
ಟೀಂ ಇಂಡಿಯಾದ ಕೇರಂ ಸ್ಪಿನ್ ಮಾಂತ್ರಿಕ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಕ್ರಮವಾಗಿ ಟಾಪ್ 1 ಟಾಪ್ 2 ಸ್ಥಾನಗಳನ್ನು ಪಡೆದಿದ್ದು ಭಾರತದ ಮಟ್ಟಿಗೆ ಇದು ಅಪರೂಪದ ಸಾಧನೆಯಾಗಿದೆ.
ಟೀಂ ಇಂಡಿಯಾ ಟೆಸ್ಟ್ ಸರಣಿಗಳಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಸರಣಿ ಗೆಲುವಿಗೆ ಕಾರಣವಾಗಿರುವ ಆರ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಟೆಸ್ಟ್ ಬೌಲಿಂಗ್ ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು ಇದೀಗ ಚೆನ್ನೈ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿರುವ ರವೀಂದ್ರ ಜಡೇಜಾ ಪಟ್ಟಿಯಲ್ಲಿ 2 ಸ್ಥಾನಕ್ಕೇರಿದ್ದಾರೆ.
1974ರಲ್ಲಿ ಭಾರತದ ಇಬ್ಬರು ಬೌಲರ್ ಗಳಾದ ಬಿಶನ್ ಬೇಡಿ ಮತ್ತು ಭಾಗವತ್ ಚಂದ್ರಶೇಖರ್ ಅವರು ಬೌಲಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು. ಇವರನ್ನು ಹೊರತು ಪಡಿಸಿ ಇನ್ಯಾವ ಆಟಗಾರರು ಕ್ರಮವಾಗಿ ಟಾಪ್ ಸ್ಥಾನಗಳನ್ನು ಅಲಂಕರಿಸಿರಲಿಲ್ಲ. ಆದರೆ ಇದೀಗ ಅಶ್ವಿನ್ ಮತ್ತು ಜಡೇಜಾ ಈಗ ಅಂತ ಅದ್ಭುತ ಸಾಧನೆ ಮಾಡಿದ್ದಾರೆ.
ಇಂಗ್ಲೇಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅಶ್ವಿನ್ 30.25ರ ಸರಾಸರಿಯಲ್ಲಿ 28 ವಿಕೆಟ್ ಗಳನ್ನು ಪಡೆದಿದ್ದರೆ, ಜಡೇಜಾ 25.84ರ ಸರಾಸರಿಯಲ್ಲಿ 26 ವಿಕೆಟ್ ಗಳನ್ನು ಪಡೆದಿದ್ದಾರೆ. ಒಟ್ಟಾರೆ ಸರಣಿಯಲ್ಲಿ ಇಂಗ್ಲೆಂಡ್ ನ 93 ವಿಕೆಟ್ ಗಳು ಹುರುಳಿದ್ದರೆ ಅದರಲ್ಲಿ 54 ವಿಕೆಟ್ ಗಳನ್ನು ಈ ಇಬ್ಬರು ಆಟಗಾರರೇ ಪಡೆದಿದ್ದಾರೆ.
Advertisement