

ಹೈದರಾಬಾದ್: ಸತತ ಎರಡು ಸೋಲುಗಳಿಂದ ಕಂಗೆಟ್ಟಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸುವ ಮೂಲಕ ಐಪಿಎಲ್ ನಲ್ಲಿ ಖಾತೆ ತೆರೆದಿದೆ.
ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ನಿಗದಿತ ಓವರ್ ನಲ್ಲಿ 142 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಸಾಧಾರಣ ಮೊತ್ತದ ಗುರಿ ಬೆನ್ನಟ್ಟಿದ್ದ ಹೈದರಾಬಾದ್ ತಂಡ ಪರ ಕೇವಲ 59 ಎಸೆತಗಳಲ್ಲಿ ಅಜೇಯ 90 ರನ್ ಗಳಿಸಿ ತಂದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಸನ್ ರೈಸರ್ಸ್ ಹೈದರಾಬಾದ್ ಪರ ಡೇವಿಡ್ ವಾರ್ನರ್ ಅಜೇಯ 90, ಶಿಖರ್ ಧವನ್ 2, ಹೆನ್ರಿಕ್ಸ್ 20, ಮೊರ್ಗನ್ 11 ಹೂಡಾ ಅಜೇಯ 17 ರನ್ ಗಳಿಸಿದ್ದಾರೆ.
ಮುಂಬೈ ಇಂಡಿಯನ್ಸ್ ಪರ ಅಂಬಟ್ಟಿ ರಾಯುಡು 2, ಪಾರ್ಥಿವ್ ಪಟೇಲ್ 10, ರಾಯುಡು 54, ರೋಹಿತ್ ಶರ್ಮಾ 5, ಬಟ್ಲರ್ 11, ಹಾರ್ಧಿಕ್ ಪಾಂಡ್ಯ 2, ಹರ್ಭಜನ್ ಸಿಂಗ್ ಅಜೇಯ 1 ಹಾಗೂ ಕೃನಾಲ್ ಪಾಂಡ್ಯ ಅಜೇಯ 49 ರನ್ ಗಳಿಸಿದ್ದಾರೆ.
ಹೈದರಾಬಾದ್ ಪರ ಬರೀಂದರ್ 3, ಭುವನೇಶ್ವರ್ ಕುಮಾರ್ ಹಾಗೂ ಮುಸ್ತಾಫಿಜೂರ್ ರಹಮನ್ ತಲಾ 1 ವಿಕೆಟ್ ಪಡೆದಿದ್ದಾರೆ.