ಹೊಸ ವರ್ಷಕ್ಕೆ ಆರೋಗ್ಯ ಸೂತ್ರಗಳು (ಕುಶಲವೇ ಕ್ಷೇಮವೇ)

ಜೀವನವನ್ನು ಸಂತೋಷದಾಯಕ ಮತ್ತು ಆರೋಗ್ಯದಾಯಕವನ್ನಾಗಿ ಮಾಡಿಕೊಳ್ಳಲು ಈ ಸೂತ್ರಗಳನ್ನು ಗಮನಿಸಿ.
ಹೊಸ ವರ್ಷ 2023 (ಸಾಂಕೇತಿಕ ಚಿತ್ರ)
ಹೊಸ ವರ್ಷ 2023 (ಸಾಂಕೇತಿಕ ಚಿತ್ರ)
Updated on

ಜೀವನವನ್ನು ಸಂತೋಷದಾಯಕ ಮತ್ತು ಆರೋಗ್ಯದಾಯಕವನ್ನಾಗಿ ಮಾಡಿಕೊಳ್ಳಲು ಈ ಸೂತ್ರಗಳನ್ನು ಗಮನಿಸಿ:

•    ಬದುಕನ್ನು ಒಂದು ಕಲೆಯಾಗಿ ರೂಪಿಸಿಕೊಂಡಲ್ಲಿ ಆನಂದದ ‘ಅರಮನೆ’ ನಮ್ಮದಾಗುವುದು.
•    ಆಹಾರ, ವ್ಯಾಯಾಮ, ಮಾನಸಿಕ ಒತ್ತಡ ನಿಭಾಯಿಸುವಿಕೆ ಇವು ಆರೋಗ್ಯಕರ ಜೀವನದ ಮೂರು ಸ್ತಂಭಗಳು.
•    ನಾವು ಮಾಡುವ ಪ್ರತಿಯೆಂದು ಕೆಲಸವನ್ನು ಇಷ್ಟಪಟ್ಟು ಮಾಡೋಣ, ಕಷ್ಟಪಟ್ಟು ಮಾಡುವುದು ಬೇಡ.
•    ಹಿತವಾದ, ಮಿತವಾದ ಆಯಾ ಋತುಮಾನಕ್ಕನುಗುಣವಾದ ಆಹಾರಕ್ರಮವಿರಲಿ.
•    ಆಹಾರದಲ್ಲಿ ಸೊಪ್ಪು, ತರಕಾರಿ, ಹಣ್ಣುಗಳು ಯಥೇಚ್ಛವಾಗಿರಲಿ.
•    ಸಿಹಿ, ಹುಳಿ, ಉಪ್ಪು, ಖಾರ, ಕಹಿ, ಒಗರು ಈ ಆರು ರುಚಿಗಳನ್ನು ಒಳಗೊಂಡ ಆಹಾರ ಸೇವಿಸಿದಲ್ಲಿ ದೇಹದಲ್ಲಿ ರೋಗನಿರೋಧಕ ಶಕ್ತಿ ಚೆನ್ನಾಗಿರುತ್ತದೆ.
•    ರಾಸಾಯನಿಕ ಅಂಶಗಳನ್ನು ಒಳಗೊಂಡಿರುವ ಆಹಾರ ಪದಾರ್ಥಗಳಿಂದ ದೂರವಿರಿ.
•    ಬಿಳಿ ವಿಷ ಮತ್ತು ನಿಧಾನ ವಿಷಗಳಾದ ಉಪ್ಪು, ಸಕ್ಕರೆ ಮತ್ತು ಮೈದಾ ಬಳಸುವುದರಲ್ಲಿ ಜಿಪುಣರಾಗೋಣ (ಮಿತಿ ಹಾಕಿಕೊಳ್ಳೋಣ).

•    ಸಕ್ಕರೆಗೆ ಬದಲು ಬೆಲ್ಲ ಬಳಸಿ.
•    ನಾರಿನಾಂಶವಿರುವ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸಿ.
•    ರಾತ್ರಿ ಹೊತ್ತು ಬೇಗ ಊಟ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ.
•    ಕಾಫಿ, ಟೀ, ತಂಪು ಪಾನೀಯಗಳ ಸೇವನೆಯಲ್ಲಿ ಮಿತಿ ರೂಢಿಸಿಕೊಳ್ಳಿ.
•    ದಿನಕ್ಕೆ ಮೂರು ಲೀಟರ್ ನೀರನ್ನು ಅವಶ್ಯಕವಾಗಿ ಕುಡಿಯಿರಿ.
•    ರಾತ್ರಿ ಮಲಗುವ ಮುಂಚೆ ಒಂದು ಲೋಟ ಬಿಸಿನೀರು ಕುಡಿದಲ್ಲಿ ಮಲಬದ್ಧತೆಯ ಸಮಸ್ಯೆ ಬಾಧಿಸಲಾರದು.
•    ಊಟ ಮಾಡುವಾಗ ನಿಧಾನವಾಗಿ ಅಗಿದು ತಿನ್ನುವ ಕ್ರಮ ರೂಢಿಸಿಕೊಳ್ಳಿ.
•    ದಿನಕ್ಕೆ ಒಂದು ಗಂಟೆ ನಡಿಗೆ ಅಥವಾ 1/2 ಗಂಟೆ ವ್ಯಾಯಾಮ ಅಥವಾ ಯೋಗಾಭ್ಯಾಸ ಮಾಡುವುದನ್ನು ರೂಢಿಸಿಕೊಳ್ಳಿ.
•    ಕನಿಷ್ಟ ವಾರಕ್ಕೆ ಐದು ದಿನವಾದರೂ ನಡಿಗೆ, ವ್ಯಾಯಾಮ ಅಥವಾ ಯೋಗಾಭ್ಯಾಸ ಇರಲಿ.
•    6 ರಿಂದ 8 ಗಂಟೆ ನಿದ್ರೆ ಅವಶ್ಯಕ.
•    ನಿದ್ರೆಮಾತ್ರೆಗೆ ಮೊರೆಹೋಗದೇ ರಾತ್ರಿ ಕೊಳಲಿನ ಸಂಗೀತ ಆಲಿಸಿದಲ್ಲಿ ನಿದ್ರೆ ತಾನಾಗಿಯೇ ಬರುತ್ತದೆ.
•    ರೋಗನಿರೋಧಕ ಶಕ್ತಿ ಹೆಚ್ಚಿಸುವ ವಿಟಮಿನ್ ಸಿ ಹೆಚ್ಚಾಗಿರುವ ನೆಲ್ಲಿಕಾಯಿಯನ್ನು ಆಹಾರದಲ್ಲಿ ಹೆಚ್ಚು ಬಳಸಿ.
•    ಜೇನುತುಪ್ಪವನ್ನು ದಿನ ನಿತ್ಯದ ಆಹಾರದಲ್ಲಿ ಬಳಸುತ್ತಿದ್ದಲ್ಲಿ ಕಬ್ಬಿಣಾಂಶ, ಸುಣ್ಣಾಂಶದ ಕೊರತೆ ಕಾಡಲಾರದು.
•    ಧೂಮಪಾನ, ಮದ್ಯಪಾನಗಳಿಂದ ಮತ್ತು ಮಾದಕ ವಸ್ತುಗಳಿಂದ ದೂರವಿರಿ.
•    ದಪ್ಪಗಿದ್ದಲ್ಲಿ ತೂಕ ಕಡಿಮೆ ಮಾಡಿಕೊಳ್ಳುವ ಕುರಿತು ಯೋಚಿಸಿ, ನಿಮಗೆ ನೀವೇ ಆಹಾರದಲ್ಲಿ ಮಿತಿ, ವ್ಯಾಯಾಮ ಅನುಸರಿಸಿ ತೂಕ ತಗ್ಗಿಸಿಕೊಂಡು ಆರೋಗ್ಯಕರ ಜೀವನ ನಡೆಸಿ.

•    ದೈಹಿಕ ಸ್ವಚ್ಛತೆ, ಮನೆ ಒಳಗಿನ ಹಾಗೂ ಹೊರಗಿನ ಪರಿಸರದ ಸ್ವಚ್ಛತೆಯ ಕಡೆಗೆ ಗಮನಹರಿಸಿ.
•    ಎಲ್ಲರನ್ನು ಪ್ರೀತಿಸುವ, ಕಾಳಜಿ ವಹಿಸುವ ಮನೋಭಾವ ನೆಮ್ಮದಿ ನೀಡುತ್ತದೆ.
•    ಸಮಯದ ಪರಿಪಾಲನೆ, ಬದುಕಿನಲ್ಲಿ ಶಿಸ್ತು ಅಳವಡಿಸಿಕೊಳ್ಳಬೇಕು.
•    ಪ್ರೀತಿ, ವಿಶ್ವಾಸ ಬದುಕಿನ ಮೂಲಮಂತ್ರವಾಗಿರಲಿ.
•    ಆಸೆಯಿರಲಿ, ಆದರೆ ದುರಾಸೆ ಬೇಡ.
•    ಸಾಹಿತ್ಯ, ಸಂಗೀತ, ಕ್ರೀಡೆ ಮುಂತಾದ ಯಾವುದಾದರೊಂದು ಹವ್ಯಾಸ ರೂಢಿಸಿಕೊಳ್ಳಬೇಕು.
•    ನಿರೀಕ್ಷೆಗಳನ್ನು ಕಡಿಮೆ ಮಾಡಿಕೊಳ್ಳಬೇಕು.
•    ಇರುವುದರಲ್ಲಿಯೇ ತೃಪ್ತಿ ಕಂಡುಕೊಳ್ಳಬೇಕು.
•    ಇತರರ ಏಳಿಗೆಯನ್ನು ಕಂಡು ಸಂತೋಷಪಡುವ ಮನೋಭಾವ ಇರಲಿ.
•    ಪ್ರಜ್ಞಾವಂತಿಕೆ ಹೆಚ್ಚಿಸಿಕೊಳ್ಳೋಣ.
•    ಅಂತರಂಗದ ಸೌಂದರ್ಯ ಹೆಚ್ಚಿಸಿಕೊಳ್ಳೋಣ.
•    ನಗುಮುಖ, ಸ್ನೇಹದ ನಡವಳಿಕೆ, ಆತ್ಮವಿಶ್ವಾಶ ಬೆಳೆಸಿಕೊಂಡಲ್ಲಿ ಸುಂದರ ವ್ಯಕ್ತಿಯಾಗಲು ಸಾಧ್ಯ.
•    ವಯಸ್ಸಾಗುವಿಕೆ ಪ್ರತಿಯೊಬ್ಬರಿಗೂ ಅನಿವಾರ್ಯ. ಅದನ್ನು ಬಂದಾಗ ಸ್ವೀಕರಿಸಿ ಜೀವನ ಶೈಲಿಯಲ್ಲಿ ಸೂಕ್ತ ಬದಲಾವಣೆ ಅನುಸರಿಸಿ ಸಂತೋಷ ಮತ್ತು ನೆಮ್ಮದಿಯ ಜೀವನ ನಡೆಸಬೇಕು.
•    ಮೊಬೈಲ್ ಬಳಸುವುದನ್ನು ಮಿತಿಗೊಳಿಸಿಕೊಳ್ಳೋಣ. ಮಕ್ಕಳನ್ನು ಮೊಬೈಲ್‌ನಿಂದ ದೂರವಿರಿಸೋಣ.
•    ತಿಂಗಳ ಬಜೆಟ್‌ನಲ್ಲಿ ಕನಿಷ್ಟ 300 ರೂ.ಗಳ ಪುಸ್ತಕ ಖರೀದಿಸೋಣ.
•    ತಿಂಗಳಿಗೊಮ್ಮೆ ಒಂದು ಪುಸ್ತಕದ ಬಗ್ಗೆ ಕುಟುಂಬದ ಎಲ್ಲರೂ ಕುಳಿತು ಚರ್ಚಿಸೋಣ.
•    ಮಕ್ಕಳಿಗೆ ದಿನಕ್ಕೊಂದು ಕತೆ ಹೇಳೋಣ.
•    ವರುಷಕ್ಕೊಮ್ಮೆ ಆರೋಗ್ಯದ ತಪಾಸಣೆ ಮಾಡಿಸಿಕೊಳ್ಳೋಣ.
•    ಅನಗತ್ಯ ವಸ್ತುಗಳ ಖರೀದಿಯನ್ನು ನಿಲ್ಲಿಸೋಣ.
•    ಮನೆಯಲ್ಲಿ ಒಳಾಂಗಣ ಗಿಡಗಳನ್ನು ಬೆಳೆಸೋಣ.
•    ಮನೆಯ ಹಿತ್ತಲಲ್ಲಿ ಔಷಧೀಯ ಗಿಡಗಳನ್ನು ಬೆಳೆಸೋಣ ಮತ್ತು ಬಳಸೋಣ.
•    ಪರಿಸರ ಮಾಲಿನ್ಯ ತಗ್ಗಿಸಲು ಪ್ಲಾಸ್ಟಿಕ್ ಬಳಕೆ ಮಿತಿಗೊಳಿಸಿಕೊಳ್ಳೋಣ.
•    ಪರಿಸರ ಪ್ರಜ್ಞೆ ಮತ್ತು ಕನ್ನಡ ಪ್ರಜ್ಞೆ ಬೆಳೆಸಿಕೊಳ್ಳೋಣ.
•    ನೋವುನಿವಾರಕ ಮಾತ್ರೆಗಳ ಸೇವನೆ ಮಿತಿಗೊಳಿಸಿಕೊಳ್ಳೋಣ.
ನಾವೂ ಆರೋಗ್ಯವಾಗಿದ್ದು, ಕುಟುಂಬದವರ ಆರೋಗ್ಯ ರಕ್ಷಣೆಯ ಕಡೆಗೆ ಗಮನಹರಿಸಿ, ಪರಸ್ಪರ ಪ್ರೀತಿ, ಗೌರವವನ್ನು ನೀಡುತ್ತ, ಪಡೆಯುತ್ತ ಎಲ್ಲರೊಂದಿಗೆ ಸ್ನೇಹ ಸೌಹಾರ್ದತೆಯಿಂದ ಕೂಡಿ ಬಾಳೋಣ.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com