

ಕೊಲಂಬೋ: ಐಸಿಸಿ ಟಿ20 ವಿಶ್ವಕಪ್ ಟೂರ್ನಿ ನಿಮಿತ್ತ ಶ್ರೀಲಂಕಾದಲ್ಲಿರುವ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಪ್ರೇಯಸಿ ಮಹೀಕಾ ಶರ್ಮಾಗೆ ವಿಭಿನ್ನವಾಗಿ ಜನ್ಮದಿನ ಶುಭಕೋರಿದ್ದಾರೆ.
ಟಿ20 ವಿಶ್ವಕಪ್ 2026 ಟೂರ್ನಿಯ ನಡುವೆ ಹಾರ್ದಿಕ್ ಪಾಂಡ್ಯ ತಮ್ಮ ವೈಯಕ್ತಿಕ ಜೀವನದ ಕಾರಣದಿಂದಾಗಿಯೂ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದು, ಈ ಹಿಂದೆ ಬಿಸಿಸಿಐನ ಎಚ್ಚರಿಕೆಯ ಹೊರತಾಗಿಯೂ ಪ್ರೇಯಸಿಯನ್ನು ಕ್ರೀಡಾಂಗಣಕ್ಕೆ ಕರೆತಂದಿದ್ದರು. ಬಳಿಕ ಮ್ಯಾನೇಜ್ ಮೆಂಟ್ ಸೂಚನೆ ಹಿನ್ನಲೆಯಲ್ಲಿ ಅವರನ್ನು ಹೊಟೆಲ್ ನಲ್ಲಿ ಉಳಿಸಿದ್ದರು.
ಟಿ20 ವಿಶ್ವಕಪ್ ನಡೆಯುತ್ತಿರುವ ಸಂದರ್ಭದಲ್ಲೂ ಮಹಿಕಾ ಹಲವಾರು ಪಂದ್ಯಗಳಲ್ಲಿ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದರು. ಈ ಮೂಲಕ ಅವರು ಹಾರ್ದಿಕ್ ಪಾಂಡ್ಯಗೆ ಬೆಂಬಲವಾಗಿ ನಿಂತು ತಂಡದ ಜೊತೆ ಪ್ರಯಾಣಿಸುತ್ತಿದ್ದ ದೃಶ್ಯಗಳು ವೈರಲ್ ಆಗಿದ್ದವು.
ಭಾರತ-ಪಾಕಿಸ್ತಾನ ಹೈ ವೋಲ್ಟೇಜ್ ಪಂದ್ಯಕ್ಕಾಗಿ ಅವರು ಶ್ರೀಲಂಕಾಕ್ಕೆ ಸಹ ತೆರಳಿದ್ದರು. ಇದೇ ಸಂದರ್ಭದಲ್ಲಿ ಪ್ರೇಯಸಿ ಜೊತೆ ಕಳೆದ ಖಾಸಗಿ ಕ್ಷಣಗಳನ್ನು ಹಾರ್ದಿಕ್ ತಮ್ಮ ಸಾಮಾಜಿಕ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದೀಗ ಮತ್ತೆ ಹಾರ್ದಿಕ್ ಪಾಂಡ್ಯಾ ತಮ್ಮ ಪ್ರೇಯಸಿ ಮಹೀಕಾ ಶರ್ಮಾ ಜೊತೆಗಿರುವ ಫೋಟೋವೊಂದು ವ್ಯಾಪಕ ವೈರಲ್ ಆಗುತ್ತಿದೆ. ಅವರು ತಮ್ಮ ಪ್ರೇಯಸಿ ಮಹಿಕಾ ಶರ್ಮಾ ಜೊತೆ ಸಮಯ ಕಳೆದಿರುವ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸ್ವಿಮ್ಮಿಂಗ್ ಪೂಲ್‌ನಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿರುವ ಚಿತ್ರಗಳು ಇದೀಗ ವ್ಯಾಪಕ ವೈರಲ್ ಆಗುತ್ತಿವೆ.
ಮಹಿಕಾ ಶರ್ಮಾ ಇಂದು ತಮ್ಮ 25ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದು, ಈ ಹಿನ್ನೆಲೆ ಹಾರ್ದಿಕ್ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಫೋಟೋ ಹಂಚಿಕೊಂಡು ಅವರಿಗೆ ವಿಶೇಷವಾಗಿ ಶುಭಾಶಯ ಕೋರಿದ್ದಾರೆ. ಸ್ಮಿಮ್ಮಿಂಗ್ ಫೂಲ್(ಈಜುಕೊಳ)ನಲ್ಲಿ ಇಬ್ಬರು ಪರಸ್ಪರ ತಬ್ಬಿಕೊಂಡು ಎಂಜಾಯ್ ಮಾಡುತ್ತಿರುವ ಫೋಟೋ ಹಾಕಿರುವ ಹಾರ್ದಿಕ್, 'ಹ್ಯಾಪಿ ಬರ್ತ್‌ಡೇ ಮೈ ಪ್ರಿನ್ಸೆಸ್" ಎಂದು ಬರೆಯುವ ಮೂಲಕ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದಾರೆ.
ಯಾರು ಈ ಮಹೀಕಾ ಶರ್ಮಾ?
ಮಹಿಕಾ ಶರ್ಮಾ ಮಾಡೆಲ್, ನಟಿ ಹಾಗೂ ಫಿಟ್ನೆಸ್ ಕಂಟೆಂಟ್ ಕ್ರಿಯೇಟರ್ ಆಗಿದ್ದಾರೆ. ದೆಹಲಿಯಲ್ಲಿ ಜನಿಸಿದ ಅವರು ಅರ್ಥಶಾಸ್ತ್ರ ಮತ್ತು ಹಣಕಾಸು ವಿಷಯದಲ್ಲಿ ಪದವಿ ಪಡೆದಿದ್ದಾರೆ.
Advertisement