ಬಿಸಿಸಿಐ ಎಡವಟ್ಟು; ತಂಡದಲ್ಲಿ ಸ್ಥಾನ ಕಳೆದುಕೊಂಡ 7 ಕಿರಿಯ ಆಟಗಾರರು

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಎಡವಟ್ಟಿನಿಂದ 19 ವಯೋಮಿತಿಯೊಳಗಿನ ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆಯಾಗಿದ್ದ 7 ಕಿರಿಯ...
ಭಾರತ
ಭಾರತ
ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಎಡವಟ್ಟಿನಿಂದ 19 ವಯೋಮಿತಿಯೊಳಗಿನ ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆಯಾಗಿದ್ದ 7 ಕಿರಿಯ ಆಟಗಾರರು ಇದೀಗ ತಂಡದಿಂದ ಹೊರಬಿದ್ದಿದ್ದಾರೆ. 
ಏಷ್ಯಾ ಕ್ರಿಕೆಟ್ ಸಮಿತಿ ಕಳೆದ ವರ್ಷ ಬಿಸಿಸಿಐಗೆ 1-9-1998ರ ನಂತರ ಹುಟ್ಟಿದವರನ್ನು ಏಷ್ಯಾಕಪ್ ಗೆ ಆಯ್ಕೆ ಮಾಡುವಂತೆ ಸೂಚಿಸಿತ್ತು. ಆದರೆ ಈ ಬಗ್ಗೆ ತಪ್ಪು ತಿಳುವಳಿಕೆ ಹೊಂದಿದ್ದ ಬಿಸಿಸಿಐ 1997ನೇ ಇಸವಿಯನ್ನು ಆಯ್ಕೆಗೆ ಗಡವನ್ನಾಗಿ ಪರಿಗಣಿಸಿ 15 ಮಂದಿಯ ತಂಡವನ್ನು ತಿಂಗಳ ಹಿಂದೆಯೇ ಪ್ರಕಟಿಸಿತ್ತು. ಇದೀಗ ತನ್ನ ತಪ್ಪಿನ ಅರಿವಾಗಿ ಬಿಸಿಸಿಐ 7 ಕಿರಿಯ ಆಟಗಾರರಿಗೆ ಕೊಕ್ ಕೊಟ್ಟಿದ್ದು ಬದಲಿ ಆಟಗಾರರನ್ನು ಪ್ರಕಟಿಸಿದೆ. 
ಏಷ್ಯಾಕಪ್ ಟೂರ್ನಿ ಡಿಸೆಂಬರ್ 13ರಿಂದ ಶ್ರೀಲಂಕಾದಲ್ಲಿ ನಡೆಯಲಿದ್ದು ತಂಡದಲ್ಲಿ ಸ್ಥಾನ ಪಡೆದಿದ್ದ ಖುಷಿಯಲ್ಲಿ ಲಂಕಾಕ್ಕೆ ತೆರಳಲು ವೀಸಾಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದ ಆಟಗಾರರು ನಿರಾಸೆಗೊಳಗಾಗಿದ್ದಾರೆ. 
ತಂಡದಿಂದ ಆಡುವ ಅವಕಾಶ ಕಳೆದುಕೊಂಡ ಆಟಗಾರರು
ಸಂದೀಪ್ ತೋಮಾರ್, ದಿಗ್ವಿಜಯ್ ರಂಗಿ, ಡೆರಿಲ್ ಎಸ್ ಫೆರಾರಿಯೋ, ರಿಷಬ್ ಭಗತ್, ಸಿಮರ್ಜಿತ್ ಸಿಂಗ್, ಇಜಾನ್ ಸಯೇದ್, ಚಂದನ್ ಸಾಹಿನಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com