BCCI ಆಟಗಾರರ ಒಪ್ಪಂದ: ಇಶಾನ್ ಕಿಶನ್, ಮಹಮದ್ ಶಮಿ, ಶ್ರೇಯಾಂಕ ಪಾಟೀಲ್ ಸೇರಿ 8 ಮಂದಿಗೆ ಗೇಟ್ ಪಾಸ್!

ಬಿಸಿಸಿಐ ಹೊಸ ವೇತನ ರಚನೆಯಲ್ಲಿ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಿ ಪಟ್ಟಿಯನ್ನು ಘೋಷಣೆ ಮಾಡಿದೆ. ಅದರ ಅಡಿಯಲ್ಲಿ ಈ ಹಿಂದೆ ಇದ್ದ ಗ್ರೇಡ್ ಎ ವರ್ಗವನ್ನು ತೆಗೆದುಹಾಕಲಾಗಿದೆ.
BCCIs Central Contract
ಬಿಸಿಸಿಐ ಆಟಗಾರರ ಒಪ್ಪಂದ
Updated on

ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಆಟಗಾರರ ವಾರ್ಷಿಕ ಒಪ್ಪಂದದಲ್ಲಿ ಮೇಜರ್ ಸರ್ಜರಿ ಮಾಡಿದ್ದು, 8 ಮಂದಿ ಆಟಗಾರರಿಗೆ ಒಪ್ಪಂದದಿಂದ ಗೇಟ್ ಪಾಸ್ ನೀಡಲಾಗಿದೆ.

ಬಿಸಿಸಿಐ ಪರಿಷ್ಕೃತ ಕೇಂದ್ರ ಒಪ್ಪಂದ ವ್ಯವಸ್ಥೆ ಪರಿಚಯಿಸಿದ್ದು, ಬಿಸಿಸಿಐ ಹೊಸ ವೇತನ ರಚನೆಯಲ್ಲಿ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಿ ಪಟ್ಟಿಯನ್ನು ಘೋಷಣೆ ಮಾಡಿದೆ. ಅದರ ಅಡಿಯಲ್ಲಿ ಈ ಹಿಂದೆ ಇದ್ದ ಗ್ರೇಡ್ ಎ ವರ್ಗವನ್ನು ತೆಗೆದುಹಾಕಲಾಗಿದೆ.

ನೂತನ ಒಪ್ಪಂದದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದ್ದು, ಈ ಹಿಂದೆ ಎಪ್ಲಸ್ ವರ್ಗದಲ್ಲಿ ಇದ್ದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಬಿ ವರ್ಗಕ್ಕೆ ಡಿಮೋಷನ್ ಮಾಡಲಾಗಿದೆ.

BCCIs Central Contract
A+ ಗೆ ಕೊಕ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಹಿಂಬಡ್ತಿ: BCCI ಆಟಗಾರರ ವಾರ್ಷಿಕ ಒಪ್ಪಂದ ಘೋಷಣೆ!

6 ಆಟಗಾರರಿಗೆ ಹಿಂಬಡ್ತಿ

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಪ್ರಸ್ತುತ ಏಕದಿನ ಮಾದರಿಯಲ್ಲಿ ಮಾತ್ರ ಆಡುತ್ತಿರುವುದರಿಂದ ಇವರಿಬ್ಬರಿಗೆ ಎ+ ಗ್ರೇಡ್‌ನಿಂದ ಬಿ ಗ್ರೇಡ್‌ಗೆ ಹಿಂಬಡ್ತಿ ನೀಡಲಾಗಿದೆ.

ಅದೇ ರೀತಿ, ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ಮತ್ತು ರಿಷಭ್ ಪಂತ್ ಅವರನ್ನು ಸಹ ಎ ಗ್ರೇಡ್‌ನಿಂದ ಬಿ ಗ್ರೇಡ್‌ಗೆ ಹಿಂಬಡ್ತಿ ನೀಡಲಾಗಿದೆ.

ಇದರರ್ಥ ಈ ಬಾರಿ ಈ ಆರು ಆಟಗಾರರ ವೇತನದಲ್ಲಿ ಇಳಿಕೆ ಕಂಡುಬರಲಿದೆ. ಈ ಪ್ರಕಾರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ವಾರ್ಷಿಕವಾಗಿ ತಲಾ 4 ಕೋಟಿ ರೂಗಳನ್ನು ಕಳೆದುಕೊಂಡರೆ, ಉಳಿದ ನಾಲ್ವರು ಆಟಗಾರರು ತಲಾ 2 ಕೋಟಿ ರೂ. ಕಡಿಮೆ ವೇತನ ಪಡೆಯಲಿದ್ದಾರೆ ಎಂದು ಹೇಳಲಾಗಿದೆ.

ಐವರಿಗೆ ಗೇಟ್​ಪಾಸ್

ಅಂತೆಯೇ ಈ ಒಪ್ಪಂದದಲ್ಲಿ ಕೆಲವು ಆಟಗಾರರನ್ನು ಕೇಂದ್ರ ಒಪ್ಪಂದ ಪಟ್ಟಿಯಿಂದ ಬಿಸಿಸಿಐ ಕೈಬಿಟ್ಟಿದೆ. ಪ್ರಸ್ತುತ ಭಾರತ ಟಿ20 ವಿಶ್ವಕಪ್ ತಂಡದ ಭಾಗವಾಗಿರುವ ಇಶಾನ್ ಕಿಶನ್ ಅವರನ್ನು ಕೇಂದ್ರ ಒಪ್ಪಂದದಿಂದ ಕೈಬಿಡಲಾಗಿದೆ.

ಇದಕ್ಕೆ ಕಾರಣ, ಕಳೆದ ಆವೃತ್ತಿಯಲ್ಲಿ ಕಿಶನ್ ತಂಡದ ಭಾಗವಾಗಿರಲಿಲ್ಲ. ಉಳಿದಂತೆ ಮೊಹಮ್ಮದ್ ಶಮಿ, ಸರ್ಫರಾಜ್ ಖಾನ್, ರಜತ್ ಪಾಟಿದಾರ್ ಮತ್ತು ಮುಖೇಶ್ ಕುಮಾರ್ ಕೂಡ ಈ ಬಾರಿ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.

ಫಾರ್ಮ್, ಲಭ್ಯತೆ ಮತ್ತು ತಂಡದಲ್ಲಿನ ಪಾತ್ರವನ್ನು ಆಧರಿಸಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದ್ದು, ಈ ನಾಲ್ವರು ಆಟಗಾರರು ಸಹ ಬಹಳ ಸಮಯದಿಂದ ಟೀಂ ಇಂಡಿಯಾ ಪರ ಯಾವುದೇ ಪಂದ್ಯವನ್ನು ಆಡಿಲ್ಲ.

ಕನ್ನಡತಿ ಶ್ರೇಯಾಂಕಗೂ ಸ್ಥಾನವಿಲ್ಲ

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಹೊಸ ಕೇಂದ್ರ ಒಪ್ಪಂದ ಪಟ್ಟಿಗೆ ಸೇರ್ಪಡೆಗೊಂಡ ಆಟಗಾರ್ತಿಯರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ.

ಕಳೆದ ಆವೃತ್ತಿಯಲ್ಲಿ ಕೇವಲ 16 ಮಹಿಳಾ ಆಟಗಾರ್ತಿಯರು ಕೇಂದ್ರ ಒಪ್ಪಂದದಲ್ಲಿ ಸ್ಥಾನ ಪಡೆದಿದ್ದರೆ, ಈ ಆವೃತ್ತಿಯಲ್ಲಿ ಒಟ್ಟು 21 ಮಹಿಳಾ ಆಟಗಾರ್ತಿಯರಿಗೆ ಕೇಂದ್ರ ಒಪ್ಪಂದ ನೀಡಲಾಗಿದೆ.

ಆದಾಗ್ಯೂ, ಪೂಜಾ ವಸ್ತ್ರಕರ್, ಕನ್ನಡತಿ ಶ್ರೇಯಾಂಕ ಪಾಟೀಲ್ ಮತ್ತು ಟೈಟಾಸ್ ಸಾಧು ಕೇಂದ್ರ ಒಪ್ಪಂದದಿಂದ ವಂಚಿತರಾಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಶ್ರೇಯಾಂಕ ಭಾರತ ತಂಡಕ್ಕೆ ಆಡಿಲ್ಲ. ಇದೂ ಕೂಡ ಶ್ರೇಯಾಂಕಾ ಒಪ್ಪಂದದ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com