ಆರೋಗ್ಯವಂತ ಜೀವನ ಕ್ರಮಕ್ಕೆ ಕೆಲವು ಸೂತ್ರಗಳು (ಚಿತ್ತ ಮಂದಿರ)

ಡಾ. ಸಿ.ಆರ್ ಚಂದ್ರಶೇಖರ್ಆರೋಗ್ಯದಿಂದಿರಲು ನಮ್ಮೆಲ್ಲರಿಗೂ ಆಸೆ. ಆದರೆ ಹಲವಾರು ಕಾಯಿಲೆಗಳು ಆಗಿಂದಾಗೆ ಆಗಿಂದಾಗೆ ನಮ್ಮನ್ನು ಕಾಡುತ್ತವೆ. ಕಾಯಿಲೆಗಳು ಏಕೆ ಬರುತ್ತವೆ ಎಂದು ಪ್ರಶ್ನೆ ಕೇಳುವೆ. ಏಕೆ ಎಂದು ತಿಳಿದರೆ, ಕಾಯಿಲೆಗಳು ಬಂದಂತೆ ತಡೆಗಟ್ಟಬಹುದು. 
ಆರೋಗ್ಯವಂತ ಜೀವನ ಕ್ರಮಗಳಿಗೆ ಸೂತ್ರಗಳು
ಆರೋಗ್ಯವಂತ ಜೀವನ ಕ್ರಮಗಳಿಗೆ ಸೂತ್ರಗಳು

ಆರೋಗ್ಯದಿಂದಿರಲು ನಮ್ಮೆಲ್ಲರಿಗೂ ಆಸೆ. ಆದರೆ ಹಲವಾರು ಕಾಯಿಲೆಗಳು ಆಗಿಂದಾಗೆ ಆಗಿಂದಾಗೆ ನಮ್ಮನ್ನು ಕಾಡುತ್ತವೆ. ಕಾಯಿಲೆಗಳು ಏಕೆ ಬರುತ್ತವೆ ಎಂದು ಪ್ರಶ್ನೆ ಕೇಳುವೆ. ಏಕೆ ಎಂದು ತಿಳಿದರೆ, ಕಾಯಿಲೆಗಳು ಬಂದಂತೆ ತಡೆಗಟ್ಟಬಹುದು. 

ಕೋವಿಡ್-19 ಬಂದಾದ ಮೇಲೆ ಸೋಂಕು ರೋಗಗಳು ಬರಲು ವೈರಾಣು, ಬ್ಯಾಕ್ಟೀರಿಯಾ, ಫಂಗಸ್ ಕಾರಣ ಎಂದು ನಿಮಗೆ ತಿಳಿದಿದೆ. ಇವು ಬರಿಗಣ್ಣಿಗೆ ಕಾಣದ ಜೀವಿಗಳು. ಒಬ್ಬರಿಂದ ಮತ್ತೊಬ್ಬರಿಗೆ ಹರಡುವುವಂತಹವು. ಇವುಗಳ ವಿರುದ್ಧ ಹೋರಾಡಲು ನಾವೆಲ್ಲ ರೋಗ-ನಿರೋಧಕ ವ್ಯವಸ್ಥೆ ಇದೆ ಎಂದು ನಮಗೆ ಗೊತ್ತಾಗಿದೆ. ನಿಮ್ಮ ರೋಗ ನಿರೋಧ ಶಕ್ತಿಯನ್ನು ಹೆಚ್ಚಿಸಲು ಏನು ಮಾಡಬೇಕಂತಲೂ ತಿಳಿದುಕೊಳ್ಳುತ್ತೇವೆ. ಪರಿಸರ ಸ್ವಚ್ಛತೆ, ಪೌಷ್ಟಿಕವಾದ ಆಹಾರ, ನಿತ್ಯ ವ್ಯಾಯಾಮ ಪ್ರಶಾಂತ ಮನಸ್ಸಿನ ಮಹತ್ವ ನಿಮಗೆ ಅರ್ಥವಾಗಿದೆ. 

ಕೋವಿಡ್-19 ವೈರಾಣು ನಿಂದ ಸತ್ತವರ ಸಂಖ್ಯೆಗಿಂತ ಹೆಚ್ಚಿನ ಜನ ಡಯಾಬಿಟಿಸ್, ಬಿ.ಪಿ, ಉಸಿರಾಟದ ತೊಂದರೆಯ ಕಾಯಿಲೆ, ಹೃದಯಾಘಾತ, ಕ್ಯಾನ್ಸರ್ ನಿಂದ ಸಾಯುತ್ತಿದ್ದಾರೆ. ಇವೆಲ್ಲಾ ಒಮ್ಮೆ ಬಂದರೆ ಜೀವನ ಪರ್ಯಾಪ್ತ ಉಳಿಯುವ ಕಾಡುವ ಕಾಯಿಲೆಗಳು. ವೈದ್ಯಕೀಯ ಖರ್ಚು ತಿಂಗಳಿಗೆ ಐದಾರು ಸಾವಿರ ಕಿಂತ ಹೆಚ್ಚುತ್ತದೆ. 

ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರೆ ಲಕ್ಷ ಲಕ್ಷ ರೂಪಾಯಿಗಳು ಬೇಕಾಗುತ್ತವೆ. ನಾವು ಕಷ್ಟಪಟ್ಟು ಸಂಪಾದಿಸಿದ ಚಿನ್ನ ಬೆಳ್ಳಿ ಮನೆ ಆಸ್ತಿಯನ್ನು ಮಾರಬೇಕು ಇಲ್ಲವೇ ಸಾಲದ ಅದಕ್ಕೆ ಇರಬೇಕು. ಈ ಕಾಯಿಲೆಗಳನ್ನು ಜೀವನ ಶೈಲಿ ಕಾಯಿಲೆಗಳೆಂದು ಕರೆಯುತ್ತಾರೆ. ಆರೋಗ್ಯಕರ ಜೀವನ ಶೈಲಿಯನ್ನು ರೂಪಿಸಿಕೊಂಡರೆ  ಚಿಕ್ಕವಯಸ್ಸಿನಿಂದ ಪಾಲಿಸಿದರೆ ಈ ಕಾಯಿಲೆಗಳ ನಮ್ಮ ಬಳಿಗೆ ಬರುವುದೇ? ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. ಏನಿದೆ ಆರೋಗ್ಯಕರ ಜೀವನ ಶೈಲಿ?

  1. ಶಿಸ್ತುಸಂಯಮದ ಜೀವನ: ಆಹಾರ ಸೇವನೆ- ನಿದ್ರೆ- ಮೈಥುನ ವ್ಯಾಯಾಮ ನಿತ್ಯ ಚಟುವಟಿಕೆಗಳಲ್ಲಿ ಶಿಸ್ತು ಸಂಯಮವನ್ನು ಅಳವಡಿಸಿಕೊಳ್ಳಬೇಕು. ಆಹಾರ ಸೇವನೆ: ಹೊತ್ತು ಗೊತ್ತಿಲ್ಲದೆ ನಾಲಿಗೆಗೆ ರುಚಿಯಾಗಿದೆ ಎಂದು ಬೇಕಾಬಿಟ್ಟಿ ತಿನ್ನುವ ಅಭ್ಯಾಸಕ್ಕೆ ತಿಲಾಂಜಲಿ ನೀಡಿ. ಬೆಳಗಿನ ಉಪಹಾರವನ್ನು 9 ಗಂಟೆಯೊಳಗೆ ಮಧ್ಯಾಹ್ನದ ಊಟವನ್ನು ಒಂದರಿಂದ ಎರಡು ಗಂಟೆಯೊಳಗೆ ರಾತ್ರಿಯ ಊಟವನ್ನು 8:30 ರಿಂದ ಒಂಬತ್ತುವರೆ ಒಳಗೆ. ಬೆಳಿಗ್ಗೆ ಮಾಡಿ ಕರೆದ ಪದಾರ್ಥಗಳನ್ನು ಸಿಹಿ ತಿಂಡಿಗಳು ಬೇಕರಿ ಪದಾರ್ಥಗಳು ಕಡಿಮೆ. ಹಣ್ಣುಗಳು ಸೊಪ್ಪು ತರಕಾರಿಗಳನ್ನು ಹೆಚ್ಚು ಸೇವಿಸಿ. ಜಂಕ್ ಫುಡ್ ಗೆ ಗೇಟ್ ಪಾಸ್ ಕೊಡಿ, ಕೂಲ್ ಮತ್ತು ಹಾಟ್ ಡ್ರಿಂಕ್ಸ್ ನಿಮ್ಮ ಗಂಟಲೊಳಕ್ಕೆ ತಿಳಿಯಲು ಬಿಡಬೇಡಿ. ನಿಮ್ಮ ವಯಸ್ಸು, ಎತ್ತರಕ್ಕೆ, ಎಷ್ಟು ತೂಕವಿರಬೇಕೆಂದು ವೈದ್ಯರನ್ನು ಕೇಳಿ ತೂಕ ಸರಿಯಾಗಿಟ್ಟುಕೊಳ್ಳಿ. ದೇಹದ ತೂಕ ಕಡಿಮೆ ಇದ್ದರೆ, ಹೆಚ್ಚಿದ್ದರೆ ಅಪಾಯಕಾರಿ ಎಂದು ತಿಳಿಯಿರಿ.
  2. ನಿದ್ರೆ: ನಮಗೆಲ್ಲಾ ಸರಾಸರಿ ಆರೇಳು ಗಂಟೆಗಳ ಕಾಲ ನಿದ್ರೆ ಬೇಕು, ನಿದ್ರೆಯಿಂದ ಮೈ ಮನಸ್ಸು ವಿರಮಿಸುತ್ತವೆ. ಬೇಗ ಮಲಗಿ ಬೇಗ ಏಳುವ ಅಭ್ಯಾಸ ಮಾಡಿಕೊಳ್ಳಿರಿ, ಒಂದು ನಿರ್ದಿಷ್ಟ ಸಮಯಕ್ಕೆ ಮಲಗಿ ಎಳಿ, ಮಲಗುವ ಅರ್ಧ ಗಂಟೆ ಮೊದಲು ಯಾವುದೇ ಚಿಂತೆ ಭಾವೋದ್ವೇಗ ಬೇಡ, ಸಂಗೀತ ಸಂಭಾಷಣೆಗಳಿಂದ ರಿಲಾಕ್ಸ್ ಆಗಿ ಮಲಗಿ.
  3. ಮೈಥುನ: ಸಂಯಮ ಅತ್ಯಗತ್ಯ,ಇಂದಿನ ಮಾಧ್ಯಮಗಳಲ್ಲಿ ಮೊಬೈಲ್- ಇಂಟರ್ ನೆಟ್ ಗಳಲ್ಲಿ, ಲೈಂಗಿಕ ಪ್ರಚೋದಕ ಅಂಶಗಳು ಹೆಚ್ಚಾಗಿವೆ, ವಿವಾಹಪೂರ್ವ ಮತ್ತು  ವಿವಾಹೋತರ ಹೊರಗಿನ ಲೈಂಗಿಕ ಸಂಪರ್ಕ ಬೇಡವೇಬೇಡ, ಜೀವನ ಜೀವನ ಸಂಗಾತಿಯೊಂದಿಗೆ ಸಹಕರಿಸಿ, ಪ್ರೀತಿಯಿಂದ ನಿಷ್ಕ್ರಿಯ ಲೈಂಗಿಕ ಚಟುವಟಿಕೆ ನಡೆಸಿ.
  4. ವ್ಯಾಯಾಮವಾಗುವಂತಹ ಚಟುವಟಿಕೆಗಳು: ನಿತ್ಯ ಬೆಳಗ್ಗೆ ಸಂಜೆ ವಾಕಿಂಗ್ ಮಾಡಿ, ಅಥವಾ ಬಯಲಲ್ಲಿ ಆಡುವ ಆಟಗಳನ್ನು ಆಡಿ, ವಾಹನವೇರಿ  ಹೋಗುವ ಬದಲು ಆದಷ್ಟು ನಡೆದೆ ಹೋಗಿ. ಸೈಕ್ಲಿಂಗ್, ಈಜುವುದು, ನೃತ್ಯ, ಸ್ಕಿಪ್ಪಿಂಗ್, ಇತ್ಯಾದಿ ಚಟುವಟಿಕೆಗಳು ಸಹಾಯಕಾರಿ.
  5. ಸ್ವಚ್ಛತೆ: ನಿತ್ಯ ಸ್ನಾನ ಮಾಡುವ ಅಭ್ಯಾಸ ಮಾಡಿ ಒಳಉಡುಪುಗಳನ್ನು ನಿತ್ಯ ಬದಲಿಸಿ, ಹಾಗೆ ನಿಮ್ಮ ಮನೆಯ ಒಳಗೆ ಹೊರಗೆ, ಕಸಕಡ್ಡಿ, ಧೂಳು ,ತೇವ, ಬೇಡದ ವಸ್ತುಗಳು, ಇರದಂತೆ ಸ್ವಚ್ಛ ಮಾಡಿ, ವಿಶೇಷವಾಗಿ ಅಡುಗೆಮನೆ, ಊಟದ ಮನೆ, ಶೌಚಾಲಯ, ಮಲಗುವ ಕೋಣೆ, ಎಷ್ಟು ಸ್ವಚ್ಛವಾಗಿರುತ್ತವೋ, ಅಷ್ಟು ನಾವು ರೋಗಮುಕ್ತರಾಗುತ್ತೇವೆ.
  6. ಔಷಧಿ– ಚಿಕಿತ್ಸೆ: ನಿಮಗೆ ಈಗಾಗಲೇ ಇರುವ ಕಾಯಿಲೆ/ ಕಾಯಿಲೆಗಳ, ಚಿಕಿತ್ಸೆಯನ್ನು ಶಿಸ್ತಿನಿಂದ ಪಡೆದುಕೊಳ್ಳಿ, ವೈದ್ಯರು ಹೇಳಿದ ಔಷಧಿಗಳು, ಇತರ ಮಾಡಿ/ ಮಾಡಬೇಡಿ ಸಲಹೆಗಳನ್ನು ಶ್ರದ್ಧೆಯಿಂದ ಪಾಲಿಸಿ. ನೀವೇ ಚಿಕಿತ್ಸೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಡಿ ಏಕಕಾಲಕ್ಕೆ ಹಲವು ವೈದ್ಯರನ್ನು, ಚಿಕಿತ್ಸೆಯನ್ನು ಮಾಡಬೇಡಿ, ಅಕ್ಕಪಕ್ಕದವರ, ಬಂಧುಮಿತ್ರರ, ಪುಕ್ಕಟ್ಟೆ ಸಲಹೆಗಳನ್ನು ಒಂದು ಕಡೆಯಿಂದ ಕೇಳಿ ಇನ್ನೊಂದು ಕಿವಿಯಲ್ಲಿ ಬಿಡಿ. ಸಂಪ್ರದಾಯಿಕ ಚಿಕಿತ್ಸೆಗಳಿಗೆ ಗುಡ್ ಬೈ ಹೇಳಿ, ಯುವ ಜ್ಯೋತಿಷ್ಯ, ಪೂಜಾರಿ, ಮಂತ್ರವಾದಿ, ನಿಮ್ಮ ಕಾಯಿಲೆಯನ್ನು ವಾಸಿ ಮಾಡಲಾರ.
  7. ಆಸೆ ಆಕಾಂಕ್ಷೆ ಭೋಗ ಜೀವನ ಶೈಲಿಗೆ ಕಡಿವಾಣ ಹಾಕಿ: ಮನುಷ್ಯ ಆಸೆ ಆಕಾಂಕ್ಷೆಗಳ ಗುಡಾಣ. ಹಣ ಒಡವೆ ವಸ್ತು ಭೋಗ ಜೀವನಕ್ಕೆ ಬೇಕಾದ ವಸ್ತು /ಉಪಕರಣಗಳು, ಆಸ್ತಿ ಅಂತಸ್ತು, ಅಧಿಕಾರ, ಪ್ರಶಸ್ತಿ-ಪುರಸ್ಕಾರಗಳು ಬೇಕು, ಬೇಕು ಎಂಬ ಆಸೆ ಬಯಕೆಗಳು ನಮ್ಮನ್ನು ಮುತ್ತಿಕೊಂಡಿವೆ. ಇತರರಿಗೆ ದೊರಕಿ ನಮಗೆ ದೊರೆಯದಿದ್ದಲ್ಲಿ, ಹತಾಶರಾಗಿ ಹೆಚ್ಚು ಹಣ ಸಂಪಾದನೆಗೆ ತಿಣುಕಾಡುತ್ತೇವೆ, ಅಕ್ರಮ ಮಾರ್ಗದಲ್ಲಿ ಯಾದರು ಇವನ್ನೆಲ್ಲ ಸಂಪಾದಿಸಲು ಹಿಂಜರಿಯುವುದಿಲ್ಲ. ಭೋಗ ಭಾಗ್ಯಗಳ ಮತ್ತು ಹಣದ ದಾಹ ಎಂದಿಗೂ ಹಿಗ್ಗುವುದಿಲ್ಲ. ಇಷ್ಟು ಸಿಕ್ಕರೆ ಮತ್ತಷ್ಟು, ಅಷ್ಟು ಸಿಕ್ಕಿದರೆ ಮಗದಷ್ಟು ಬೇಕು ಎನಿಸುತ್ತಿರುತ್ತದೆ. ಮನಸ್ಸಿನ ನೆಮ್ಮದಿ ಸಮಾಧಾನ ಇಲ್ಲವಾಗುತ್ತದೆ. ದುಗುಡ, ದುಮ್ಮಾನ, ನಿರಾಶೆ, ಕೋಪ, ಅಸಹನೆ ಮನಸ್ಸನ್ನು ಆವರಿಸಿಕೊಂಡು ಬಿಡುತ್ತದೆ ಮಾನಸಿಕ ಒತ್ತಡ ಹೆಚ್ಚುತ್ತದೆ, ದೇಹದಲ್ಲಿ ಅಡ್ರಿನಲ್/ ಕಾರ್ಟಿಸೋಲ್ ಹಾರ್ಮೋನ್ ಹೆಚ್ಚಿ ಎಲ್ಲ ಅಂಗಾಂಗಗಳ ಮೇಲೆ ದುಷ್ಪರಿಣಾಮಗಳನ್ನುಂಟು ಮಾಡಿ ಅವು ರೋಗಗ್ರಸ್ತವಾಗುವಂತೆ ಮಾಡುತ್ತವೆ. ಆದ್ದರಿಂದ ಸರಳ - ತೃಪ್ತ ಜೀವನವನ್ನು ಮಾಡಿ, ನಿಮ್ಮ ಮಾತು, ವರ್ತನೆ, ವಸ್ತ್ರಾಲಂಕಾರ ಆಲೋಚನೆ, ವಿಚಾರಗಳು, ಸರಳವಾಗಿರಲಿ.
  8. ಉದ್ಯೋಗ ಕೆಲಸಗಳನ್ನು ಸಮರ್ಪಣಾಭಾವದಿಂದ ಮಾಡಿ: ನೀವು ಯಾವುದೇ ಉದ್ಯೋಗ ವ್ಯಾಪಾರ ವೃತ್ತಿಯಲ್ಲಿ ಇರಲಿ, ಖುಷಿಯಿಂದ, ಪ್ರಾಮಾಣಿಕತೆಯಿಂದ, ಶ್ರದ್ಧೆಯಿಂದ ಮಾಡಿ, ದುಡಿದು ತಿನ್ನಿ, ಬೇರೆಯವರನ್ನು ದುಡಿಸಿ, ನೀವು ತಿನ್ನಬೇಡಿ, ಪ್ರತಿಯೊಂದು ಉದ್ಯೋಗವು ಸಮಾಜಕ್ಕೆ ಅಗತ್ಯವಿದೆ. ಉದ್ಯೋಗದಲ್ಲಿ ಮೇಲು ಕೀಳು ಎಂಬುದಿಲ್ಲ, ಸಫಾಯಿ ಕೆಲಸವಿರಲಿ ಸಾಫ್ಟ್ ವೇರ್ ಕೆಲಸವಿರಲಿ ಎಲ್ಲ ಸರಿ ಸಮವೆ.
  9. ಪ್ರೀತಿ ವಿಶ್ವಾಸ ದಯೆ ಅನುಕಂಪಗಳು: ನಿಮ್ಮಿಂದ ಹೊರಹೊಮ್ಮುತ್ತಿರಲಿ ಮನೆಯವರನ್ನು, ಜೊತೆ ಕೆಲಸ ಮಾಡುವವರನ್ನು, ನೆರೆಹೊರೆಯವರನ್ನು, ನಿಮ್ಮ ಊರುಕೇರಿಯ ಜನರನ್ನು, ಪ್ರೀತಿಸಿ, ಗೌರವಿಸಿ, ಯಾರಿಗೂ ಅನ್ಯಾಯ, ಮೋಸ ಮಾಡಬೇಡಿ, ಯಾರ ಅನ್ನವನ್ನು, ಹಕ್ಕನ್ನು ಕಸಿಯಬೇಡಿ, ಹಂಚಿಕೊಂಡು ತಿನ್ನೋಣ, ದೀನ- ದುರ್ಬಲರು, ರೋಗಿಗಳಿಗೆ, ವೃದ್ಧರಿಗೆ, ಅನಾಥರಿಗೆ, ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು  ನೆರವಾಗೋಣ, ಇದರಿಂದ ಸಿಗುವ ಆನಂದ, ಭೋಗ ಭಾಗ್ಯ, ಐಶಾರಾಮಿ ಜೀವನದಲ್ಲಿ ಕಂಡಿತ ಸಿಗುವುದಿಲ್ಲ. ಆರೋಗ್ಯವಾಗಿ ಓದಿಕೊಂಡು ಆನಂದದಿಂದ ಇರೋಣ.

ಡಾ. ಸಿ.ಆರ್ ಚಂದ್ರಶೇಖರ್, ಮನೋವೈದ್ಯ 

drcrchandrashekhar@gmail.com
+919845605615

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com