ವಿಶ್ವಕಪ್ ಸೋಲು; ಬೆನ್ ಸ್ಟೋಕ್ಸ್ ಗೆ ನಿಂದಿಸಿದ ರೇಡಿಯೋ ಜಾಕಿಗಳ ಅಮಾನತು

ಟಿ20 ವಿಶ್ವಕಪ್ ನಲ್ಲಿ ಕೊನೆಯ ಓವರ್ ನಲ್ಲಿ ನಾಲ್ಕು ಸಿಕ್ಸರ್ ನೀಡಿ ಇಂಗ್ಲೆಂಡ್ ಸೋಲಿಗೆ ಕಾರಣ..
ಫೈನಲ್ ನಲ್ಲಿ 4 ಸಿಕ್ಸರ್ ನೀಡಿ ಇಂಗ್ಲೆಂಡ್ ಸೋಲಿಗೆ ಕಾರಣರಾದ ಬೆನ್ ಸ್ಟೋಕ್ಸ್ (ಸಂಗ್ರಹ ಚಿತ್ರ)
ಫೈನಲ್ ನಲ್ಲಿ 4 ಸಿಕ್ಸರ್ ನೀಡಿ ಇಂಗ್ಲೆಂಡ್ ಸೋಲಿಗೆ ಕಾರಣರಾದ ಬೆನ್ ಸ್ಟೋಕ್ಸ್ (ಸಂಗ್ರಹ ಚಿತ್ರ)

ವೆಲ್ಲಿಂಗ್ಟನ್: ಟಿ20 ವಿಶ್ವಕಪ್ ನಲ್ಲಿ ಕೊನೆಯ ಓವರ್ ನಲ್ಲಿ ನಾಲ್ಕು ಸಿಕ್ಸರ್ ನೀಡಿ ಇಂಗ್ಲೆಂಡ್ ಸೋಲಿಗೆ ಕಾರಣರಾದ ಬೆನ್ ಸ್ಟೋಕ್ಸ್ ಅವರನ್ನು ನಿಂದಿಸಿದ ನ್ಯೂಜಿಲೆಂಡ್ ನ ಇಬ್ಬರು ರೇಡಿಯೋ  ಜಾಕಿಗಳನ್ನು ಅಮಾನತು ಮಾಡಲಾಗಿದೆ.

ಮಳೆ ನಿಂತರೂ ಮರದ ಹನಿ ನಿಲ್ಲಲಿಲ್ಲ ಎನ್ನುವ ಹಾಗೆ ವಿಶ್ವಕಪ್ ಟೂರ್ನಿ ಮುಕ್ತಾಯಗೊಂಡು ವಾರಗಳ ಕಳೆದರೂ ಅದರ ಬಗೆಗಿನ ಚರ್ಚೆಗಳು ಮಾತ್ರ ಇನ್ನೂ ನಿಂತಿಲ್ಲ. ಇಂತಹ ಒಂದು ಚರ್ಚೆ  ಇದೀಗ ನೂಜಿಲೆಂಡ್ ನ ಇಬ್ಬರು ರೇಡಿಯೋ ಜಾಕಿಗಳ ಕೆಲಸಕ್ಕೆ ಕುತ್ತುತಂದಿದ್ದು, ಪ್ರಸ್ತುತ ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.

ನ್ಯೂಜಿಲೆಂಡ್ ನ ಪ್ರತಿಷ್ಠಿತ ಹೌರಾಕಿ ರೇಡಿಯೋ ಸಂಸ್ಥೆಯ ಇಬ್ಬರು ಜಾಕಿಗಳು ಇಂಗ್ಲೆಂಡ್ ಆಟಗಾರ ಬೆನ್ ಸ್ಟೋಕ್ಸ್ ಅವರನ್ನು ನಿಂದಿಸಿದ ಮತ್ತು ಪ್ರಕರಣದಲ್ಲಿ ಬೆನ್ ಸ್ಟೋಕ್ಸ್ ಅವರ ತಾಯಿ  ದೆಬೋರಾ ಸ್ಟೋಕ್ಸ್ ಅವರ ಪ್ರತಿಕ್ರಿಯೆಯನ್ನು ಅನುಮತಿ ಇಲ್ಲದೆ ಪ್ರಸಾರ ಮಾಡಿದ ಆರೋಪದ ಮೇಲೆ ಅಮಾನತುಗೊಂಡಿದ್ದಾರೆ. ಹೌರಾಕಿ ರೇಡಿಯೋ ಸಂಸ್ಥೆಯ ಜೆರಮಿ ವೆಲ್ಸ್ ಹಾಗೂ  ಮ್ಯಾಟ್ ಹೀತ್ ಎಂಬ ರೇಡಿಯೋ ಜಾಕಿಗಳು ಅಮಾನತುಗೊಂಡಿದ್ದು, ಟಿ20 ವಿಶ್ವಕಪ್ ಫೈನಲ್ ನಲ್ಲಿ ಇಂಗ್ಲೆಂಡ್ ಸೋಲಿಗೆ ಕಾರಣವಾದ ಅಂಶಗಳ ಕುರಿತು ಈ ಇಬ್ಬರು ಜಾಕಿಗಳು  ಚರ್ಚಿಸುತ್ತಿದ್ದರು.

ಈ ವೇಳೆ ಬೆನ್ ಸ್ಟೋಕ್ಸ್ ಕೊನೆಯ ಓವರ್ ಅನ್ನು ಪ್ರಸ್ತಾಪಿಸುತ್ತಿದ್ದ ವೇಳೆ ಸ್ಟೋಕ್ಸ್ ಅವರನ್ನು ಜಾಕಿಗಳು ನಿಂದಿಸಿದ್ದಾರೆ. ಈ ವೇಳೆ ರೇಡಿಯೋ ಆಲಿಸುತ್ತಿದ್ದ ಬೆನ್ ಸ್ಟೋಕ್ಸ್ ತಾಯಿ ದೆಬೋರಾ  ಸ್ಟೋಕ್ಸ್ ಜಾಕಿಗಳ ಬೈಗುಳಗಳನ್ನು ಕೇಳಿಸಿಕೊಂಡು ಕೂಡಲೇ ರೇಡಿಯೋ ಸಂಸ್ಥೆಗೆ ಕರೆ ಮಾಡಿ ತಮ್ಮ ಮಗನನನ್ನು ನಿಂದಿಸದಂತೆ ಮನವಿ ಮಾಡಿದ್ದಾರೆ. ಬಳಿಕ ದೆಬೋರಾ ಸ್ಟೋಕ್ಸ್ ರನ್ನು ಈ  ಬಗ್ಗೆ ಪ್ರತಿಕ್ರಿಸುವಂತೆ ಪುಸಲಾಯಿಸಿದ ರೇಡಿಯೋ ಜಾಕಿಗಳು ಅವರ ಯಾವೇದೇ ಹೇಳಿಕಗಳನ್ನು ಪ್ರಸಾರ ಮಾಡುವುದಿಲ್ಲ ಎಂದು ಆಶ್ವಾಸನೆ ನೀಡಿ ಅವರಿಂದ ಪ್ರತಿಕ್ರಿಯೆ ಪಡೆದಿದ್ದಾರೆ. ಆದರೆ  ಬಳಿಕ ಮಾತುತಪ್ಪಿದ ಜಾಕಿಗಳು ದೆಬೋರಾ ಸ್ಟೋಕ್ಸ್ ಅವರ ಅನುಮತಿ ಇಲ್ಲದೇ ಅವರ ಅಷ್ಟೂ ಪ್ರತಿಕ್ರಿಯೆಗಳನ್ನು ಪ್ರಸಾರ ಮಾಡಿದ್ದಾರೆ. ಇದೀಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ  ರೇಡಿಯೋ ಸಂಸ್ಥೆ ಈ ಇಬ್ಬರನ್ನು ಅಮಾನತು ಮಾಡಿದೆ.

ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ ದೆಬೋರಾ ಸ್ಟೋಕ್ಸ್
ಇನ್ನು ತಮ್ಮ ಅನುಮತಿ ಇಲ್ಲದೇ ತಮ್ಮ ಅಭಿಪ್ರಾಯವನ್ನು ಪ್ರಸಾರ ಮಾಡಿದ ಹೌರಾಕಿ ರೇಡಿಯೋ ಜಾಕಿಗಳ ವಿರುದ್ಧ ಬೆನ್ಸ್ ಸ್ಟೋಕ್ಸ್ ತಾಯಿ ದೆಬೋರಾ ಸ್ಟೋಕ್ಸ್ ಕಾನೂನು ಕ್ರಮಕ್ಕೆ  ಮುಂದಾಗಿದ್ದು, ಈ ಕುರಿತು ರೇಡಿಯೋ ಸಂಸ್ಥೆಗೆ ದೂರು ನೀಡಿದ್ದಾರೆ. ದೆಬೋರಾ ಸ್ಟೋಕ್ಸ್ ಅವರ ದೂರಿನನ್ವಯ ಹೌರಾಕಿ ರೇಡಿಯೋ ಸಂಸ್ಥೆ ಇಬ್ಬರೂ ಜಾಕಿಗಳನ್ನು ಕೂಡಲೇ ಅಮಾನತು  ಮಾಡಿದೆ. ಬೆನ್ ಸ್ಟೋಕ್ಸ್ ಕುಟುಂಬ ಮೂಲತಃ ನ್ಯೂಜಿಲೆಂಡ್ ಮೂಲದವರಾಗಿದ್ದು, ಬೆನ್ ಸ್ಟೋಕ್ಸ್ ಕೂಡ ನ್ಯೂಜಿಲೆಂಡ್ ನಲ್ಲೇ ಹುಟ್ಟಿದವರಾಗಿದ್ದಾರೆ. ಬಳಿಕ ಕಾರಣಾಂತರಗಳಿಂದ ಇಂಗ್ಲೆಂಡ್ ಗೆ  ತೆರಳಿ ನೆಲೆ ನಿಂತಿದ್ದು, ಈಗಲೂ ಅವರ ಕುಟುಂಬದ ಬಹುತೇಕ ಸದಸ್ಯರೂ ನ್ಯೂಜಿಲೆಂಡ್ ನಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com