಗಿ ಕ್ಲಬ್‍ಗಳನ್ನು ತಮಗೆ ಬೇಕಾದಂತೆ ಬಳಸಿಕೊಳ್ಳಲು ರಾಜಕಾರಣಿಗಳು ಮಾಡಿರುವ ಯೋಜನೆ ಕುರಿತು ಜನಕ್ಕೆ ಮಾಹಿತಿ ಇಲ್ಲದಿದ್ದರೆ ಇಂತಹ ಇನ್ನಷ್ಟು ನಿಯಮಗಳು ಜಾರಿಗೆ ಬರಲಿವೆ.

ಹೀಗಾಗಿ ಭಾರತ ಗಣರಾಜ್ಯವಾದ 66ನೇ ವರ್ಷದಲ್ಲಿ ಸರ್ಕಾರ ಜಾರಿಗೊಳಿಸಲು ಹೊರಟಿರುವ ಈ ಮದೂದೆ ಕುರಿತು ಜನರು ತಿಳಿದುಕೊಳ್ಳುವ ಅಗತ್ಯವಿದೆ. ಕಾಯ್ದೆ ಮತ್ತು ಅದರಲ್ಲಿನ ಕೆಲವು ಅಂಶಗಳ ಕುರಿತು ಇಲ್ಲಿ ವಿಶ್ಲೇಷಿಸಲಾಗಿದೆ. ಮಸೂದೆಯಲ್ಲಿ ಕೆಲವು ಕಲಂ ಮತ್ತು ಪರಿಚ್ಛೇದಗಳ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ. ಈ ಕಾಯಿದೆಯನ್ನು ಕರ್ನಾಟಕ ರಾಜಕಾರಣಿಗಳಿಗಾಗಿ (ಎಲ್ಲ ನಿಷೇಧಗಳಿಗೆ ಮುಕ್ತ ಪ್ರವೇಶ ಮತ್ತು ಬಳಕೆ) ಕಾಯಿದೆ-2015 ಎಂದು ಹೆಸರಿಸಬಹುದಾಗಿದೆ. ಪ್ರಸ್ತುತ ಮಸೂದೆಯನ್ನು 1947ರ ಆಗಸ್ಟ್ 15ರಿಂದ ಪೂರ್ವಾನ್ವಯ ಆಗುವಂತೆ ಜಾರಿಗೊಳಿಸಲು ಉದ್ದೇಶಿಸಲಾಗಿದೆ.ಇದರಲ್ಲಿನ ಮತ್ತೊಂದು ಪ್ರಮುಖ ಅಂಶವೆಂದರೆ,ಈ ಕಾಯ್ದೆ ಎಂದು ಕೊನೆಗೊಳ್ಳಲಿದೆ ಎಂಬುದು ಅಪ್ಪಿತಪ್ಪಿಯೂ ಎಲ್ಲಿಯೂ ಉಲ್ಲೇಖವಾಗಿಲ್ಲ.ಇನ್ನು, ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಸಂಪ್ರದಾಯ ಉಳಿಸಿಕೊಳ್ಳುವ ಉದ್ದೇಶದಿಂದ ಕೆಲವು ಹಳೆಯ ವ್ಯಾಖ್ಯಾನಗಳನ್ನು ಬದಲಿಸಲಾಗುವುದು ಎಂಬ ಸಂಗತಿ ಇದರಲ್ಲಿದೆ. ಇಲ್ಲಿ `ಸರ್ಕಾರ' ಎಂದರೆ ದೇವರಿದ್ದಂತೆ. ಹಾಗಾಗಿ ಜಗತ್ತಿ ನಲ್ಲಿರುವ ಯಾರೂ ಸರ್ಕಾರವನ್ನು ಪ್ರಶ್ನಿಸುವಂತಿಲ್ಲ. ಸಾರ್ವಜನಿಕ ಸ್ಥಳ ಎಂದರೆ ರಾಜಕಾರಣಿಗಳು ತಂಗಲು ಬಯಸುವ ಯಾವುದೇ ಸ್ಥಳ. ಅಂದರೆ ಕ್ಲಬ್‍ಗಳು, ಪಾರ್ಕ್ ಗಗಳು, ಸರೋವರಗಳು, ಸಾರ್ವಜನಿಕ ರಸ್ತೆಗಳು,ಖಾಸಗಿ ವಸತಿ ಸಮುಚ್ಚಯಗಳು, ಅಡುಗೆ ಕೋಣೆ ಮತ್ತು ಸ್ನಾನದ ಗೃಹಗಳು ಸೇರಿದಂತೆ ಎಲ್ಲವೂ ಸಾರ್ವಜನಿಕ ಸ್ಥಳಗಳೇ.`ಜನ' ಎಂದರೆ ರಾಜಕಾರಣಿಗಳು ಎಂದರ್ಥ.

ಅಂದರೆ, ಎಲ್ಲವೂ ಅವರಿಗೇ, ರಾಜಕಾರಣಿಗಳಿಗೇ ಸೇರಿದ್ದು ಎಂದರ್ಥ. ಇಲ್ಲಿಯವರೆಗೂ ಜನರೆಂದು ಕರೆಯುತ್ತಿದ್ದ, ಉದಾಹರಣೆಗೆ ತೆರಿಗೆ ಪಾವತಿ ದಾರರು ಮತ್ತು ಮತದಾರರು ಇಲ್ಲಿಂದಾಚೆಗೆ ಕೇವಲ ಜನಗಣತಿಗಷ್ಟೇ ಸೀಮಿತ.ಎಲ್ಲ ಸ್ಥಳಗಳಿಗೆ ಪ್ರವೇಶಕ್ಕೆ ಅವಕಾಶ ನೀಡುವ ಹಳೆಯ ಮಸೂದೆಯಲ್ಲಿನಂತೆಂಯೇ ಹೊಸ ಮಸೂದೆ ಯಲ್ಲೂ ಅವಕಾಶ ಕಲ್ಪಿಸಲಾಗಿದೆ.ಮತ್ತೊಂದು ಪ್ರಮುಖ ಅಂಶವೆಂದರೆ, ಪಂಚೆ ಧರಿಸಿದ್ದರೆ ಅದು ಕನ್ನಡದ ಸಂಸ್ಕೃತಿಯನ್ನು ಬಿಂಬಿಸಲಿ ದ್ದು, ಯಾವುದೇ ಕಾರಣಕ್ಕೂ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನಿರಾಕರಿಸಕೂಡ ದು ಎಂಬುದು.ಇಲ್ಲಿವರೆಗೂ ಪಂಚೆ ತೊಟ್ಟಿರುವವರು ಎಂಬ ಗುರುತು ಹೆಚ್ಚಾಗಿ ಸ್ವಾತಂತ್ರ್ಯ ಯೋಧರಿಗೆ ಮಾತ್ರ ಅನ್ವಯಿಸುತ್ತಿತ್ತು. ಅವರಿಗೆ ಮಾತ್ರವೇ ಸದಸ್ಯತ್ವ ವನ್ನೂ ನೀಡಲಾಗುತ್ತಿತ್ತು. ಹೊಸ ಮಸೂದೆ ಯಲ್ಲಿ ಎಂಪಿ, ಎಂಎಲ್‍ಎ, ಎಂಎಲ್‍ಸಿ,ಐಎಎಸ್-ಐಪಿಎಸ್, ಕೆಎಎಸ್ ಮುಂತಾದ ಗಣ್ಯವ್ಯಕ್ತಿಗಳು ಮಾತ್ರವಲ್ಲ; ಕಾರಿನ ಪಾಸ್ ಕೇಳಿದ್ದಕ್ಕೆ ಸೆಕ್ಯುರಿಟಿ ಗಾರ್ಡ್‍ಗಳ ಮೇಲೆ ಹಲ್ಲೆ ನಡೆಸಿದ ಅಧಿಕಾರಿಗಳ ವಾಹನಗಳ ಚಾಲಕರಿಗೂ ಯಾವುದೇ ಕಾರಣಕ್ಕೂ ಸದಸ್ಯತ್ವ ನಿರಾಕರಿಸುವಂತಿಲ್ಲ. ಏಕೆಂದರೆ, ಈ ಎಲ್ಲ ರಾಜಕಾರಣಿಗಳು ಮತ್ತು ಅಧಿಕಾರಿಗಳ ಹಕ್ಕು ಎಲ್ಲ ಜನಸಾಮಾನ್ಯರ ಹಕ್ಕುಗಳಿಗಿಂತಲೂ ಮೇಲೆ ನಿಲ್ಲಲಿದೆ.ವಾರ್ಷಿಕ ಸದಸ್ಯತ್ವ ಶುಲ್ಕವನ್ನು ಕೇವಲ ಒಂದು ರುಪಾಯಿ ನಿಗದಿಪಡಿಸಲಾಗಿದ್ದು, ಅದು ಅವಿವೇಕತನದಿಂದ ಕೂಡಿದ್ದರೂ ಯಾವ ಕ್ಲಬ್ ಗಳೂ ಎಂಥದ್ದೇ ಸಂದರ್ಭದಲ್ಲೂ ಪ್ರಶ್ನೆ ಮಾಡುವಂತಿಲ್ಲ.ಇನ್ನೂ ಸ್ವಾರಸ್ಯಕರ ವಿಷಯ ಎಂದರೆ, ಕ್ಲಬ್ ಗಳನ್ನು ಹೊರತುಪಡಿಸಿ ಸಾರ್ವಜನಿಕ ಸ್ಥಳಗಳಿಗೂ ಈ ಮಸೂದೆಯ ಬಿಸಿ ಬೇರೆಯದೇ ರೀತಿಯಲ್ಲಿ ತಟ್ಟಲಿದೆ. ಏಕೆಂದರೆ, ಕ್ಲಬ್‍ಗಳು ಮಾತ್ರವಲ್ಲ,ಖಾಸಗಿ ಹೋಟೆಲ್‍ಗಳು, ರೆಸ್ಟೋರೆಂಟ್‍ಗಳು,ಎಲ್ಲ ಪಂಚತಾರ ಹೋಟೆಲ್‍ಗಳು ಸಹ ಕಲಂ ನಾಲ್ಕರಲ್ಲಿ ಪ್ರಸ್ತಾಪಿಸಿರುವ ಎಂಪಿ, ಎಂಎಲ್‍ಎ,ಎಂಎಲ್‍ಸಿ ಮತ್ತು ಅಧಿಕಾರಿಗಳಿಗೆ ಅಗತ್ಯಬಿದ್ದಲ್ಲಿ ಕೊಠಡಿಗಳನ್ನು ಕಾಯ್ದಿರಿಸಬೇಕು. ಆದರೆ ಈ ಸೇವೆಗಳಿಗೆ ಹೆಚ್ಚುವರಿ ಶುಲ್ಕ ವಿಧಿಸುವಂತಿಲ್ಲ.
ಹೋಟೆಲ್ ಕೊಠಡಿಗೆ ಒಂದು ರುಪಾಯಿ ಮತ್ತು ಸೂಪ್, ಸಲಾಡ್ ಹಾಗೂ ಫ್ರೆಂಚ್ ವೈನ್ ಸೇರಿದಂತೆ ಫೈವ್ ಕೋರ್ಸ್ ಡಿನ್ನರ್‍ಗೆ ಐದು ರುಪಾಯಿ ಶುಲ್ಕವನ್ನಷ್ಟೆ ವಿಧಿಸಲು ಅವಕಾಶ.ಒಂದು ವೇಳೆ ಅಪ್ಪಿತಪ್ಪಿ ಈ ಸೇವೆಗಳ ಶುಲ್ಕ ಹೆಚ್ಚಾದಲ್ಲಿ ಅದು ಕಾನೂನು ವಿರೋಧಿ ಎಂದೇ ಪರಿಗಣಿಸಲಾಗುತ್ತದೆ.ಈ ಕಾನೂನಿನ ಬಿಸಿಯು ಖಾಸಗಿ ಸ್ಥಳಗಳ ಬಳಕೆಗೂ ಇದ್ದ ಕಡಿವಾಣಗಳನ್ನೂ ಅನಾಮತ್ತಾಗಿ ಕಿತ್ತೊಗೆದಿದೆ. ಕಲಂ ನಾಲ್ಕು ಮತ್ತು ಕಲಂ ಐದರಲ್ಲಿ ಪ್ರಸ್ತಾಪಿಸಿರುವ ಎಂಪಿ, ಎಂಎಲ್‍ಎ, ಎಂಎಲ್‍ಸಿ ಮತ್ತು ಅಧಿಕಾರಿಗಳು ಯಾವುದೇ ಸಂಸ್ಥೆಯ ಅಥವಾ ಗೃಹ ನಿರ್ಮಾಣ ಕಂಪನಿಗಳ ಜಿಮ್, ಸ್ವಿಮ್ಮಿಂಗ್‍ಪೂಲ್ ಮತ್ತಿತರ ಸೌಲಭ್ಯಗಳನ್ನು ಯಾವುದೇ ಸದಸ್ಯತ್ವ ಶುಲ್ಕ ಪಾವತಿಸದೆಯೇ ಉಚಿತವಾಗಿ ಬಳಕೆ ಮಾಡಿಕೊಳ್ಳುವ ಎಲ್ಲ ಹಕ್ಕುಗಳನ್ನೂ ಹೊಂದಿದ್ದಾರೆ. ಈ ಕೇಂದ್ರಗಳ ನಿರ್ವಹಣೆಗೆ ಶುಲ್ಕ ಪಾವತಿಸುವ ಜನ ಎಂಪಿ,ಎಂಎಲ್‍ಎ, ಎಂಎಲ್‍ಸಿಗಳು, ಐಎಎಸ್, ಐಪಿಎಸ್ ಅಧಿಕಾರಿಗಳು, ಅವರ ವಾಹನ ಚಾಲಕರು ನಮ್ಮ ಸಂಸ್ಥೆಗೆ ಬರುವುದು ನಮ್ಮ ಭಾಗ್ಯ ಎಂದೇ ಪರಿಗಣಿಸಬೇಕೇ ಹೊರತು ಬೇರೆ ಆಲೋಚನೆ ಹೊಂದುವಂತಿಲ್ಲ.ಭಾರತವನ್ನು ರಾಜರು, ನವಾಬರು ಆಳಿದ ದೊಡ್ಡ ಪರಂಪರೆ ಇದೆ. ಆದರೆ ಈಗ,ಪ್ರಜಾಪ್ರಭುತ್ವದ ಅಡಿಯಲ್ಲಿ ಎಂಪಿ, ಎಂಎಲ್‍ಎ,
ಎಂಎಲ್‍ಸಿಗಳು, ಐಎಎಸ್-ಐಪಿಎಸ್ ಅಧಿಕಾರಿಗಳು ಮತ್ತು ಅವರ ಚಾಲಕರು ಆಧುನಿಕ ರಾಜರು ಮತ್ತು ನವಾಬರಾಗಿದ್ದಾರೆ. ಹಾಗಾಗಿ ಈ ಆಧುನಿಕ ರಾಜರು ಮತ್ತು ನವಾಬರೆಲ್ಲರಿಗೂ ಅತ್ಯಂತ ವಿಧೇಯರಾಗಿರುವಂತೆ ನಡೆದುಕೊಳ್ಳುವುದು ಸಾಮಾನ್ಯ ಜನರ ಭಾಗ್ಯದಂತಿದೆ. ಆದರೆ ಕರ್ನಾಟಕ ಮುಂದುವರಿಯಬೇಕಾದ್ದು ಈ ಹಾದಿಯಲ್ಲಲ್ಲ. ಆಕ್ರೋಶಗೊಳ್ಳುವಷ್ಟು ಲೋಡ್ ಶೆಡ್ಡಿಂಗ್ ನಿಲ್ಲಬೇಕು, ಬೆಂಗಳೂರು ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳ ಸಂಖ್ಯೆ 30 ಲಕ್ಷ ಇವೆ, ಈ ಸಂಖ್ಯೆ ಕಡಿಮೆಯಾಗಬೇಕು. ತಮಿಳುನಾಡಿಗೆ ಒಂದು ಹನಿ ಕಾವೇರಿ ನೀರನ್ನೂ ಬಿಡಬಾರದು.ಅಂಥ ಕಾರ್ಯಗಳು ನಡೆದರೆ, ನಿಜವಾಗಿ....

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com