A+ ಗೆ ಕೊಕ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಹಿಂಬಡ್ತಿ: BCCI ಆಟಗಾರರ ವಾರ್ಷಿಕ ಒಪ್ಪಂದ ಘೋಷಣೆ!

ಬಿಸಿಸಿಐ ಪರಿಷ್ಕೃತ ಕೇಂದ್ರ ಒಪ್ಪಂದ ವ್ಯವಸ್ಥೆ ಪರಿಚಯಿಸಿದ್ದು, ಬಿಸಿಸಿಐ ಹೊಸ ವೇತನ ರಚನೆಯಲ್ಲಿ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಿ ಪಟ್ಟಿಯನ್ನು ಘೋಷಣೆ ಮಾಡಿದೆ.
Virat Kohli- Rohit Sharma
ಬಿಸಿಸಿಐ ವಾರ್ಷಿಕ ಒಪ್ಪಂದ
Updated on

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಆಟಗಾರರು ಮತ್ತು ಆಟಗಾರ್ತಿಯರ ವಾರ್ಷಿಕ ಒಪ್ಪಂದದಲ್ಲಿ ಮೇಜರ್ ಸರ್ಜರಿ ಮಾಡಿದ್ದು, ಪುರುಷರ ಎ+ ವರ್ಗವನ್ನು ಕೈ ಬಿಡಲಾಗಿದೆ.

ಬಿಸಿಸಿಐ ಪರಿಷ್ಕೃತ ಕೇಂದ್ರ ಒಪ್ಪಂದ ವ್ಯವಸ್ಥೆ ಪರಿಚಯಿಸಿದ್ದು, ಹೊಸ ವೇತನ ರಚನೆಯಲ್ಲಿ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಿ ಪಟ್ಟಿಯನ್ನು ಘೋಷಣೆ ಮಾಡಿದೆ. ಅದರ ಅಡಿಯಲ್ಲಿ ಈ ಹಿಂದೆ ಇದ್ದ ಗ್ರೇಡ್ ಎ+ ವರ್ಗವನ್ನು ತೆಗೆದುಹಾಕಲಾಗಿದೆ.

ಅದರಂತೆ ಈ ವರ್ಗದಲ್ಲಿ ಸ್ಥಾನ ಪಡೆದಿದ್ದ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಮತ್ತು ಮಾಜಿ ನಾಯಕ ರೋಹಿತ್ ಶರ್ಮಾ ಅವರಿಗೆ ಹಿಂಬಡ್ತಿ ನೀಡಲಾಗಿದೆ.

ಪ್ರಸ್ತುತ ಬಿಸಿಸಿಐ ಘೋಷಣೆ ಮಾಡಿರುವ ಆಟಗಾರರ ವಾರ್ಷಿಕ ಒಪ್ಪಂದ ಪಟ್ಟಿಯಲ್ಲಿ ಎ, ಬಿ ಮತ್ತು ಸಿ ವರ್ಗಗಳನ್ನು ಮಾತ್ರ ಉಳಿಸಿಕೊಳ್ಳಲಾಗಿದೆ.

Virat Kohli- Rohit Sharma
Virat Kohli, Rohit Sharma ಗೆ ಬಿಸಿಸಿಐ ಶಾಕ್; ಒಪ್ಪಂದದಲ್ಲಿ ಡಿಮೋಷನ್; ಈಗ ವೇತನ ಎಷ್ಟು ಗೊತ್ತಾ?

ಕೊಹ್ಲಿ-ರೋಹಿತ್ ಶರ್ಮಾಗೆ ಹಿಂಬಡ್ತಿ

ನೂತನ ಒಪ್ಪಂದದಲ್ಲಿ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಎ+ನಿಂದ ಬಿ ವರ್ಗಕ್ಕೆ ಹಿಂಬಡ್ತಿ ನೀಡಲಾಗಿದೆ. ಈ "ಹಿಂಬಡ್ತಿ" ಹೆಚ್ಚಾಗಿ ಅವರ ಪ್ರಸ್ತುತ ಆಟದ ಸ್ಥಿತಿಯ ಪ್ರತಿಬಿಂಬವಾಗಿದ್ದು, ಇಬ್ಬರೂ ಆಟಗಾರರು ಟಿ 20 ಐ ಮತ್ತು ಟೆಸ್ಟ್ ಕ್ರಿಕೆಟ್‌ ಗೆ ಈಗಾಗಲೇ ನಿವೃತ್ತಿ ಘೋಷಣೆ ಮಾಡಿದ್ದಾರೆ. ಪ್ರಾಥಮಿಕವಾಗಿ ಏಕದಿನ ಕ್ರಿಕೆಟ್ ಸ್ವರೂಪದ ಮೇಲೆ ಕೇಂದ್ರೀಕರಿಸಿದ್ದಾರೆ. ಇದೇ ಕಾರಣಕ್ಕಾಗಿ ಅವರಿಗೆ ಹಿಂಬಡ್ತಿ ನೀಡಲಾಗಿದೆ ಎಂದು ಹೇಳಲಾಗಿದೆ.

ಕೊಹ್ಲಿ ಮತ್ತು ರೋಹಿತ್ ಶರ್ಮಾ ಕ್ರಿಕೆಟ್ ನ ಒಂದು ಮಾದರಿಯಲ್ಲಿ ಮಾತ್ರ ದೇಶವನ್ನು ಪ್ರತಿನಿಧಿಸುತ್ತಿದ್ದು, ಇದು ಅವರು ಎ+ ವರ್ಗದಲ್ಲಿ ಸ್ಥಾನ ಪಡೆಯಲು ಅರ್ಹವಾಗಿಲ್ಲ ಎಂದು ಹೇಳಲಾಗಿದೆ.

ಎ ವರ್ಗ

ಬಿಸಿಸಿಐ ಘೋಷಣೆ ಮಾಡಿರುವ ಹೊಸ ವ್ಯವಸ್ಥೆಯಡಿಯಲ್ಲಿ, ಅಗ್ರ ಶ್ರೇಯಾಂಕವು ಈಗ ಗ್ರೂಪ್ ಎ ಆಗಿದ್ದು, ಕ್ರಿಕೆಟ್ ನ ಬಹು ಸ್ವರೂಪಗಳಲ್ಲಿ ಪ್ರಮುಖರಾಗಿ ಉಳಿಯುವ ಅಥವಾ ರಾಷ್ಟ್ರೀಯ ತಂಡವನ್ನು ಮುನ್ನಡೆಸುವ ಆಟಗಾರರಿಗೆ ಈ ವರ್ಗ ಮೀಸಲಾಗಿದೆ. ಈ ವಿಶೇಷ ವರ್ಗದಲ್ಲಿ ಕೇವಲ ಮೂರು ಆಟಗಾರರಿದ್ದು, ನಾಯಕ ಶುಭಮನ್ ಗಿಲ್, ವೇಗಿ ಜಸ್ ಪ್ರೀತ್ ಬುಮ್ರಾ ಮತ್ತು ಆಲ್ರೌಂಡರ್ ರವೀಂದ್ರ ಜಡೇಜಾ ಇದ್ದಾರೆ.

ಉಳಿದಂತೆ ಪರಿಷ್ಕೃತ ಮೂರು ವರ್ಗಗಳ ಆಟಗಾರರ ಪಟ್ಟಿ ಇಂತಿದೆ.

ಗುಂಪು ಎ: ಶುಭಮನ್ ಗಿಲ್, ಜಸ್ಪ್ರಿತ್ ಬುಮ್ರಾ, ರವೀಂದ್ರ ಜಡೇಜಾ.

ಗುಂಪು ಬಿ: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ವಾಷಿಂಗ್ಟನ್ ಸುಂದರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಸಿರಾಜ್, ರಿಷಭ್ ಪಂತ್, ಕುಲದೀಪ್ ಯಾದವ್, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್.

ಗುಂಪು ಸಿ: ಅಕ್ಷರ್ ಪಟೇಲ್, ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಧ್ರುವ್ ಜುರೆಲ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ನಿತೀಶ್ ಕುಮಾರ್ ರೆಡ್ಡಿ, ಅಭಿಷೇಕ್ ಶರ್ಮಾ, ಸಾಯಿ ಸುದರ್ಶನ್, ರವಿ ಬಿಷ್ಣೋಯ್, ರುತುರಾಜ್ ಗಾಯಕ್ವಾಡ್.

ಯಾವ ವರ್ಗಕ್ಕೆ ಎಷ್ಟು ವೇತನ?

ಈ ಪುನರ್ರಚನೆಯು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯ ಹೊಸ ವಿಧಾನವನ್ನು ಎತ್ತಿ ತೋರಿಸುತ್ತದೆ. ಹೊಸ ಪುನಾರ್ರಚನೆಯ ಬಳಿಕ ವಾರ್ಷಿಕ 7 ಕೋಟಿ ರೂ ವೇತನ ಹೊಂದಿದ್ದ A+ ವರ್ಗವನ್ನು ತೆಗೆದು ಹಾಕಲಾಗಿದೆ. ಇನ್ನು ಪರಿಷ್ಕ್ರೃತ ಪುನಾರಚನೆಯ ಗುಂಪುಗಳಡಿಯಲ್ಲಿ ಎ ವರ್ಗಕ್ಕೆ 5 ಕೋಟಿ ರೂ, ಬಿ ವರ್ಗಕ್ಕೆ 3 ಕೋಟಿ ರೂ ಮತ್ತು ಸಿ ವರ್ಗಕ್ಕೆ 1 ಕೋಟಿ ರೂ ವಾರ್ಷಿಕ ವೇತನ ನೀಡಲಾಗುತ್ತಿದೆ.

Virat Kohli- Rohit Sharma
ನಮ್ಮ ಮುಂದೆ ನಡೆಯಲ್ಲ ಬಹಿಷ್ಕಾರದ ಆಟ: ಪಾಕಿಸ್ತಾನದ ಷರತ್ತುಗಳನ್ನು ತಿರಸ್ಕರಿಸಿದ ICC; ಅಡಕತ್ತರಿಯಲ್ಲಿ ಬಾಂಗ್ಲಾ!

ಮಹಿಳಾ ಆಟಗಾರ್ತಿಯರ ಪಟ್ಟಿಯೂ ಬಿಡುಗಡೆ

ಇದೇ ವೇಳೆ ಬಿಸಿಸಿಐ ಮಹಿಳಾ ಆಟಗಾರ್ತಿಯರ ಪಟ್ಟಿಯನ್ನೂ ಬಿಡುಗಡೆ ಮಾಡಿದ್ದು, ಅದರಂತೆ ಎ ವರ್ಗದಲ್ಲಿ 4 ಹಿರಿಯ ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ. ನಾಯಕಿ ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂಧಾನ, ಜಮೀಮಾ ರೋಡ್ರಿಗಸ್ ಮತ್ತು ದೀಪ್ತಿ ಶರ್ಮಾ ಎವರ್ಗದಲ್ಲಿ ಸ್ಥಾನ ಪಡೆದಿದ್ದಾರೆ.

ಬಿ ವರ್ಗದಲ್ಲಿ ಹಿರಿಯ ವೇಗಿ ರೇಣುಕಾ ಠಾಕುರ್, ಶಫಾಲಿ ವರ್ಮಾ, ರಿಚಾ ಘೋಷ್, ಆಲ್ರೌಂಡರ್ ಸ್ನೇಹ್ ರಾಣಾ ಮುಂದುವರೆದಿದ್ದಾರೆ. ಸಿ ವರ್ಗದಲ್ಲಿ ರಾಧಾ ಯಾದವ್, ಅಮನ್ ಜೋತ್ ಕೌರ್, ಪ್ರತೀಕಾ ರಾವಲ್, ಕ್ರಾಂತಿ ಗೌಡ್, ಉಮಾ ಚೇಟ್ರಿ, ಅರುಂಧತಿ ರೆಡ್ಡಿ, ಬೌಲರ್ ಶ್ರೀಚರಣಿ, ಯಾಸ್ತಿಕಾ ಭಾಟಿಯಾ, ಹರ್ಲೀನ್ ಡಿಯೋಲ್, ಕಾಶ್ವಿ ಗೌತಮ್, ಜಿ.ಕಮಲಿನಿ, ವೈಷ್ಣವಿ ಶರ್ಮಾ, ತೇಜಲ್ ಹಸಬ್ನಿಸ್ ಸ್ಥಾನ ಪಡೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com