ಮ್ಯಾಚ್ ಫಿಕ್ಸಿಂಗ್: ಆಫ್ರಿಕಾದ ನಾಲ್ವರು ಆಟಗಾರರಿಗೆ ನಿಷೇಧ

ಮ್ಯಾಚ್ ಫಿಕ್ಸಿಂಗ್ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಾಜಿ ಅಂತಾರಾಷ್ಟ್ರೀಯ ಆಟಗಾರ ಥಮಿ ಸೋಲೆಕಿಲೆ ಸೇರಿದಂತೆ ನಾಲ್ವರು ಕ್ರಿಕೆಟಿಗರ ಮೇಲೆ...
ಆಟಗಾರರು
ಆಟಗಾರರು

ಜೋಹಾನ್ಸ್ ಬರ್ಗ್: ಮ್ಯಾಚ್ ಫಿಕ್ಸಿಂಗ್ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಾಜಿ ಅಂತಾರಾಷ್ಟ್ರೀಯ ಆಟಗಾರ ಥಮಿ ಸೋಲೆಕಿಲೆ ಸೇರಿದಂತೆ ನಾಲ್ವರು ಕ್ರಿಕೆಟಿಗರ ಮೇಲೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ನಿಷೇಧ ಹೇರಿದೆ.

2015ರಲ್ಲಿ ನಡೆದಿದ್ದ ರಾಮ್ ಸ್ಲಾಮ್ ಟಿ20 ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿದ್ದಾರೆ ಎಂಬ ಆರೋಪ ಈ ನಾಲ್ವರ ವಿರುದ್ಧ ಕೇಳಿಬಂದಿತ್ತು. ಇದೀಗ ಆರೋಪ ಸಾಬೀತಾಗಿದ್ದು ಮಾಜಿ ವಿಕೆಟ್ ಕೀಪರ್ ಸೋಲೆಕಿಲೆಗೆ 12 ವರ್ಷ, ಜೇನ್ ಸೈಮೆಸ್ ಗೆ 7 ವರ್ಷ, ಏಥಿ ಮಬಲತಿ ಮತ್ತು ಪುಮೆಲೆಲಾ ಮತ್ ಶಿಕ್ ವಿಗೆ ತಲಾ 10 ವರ್ಷ ನಿಷೇಧ ಹೇರಲಾಗಿದೆ.

ಇದಕ್ಕೂ ಮುನ್ನ 2016ರ ಜನವರಿಯಲ್ಲಿ ಪ್ರೊಟೆಸ್, ಲಯನ್ಸ್ ಮತ್ತು ಟೈಟನ್ಸ್ ತಂಡಗಳ ಮಾಜಿ ಆಟಗಾರ ಗುಲಾಮ್ ಬೋದಿಗೆ 20 ವರ್ಷ ನಿಷೇಧ ಹೇರಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com