
ನವದೆಹಲಿ: ಇಂಡಿಯನ್ ಪ್ರಿಮಿಯರ್ ಲೀಗ್ 9ನೇ ಆವೃತ್ತಿಯ ಪಂದ್ಯಗಳಲ್ಲಿ ಹಿಂದಿ ಚಲನಚಿತ್ರ ಗೀತೆಗಳನ್ನು ಹಾಕಬೇಡಿ ಎಂದು ದೆಹಲಿ ಹೈಕೋರ್ಟ್ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಹಾಗೂ ಡಿಎನ್‍ಎ ಎಂಟರ್ಟೈನಮೆಂಟ್ ಸನ್ ನೆಟ್ ವರ್ಕ್ಸ್ ಆದೇಶಿಸಿದೆ.
ಐಪಿಎಲ್‍ನ ಡೆಲ್ಲಿ ಡೇರ್‍ಡೆವಿಲ್ಸ್ ಫ್ರಾಂಚೈಸಿ ಹೊರತುಪಡಿಸಿ ಇತರ ತ೦ಡಗಳು ಮ್ಯೆದಾನದಲ್ಲಿ ಹಿ೦ದಿ ಚಲನಚಿತ್ರ ಗೀತೆಗಳನ್ನು ಹಾಕುವ೦ತಿಲ್ಲ ಎ೦ದು ಹ್ಯೆಕೋಟ್‍೯ ಶನಿವಾರ ಆದೇಶಿಸಿದೆ.
ಕ್ರೀಡಾಂಗಣದಲ್ಲಿ ಹಿಂದಿ ಚಲನಚಿತ್ರ ಗೀತೆಗಳನ್ನು ಪ್ರಸಾರ ಮಾಡಬೇಕಾದಲ್ಲಿ ಗೌರವ ಧನ ನೀಡಬೇಕು ಎಂದು ಭಾರತೀಯ ಗಾಯಕರ ಹಕ್ಕುಗಳ ಸಂಸ್ಧೆ(ಐಎಸ್ಆರ್ಎ) ಕೋರ್ಟ್ ಮೆಟ್ಟಿಲೇರಿತ್ತು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಮುಂದಿನ ವಿಚಾರಣೆವರೆಗೂ ಉಳಿದ ಫ್ರಾಂಚೈಸಿಗಳು ಸ್ಟೇಡಿಯಂನಲ್ಲಿ ಹಿಂದಿ ಗೀತೆಗಳನ್ನು ಹಾಕಬಾರದು ಎಂದು ಲೀಗ್ ನ
ಇವೆ೦ಟ್ ಮ್ಯಾನೇಜ್ ಮೆ೦ಟ್ ಕ೦ಪನಿ ಡಿಎನ್‍ಎಗೆ ತಿಳಿಸಿದೆ.
ಏಪ್ರಿಲ್ 19 ರ೦ದು ಮು೦ದಿನ ವಿಚಾರಣೆ ನಡೆಯಲಿದ್ದು, ಬಿಸಿಸಿಐಗೆ ನೋಟಿಸ್ ಕೂಡ ನೀಡಲಾಗಿದೆ. ಈ ಗೀತೆಗಳು ಗಾಯಕನ ಹಕ್ಕುಗಳಾಗಿದ್ದು, ಬಿಸಿಸಿಐ ಅಥವಾ ಇವೆ೦ಟ್ ಮ್ಯಾನೇಜ್‍ಮೆ೦ಟ್ ಕ೦ಪನಿಯಾಗಲಿ ಈವರೆಗೂ ಗೌರವ ಧನ ನೀಡಿಲ್ಲ ಎ೦ದು ಐಎಸ್‍ಆರ್‍ಎ ಪರ ವಕೀಲ ಪ್ರವೀಣ್ ಆನ೦ದ್ ತಿಳಿಸಿದ್ದಾರೆ.
Advertisement