• Tag results for ಬಿಸಿಸಿಐ

ಕೊರೋನಾಗೆ ಸೆಡ್ಡು, ನಿಗದಿಪಡಿಸಿದ ದಿನಾಂಕದಂತೆ ನಡೆಯಲಿದೆ ಟಿ20 ವಿಶ್ವಕಪ್‌: ಐಸಿಸಿ ಸ್ಪಷ್ಟನೆ

ಇದೇ ವರ್ಷ ಅಕ್ಟೋಬರ್‌ನಲ್ಲಿ ನಿಗದಿಪಡಿಸಿರುವಂತೆ 2020ರ ಐಸಿಸಿ ಟಿ20 ವಿಶ್ವಕಪ್‌ ಜರುಗಲಿದ್ದು, ಯಾವುದೇ ಬದಲಾವಣೆ ಇಲ್ಲವೆಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಸ್ಪಷ್ಟಪಡಿಸಿದೆ. 

published on : 6th April 2020

ಈ ದಿನ 28 ವರ್ಷಗಳ ಬಳಿಕ 2ನೇ ಬಾರಿಗೆ ಭಾರತ ವಿಶ್ವಕಪ್ ಗೆದ್ದ ಸುದಿನ

ಧೋನಿ ಅವರ ಫಿನಿಶಿಂಗ್ ಸ್ಟೈಲ್ ಮತ್ತು ಕಿಕ್ಕಿರಿದು ತುಂಬಿದ ಜನ ಸಾಗರದ ಮುಂದೆ ಟೀಮ್ ಇಂಡಿಯಾ 28 ವರ್ಷಗಳ ನಂತರ ಐಸಿಸಿ ಏಕದಿನ ವಿಶ್ವ ಕಪ್ ಅನ್ನು ಮುಡಿಗೇರಿಸಿಕೊಂಡಿತು.

published on : 2nd April 2020

ಕೋವಿಡ್‌-19 ವಿರುದ್ಧ ಸಮರ: 1 ಕೋಟಿ ರೂ. ದೇಣಿಗೆ ನೀಡಿದ ಕೆಎಸ್‌ಸಿಎ

ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ 51 ಕೋಟಿ ನೀಡಿದ ಬೆನ್ನಲ್ಲೆ ಇಂದು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ತಲಾ 50 ಲಕ್ಷ ರೂ. ಸೇರಿದಂತೆ ಒಟ್ಟು ಒಂದು ಕೋಟಿ ರೂ.ಗಳ ದೇಣಿಗೆ ನೀಡಿದೆ. 

published on : 30th March 2020

ಮಹಾಮಾರಿ ಕೊರೋನಾ: ಪ್ರಧಾನಮಂತ್ರಿ ಪರಿಹಾರ ನಿಧಿಗೆ 51 ಕೋಟಿ ರೂ. ನೀಡಿದ ಬಿಸಿಸಿಐ

ಕೊರೊನಾ ವಿರುದ್ಧದ ದೇಶದ ಹೋರಾಟಕ್ಕೆ ಸಹಾಯ ಮಾಡಲು ಪ್ರಧಾನ ಮಂತ್ರಿ ತುರ್ತು ಪರಿಸ್ಥಿತಿಗಳ ನಿಧಿಗೆ (ಪಿಎಂ-ಕೇರ್ಸ್ ಫಂಡ್) 51 ಕೋಟಿ ರೂ.ಗಳ ಕೊಡುಗೆಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶನಿವಾರ ಪ್ರಕಟಿಸಿದೆ.

published on : 29th March 2020

2021ರಲ್ಲಾದರೂ ಮಹಿಳಾ ಐಪಿಎಲ್‌ ಆಯೋಜಿಸಿ: ಬಿಸಿಸಿಐಗೆ ಮಿಥಾಲಿ ರಾಜ್ ಆಗ್ರಹ

ಜಗತ್ತಿನಲ್ಲೇ ಕೊರೋನಾ ವೈರಸ್‌ ಭೀತಿ ಆವರಿಸಿರುವ ಈ ಗಳಿಗೆಯಲ್ಲಿ ಬಿಸಿಸಿಐ ಇಂಡಿಯನ್ ಪ್ರೀಮಿಯರ್‌ ಲೀಗ್‌ ನ 13ನೇ ಆವೃತ್ತಿಯ ಆಯೋಜನೆಗೆ ಇನ್ನಿಲ್ಲದ ಕರಸತ್ತು ಮಾಡುತ್ತಿದೆ.

published on : 26th March 2020

ಪಶ್ಚಿಮ ಬಂಗಾಳಕ್ಕೆ 50 ಲಕ್ಷ ರೂ. ಮೌಲ್ಯದ ಅಕ್ಕಿ ನೀಡಲು ಗಂಗೂಲಿ ಘೋಷಣೆ

ಮಾರಕ ಕೊರೋನಾವೈರಸ್ ವಿರುದ್ಧ ದೇಶಾದ್ಯಂತ ಸಮರ ಮುಂದುವರೆದಿರುವಂತೆ ಪಶ್ಚಿಮ ಬಂಗಾಳದ ಅಗತ್ಯವಿರುವ ಜನರಿಗೆ 50 ಲಕ್ಷ ಮೌಲ್ಯದ ಅಕ್ಕಿ ನೀಡುವುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

published on : 26th March 2020

ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಬಿಸಿಸಿಐ ಮಾಸ್ಟರ್ ಪ್ಲಾನ್

ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ(ಬಿಸಿಸಿಐ) ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ನಿರ್ಧರಿಸಿದ್ದು, ಇನ್ನು ಮುಂದೆ ಹಿರಿಯ ಹಾಗೂ ಜೂನಿಯರ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರಿಗೆ ಮಾತ್ರ ಐಶಾರಾಮಿ ಪ್ರಯಾಣಕ್ಕೆ ಅವಕಾಶ ನೀಡಲಿದೆ.

published on : 18th March 2020

ಕೋವಿಡ್ -19: ಜುಲೈ-ಸೆಪ್ಟೆಂಬರ್ ನಲ್ಲಿ ಐಪಿಎಲ್ -13 ನಡೆಸಲು ಬಿಸಿಸಿಐ ಚಿಂತನೆ

ಕೊರೋನಾ ವೈರಸ್ ಭೀತಿಯಿಂದಾಗಿ ರದ್ದಾಗುವ ಭೀತಿಯಲ್ಲಿರುವ ಐಪಿಎಲ್ 2020 ಟೂರ್ನಿಯನ್ನು ಜುಲೈ-ಸೆಪ್ಟೆಂಬರ್ ತಿಂಗಳಿಗೆ ಮುಂದೂಡಿಕೆ ಮಾಡುವ ಸಾಧ್ಯತೆ ಇದೆ.

published on : 18th March 2020

ನಾಯಕ ವಿರಾಟ್ ಬೆನ್ನಿಗೆ ನಿಂತ ಮದನ್ ಲಾಲ್

ಭಾರತ ತಂಡದ ಮಾಜಿ ಆಲ್ ರೌಂಡರ್ ಮತ್ತು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕ್ರಿಕೆಟ್ ಸಲಹಾ ಸಮಿತಿಯ ಮುಖ್ಯಸ್ಥರಾದ ಮದಲ್ ಲಾಲ್ ಅವರು ನಾಯಕ ವಿರಾಟ್ ಕೊಹ್ಲಿಯವರ ಆಕ್ರಮಣಕಾರಿ ನಡವಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ

published on : 17th March 2020

ಮಹಾಮಾರಿ ಕೊರೋನಾ ಭೀತಿ: ಬಿಸಿಸಿಐಗೂ ಬೀಗ

ಭಾರತದಲ್ಲಿ ಕೊರೋನಾ ವೈರಸ್ ಸೋಂಕು ಹರಡುವಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ಬೀಗ ಹಾಕಲಾಗಿದೆ.

published on : 16th March 2020

ಕಾಮೆಂಟರಿ ಪ್ಯಾನೆಲ್‍ನಿಂದ ತಮ್ಮ ಹೆಸರು ಕೈಬಿಟ್ಟ ಬಿಸಿಸಿಐ, ಮಂಜ್ರೇಕರ್ ಹೇಳಿದ್ದೇನು?

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ ಇತ್ತೀಚೆಗೆ ತನ್ನ ಕಾಮೆಂಟರಿ ಪ್ಯಾನೆಲ್‍ನಿಂದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅವರ ಹೆಸರನ್ನು ಕೈ ಬಿಟ್ಟಿತ್ತು, ಇದೀಗ ಬಿಸಿಸಿಐನ ಈ ನಡೆ ಕುರಿತು ಸಂಜಯ್ ಮಂಜ್ರೇಕರ್ ಪ್ರತಿಕ್ರಿಯೆ ನೀಡಿದ್ದಾರೆ.

published on : 16th March 2020

ಕೊರೋನಾ ಎಫೆಕ್ಟ್: ಇರಾನಿ ಕಪ್ ಸೇರಿದಂತೆ ದೇಶಿಯ ಟೂರ್ನಿಗಳಿಗೆ ಬಿಸಿಸಿಐ ಕೊಕ್

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಮುಂದೂಡಿದ ಬೆನ್ನಲ್ಲೆ ದೇಶಿಯ ಟೂರ್ನಿಗಳನ್ನು ನಡೆಸದಂತೆ ಶನಿವಾರ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧರಿಸಿದೆ.

published on : 14th March 2020

ಜಡೇಜಾರನ್ನು ಟೀಕಿಸಿದ್ದ ಸಂಜಯ್ ಮಾಂಜ್ರೇಕರ್ ಗೆ ಬಿಸಿಸಿಐನಿಂದ ಗೇಟ್ ಪಾಸ್!

ಅತ್ಯುತ್ತಮ ವಿಶ್ಲೇಷಣಾಕಾರರಾಗಿ ಗುರುತಿಸಿಕೊಂಡಿದ್ದ ಸಂಜಯ್ ಮಾಂಜ್ರೇಕರ್ ರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ದಿಢೀರ್ ಅಂತ ತಂಡದಿಂದ ಕೈಬಿಟ್ಟಿರುವುದು ಅಚ್ಚರಿ ಮೂಡಿಸಿದೆ. 

published on : 14th March 2020

ಕೊರೋನಾ ವೈರಸ್ ಭೀತಿ: ಐಪಿಎಲ್ 2020 ಟೂರ್ನಿ ಮುಂದೂಡಿಕೆ, ಟೂರ್ನಿಗೆ ದೊಡ್ಡ ಹೊಡೆತ!

ಶ್ರೀಮಂತ ಚುಟುಕು ಕ್ರಿಕೆಟ್ ಟೂರ್ನಿ ಐಪಿಎಲ್ 2020ಗೂ ಕೊರೋನಾ ವೈರಸ್ ಭೀತಿ ಎದುರಾಗಿದ್ದು ಟೂರ್ನಿಯನ್ನು ಮುಂದೂಡಲಾಗಿದೆ.

published on : 13th March 2020

ಪ್ರೇಕ್ಷಕರಿಲ್ಲದ ಮೈದಾನದಲ್ಲಿ ಐಪಿಎಲ್: ಅಂತಿಮ ನಿರ್ಧಾರ ಬಿಸಿಸಿಐನದ್ದೇ ಎಂದ ಕೇಂದ್ರ!

ಕೊರೋನಾ ವೈರಸ್ ಸೋಂಕಿನ ಭೀತಿ ಹಿನ್ನಲೆಯಲ್ಲಿ ಪ್ರೇಕ್ಷಕರಿಲ್ಲದ ಮೈದಾನದಲ್ಲಿ ಐಪಿಎಲ್ ಟೂರ್ನಿ ಆಡಿಸುವಂತೆ ಕೇಂದ್ರ ವಿದೇಶಾಂಗ ಇಲಾಖೆ ಸಲಹೆ ನೀಡಿದ್ದು, ಅಂತಿಮ ನಿರ್ಧಾರ ಬಿಸಿಸಿಐನದ್ದೇ ಎಂದು ಹೇಳಿದೆ.

published on : 12th March 2020
1 2 3 4 5 6 >