ಅಕೌಂಟೆಂಟ್, ಆಡಿಟರ್ ವೃತ್ತಿಯಿಂದ ಹಿಡಿದು ಡ್ರೈವರ್ ಕೆಲಸದ ವರೆಗೆ ಎಲ್ಲವನ್ನೂ ನಿಖರವಾಗಿ ಮಾಡಲು ಮಷೀನ್ ಗಳು ಸಿದ್ಧವಾಗುತ್ತಿವೆ. ಹಲವಾರು ಕ್ಷೇತ್ರದಲ್ಲಿ ಆಗಲೇ ಇದು ಸಿದ್ಧವಿದೆ ಕೂಡ. ಇದೆಲ್ಲಾ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವರಿಗೆ ಹೊಸ ವಿಷಯವೇನೂ ಅಲ್ಲ. ನಿತ್ಯ ಯಾವುದಾದರೊಂದು ದೊಡ್ಡ ಕಾರ್ಪೊರೇಟ್ ಸಂಸ್ಥೆ ತನ್ನ ನೌಕರರನ್ನ ಲೇ ಆಫ್ ಮಾಡುವುದು ಜನ ಸಾಮಾನ್ಯ ಕೂಡ ಸುದ್ದಿ ಪತ್ರಿಕೆಗಳಲ್ಲಿ ಓದಿರುತ್ತಾನೆ. ಜಗತ್ತು ಈ ಸಮಸ್ಯೆಯನ್ನ ಅರಿತಿದೆ. ಪ್ರತಿ ನಿತ್ಯ ಹೆಚ್ಚುತ್ತಿರುವ ಜನಸಂಖ್ಯೆಗೆ ಕೆಲಸ ಒದಗಿಸಲು ಹೇಗೆ ತಾನೇ ಸಾಧ್ಯ? ನಮ್ಮ ತಂತ್ರಜ್ಞಾನ ಹೆಚ್ಚಾದಂತೆ ನಮಗೆ ಕೆಲಸ ಕಡಿಮೆಯಾಗುತ್ತದೆ. ಇದಕ್ಕೆ ಪರಿಹಾರವೇನು? ಇದಕ್ಕೆ ಪರಿಹಾರ ಸೋಶಿಯಲ್ ಎಂಟರ್ಪ್ರೈಸಿಂಗ್. ಏನಿದು ಸೋಶಿಯಲ್ ಎಂಟರ್ಪ್ರೈಸಿಂಗ್? ಇದನ್ನ ಹೇಗೆ ಬಳಸಿ ಕೊಂಡರೆ ಉತ್ತಮ ಎನ್ನುವುದನ್ನ ನೋಡೋಣ.