ರಾಹುಲ್, ನಾಯರ್ ಭರ್ಜರಿ ಬ್ಯಾಟಿಂಗ್, ಬೃಹತ್ ಮೊತ್ತ ಪೇರಿಸಿ ಭಾರತ ಡಿಕ್ಲೇರ್!

ಕರ್ನಾಟಕದ ಕೆಎಲ್ ರಾಹುಲ್ ಹಾಗೂ ಕರುಣ್ ನಾಯರ್ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದ ಫಲವಾಗಿ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಭರ್ಜರಿ 759 ರನ್ ಗಳ ಬೃಹತ್ ಮೊತ್ತ ಪೇರಿಸಿದೆ.
ಕ್ರಿಕ್ ಇನ್ಫೋ ಚಿತ್ರ
ಕ್ರಿಕ್ ಇನ್ಫೋ ಚಿತ್ರ

ಚೆನ್ನೈ: ಕರ್ನಾಟಕದ ಕೆಎಲ್ ರಾಹುಲ್ ಹಾಗೂ ಕರುಣ್ ನಾಯರ್ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದ ಫಲವಾಗಿ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಭರ್ಜರಿ 759 ರನ್ ಗಳ ಬೃಹತ್ ಮೊತ್ತ  ಪೇರಿಸಿದೆ.

ಚೆನ್ನೈನ ಚಿಪಾಕ್ ನಲ್ಲಿರುವ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ 4ನೇ ದಿನದಾಟದ ಆರಂಭದಲ್ಲಿ ಕೆಎಲ್ ರಾಹುಲ್ ರನ್ ಹೊಳೆ ಹರಿಸಿದರೆ, ಬಳಿಕ ಬಂದ ಕರುಣ್  ನಾಯರ್ ಕೂಡ ರನ್ ಪ್ರವಾಹವನ್ನೇ ಹರಿಸಿದರು. ಕೆಎಲ್ ರಾಹುಲ್ ಕೇವಲ 1 ರನ್ ಅಂತರದಿಂದ ದ್ವಿಶತಕ ವಂಚಿಕತರಾದರೆ, ತಮಗೆ ಸಿಕ್ಕ ಅವಕಾಶವನ್ನು ಭರ್ಜರಿಯಾಗಿ ಬಳಸಿಕೊಂಡ ನಾಯರ್ ನೋಡ ನೋಡುತ್ತಲೇ ತ್ರಿಶತಕ  ಸಿಡಿಸಿದ ಭಾರತ ಬೃಹತ್ ಮೊತ್ತ ಪೇರಿಸಲು ನೆರವಾದರು.

ಭಾರತ ತಂಡದ ಪರವಾಗಿ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಕೂಡ ತಲಾ ಅರ್ಧಶತಕ ಸಿಡಿಸುವ ಮೂಲಕ ಉತ್ತಮ ಬ್ಯಾಟಿಂಗ್ ಗೆ ನೆರವಾದರು. ಅಂತಿಮವಾಗಿ ಭಾರತ ತಂಡ ಒಟ್ಟು 7 ವಿಕೆಟ್ ಕಳೆದುಕೊಂಡು ಬರೊಬ್ಬರಿ  759 ರನ್ ಸಿಡಿಸಿತು. ಕರುಣ್ ನಾಯರ್ ಬೌಂಡರಿಯೊಂದಿಗೆ ತ್ರಿಶತಕ ಸಿಡಿಸುತ್ತಿದ್ದಂತೆಯೇ ನಾಯಕ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಡಿಕ್ಲೇರ್ ಘೋಷಣೆ ಮಾಡಿದರು. ಇದೀಗ ಇಂಗ್ಲೆಂಡ್ ತಂಡ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದು,  ಇತ್ತೀಚಿನ ವರದಿಗಳು ಬಂದಾಗ ಯಾವುದೇ ವಿಕೆಟ್ ನಷ್ಟವಿಲ್ಲದೇ 12 ರನ್ ಗಳಿಸಿದೆ. ಇಂಗ್ಲೆಂಡ್ ತಂಡದ ಆರಂಭಿಕರಾದ ಕುಕ್ ಅಜೇಯ 3 ರನ್ ಗಳಿಸಿದ್ದು, ಜೆನ್ನಿಂಗ್ಸ್ 9 ರನ್ ಗಳಿಸಿ ಆಟವಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com